ಚತ್ತೋಗ್ರಾಮ್: ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪುಜಾರ ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ (IND VS BAN) ಎರಡನೇ ಇನ್ನಿಂಗ್ಸ್‌ನಲ್ಲಿ ಪೂಜಾರ ತಮ್ಮ ಟೆಸ್ಟ್ ವೃತ್ತಿಜೀವನದ ಅತಿ ವೇಗದ ಶತಕ ಸಿಡಿಸಿ 1,443 ದಿನಗಳ ಬಳಿಕ ತಮ್ಮ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ.
ಆರಂಭದಲ್ಲಿ ಶುಭಮನ್ ಗಿಲ್(110) ಶತಕ ಬಾರಿಸಿದರೆ ಬಳಿಕ ಪೂಜಾರ ಕೂಡ ತಮ್ಮ ರನ್ ಗಳಿಕೆಗೆ ವೇಗ ನೀಡಿ ಶತಕ ಬಾರಿಸಿದರು. ಉಭಯ ಆಟಗಾರರ ಈ ಶತಕದ ಆಟದಿಂದ ಭಾರತ ದ್ವಿತೀಯ ಇನಿಂಗ್ಸ್ನಲ್ಲಿ 258 ರನ್ಗಳಿಸಿ ಡಿಕ್ಲೇರ್ ಮಾಡಿತು. ಈ ಮೂಲಕ ಎದುರಾಳಿ ಬಾಂಗ್ಲಾದೇಶಕ್ಕೆ 512 ರನ್ಗಳ ಟಾರ್ಗೆಟ್ ನೀಡಿದೆ.
ಮೊದಲ ಇನಿಂಗ್ಸ್ನಲ್ಲಿ ಉತ್ತಮ ಆಟ
ಈ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಶತಕದಂಚಿನಲ್ಲಿ ಎಡವಿದ್ದ ಪೂಜಾರ 90 ರನ್ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದರು. ಆದರೆ ಎರಡನೇ ಇನಿಂಗ್ಸ್ನಲ್ಲಿ ಆರಂಭದಲ್ಲಿ ಎಚ್ಚರಿಕೆ ಆಡವಾಡಿ ಅರ್ಧಶತಕವನ್ನು ಪೂರೈಸಿದರು. ಬಳಿಕ ಬಿರುಸಿನ ಆಟವಾಡಿದ ಅವರು ಅರ್ಧ ಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ 2019ರ ನಂತರ ತಮ್ಮ ಮೊದಲ ಟೆಸ್ಟ್ ಶತಕ ದಾಖಲಿಸಿದರು.
ಪೂಜಾರ ಈ ಇನಿಂಗ್ಸ್ನಲ್ಲಿ ಒಟ್ಟು 130 ಎಸೆತಗಳಲ್ಲಿ 13 ಬೌಂಡರಿ ಸಹಿತ ಅಜೇಯ 102 ರನ್ ಗಳಿಸಿದರು. ಈ ಶತಕದ ಮೂಲಕ ಪೂಜಾರ 52 ಇನಿಂಗ್ಸ್‌ಗಳ ನಂತರ ತಮ್ಮ ಶತಕದ ಬರ ನೀಗಿಸಿಕೊಂಡಿದ್ದಾರೆ. ಅಲ್ಲದೆ ಇದು ಅವರ ಟೆಸ್ಟ್ ವೃತ್ತಿ ಬದುಕಿನ 19ನೇ ಶತಕವೂ ಆಗಿದೆ. ಕೊನೆಯದಾಗಿ 2019 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೂಜಾರ ಶತಕ ಬಾರಿಸಿದ್ದರು.
ಇದನ್ನೂ ಓದಿ | INDvsBAN | 258 ರನ್ಗಳಿಗೆ ಡಿಕ್ಲೇರ್ ಮಾಡಿದ ಭಾರತ; ಬಾಂಗ್ಲಾಗೆ 513 ರನ್ ಗೆಲುವಿನ ಗುರಿ