ಢಾಕಾ: ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಸೋತರೂ ತಂಡದ ನಾಯಕ ರೋಹಿತ್ ಶರ್ಮಾ ಅವರು ನಡೆಸಿದ ಬ್ಯಾಟಿಂಗ್ ಹೋರಾಟವನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಡ್ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಅವರು ಇಂಜೆಕ್ಷನ್ ಚುಚ್ಚಿಕೊಂಡು ಆಡಿದ್ದು ಅವರ ಬದ್ದತೆಯನ್ನು ತೋರಿಸುತ್ತದೆ. ಅವರ ಈ ಸಾಹಸಕ್ಕೆ ನಿಜವಾಗಿಯೂ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.
ಹೆಬ್ಬೆರಳಿನ ಗಾಯದ ಹೊರತಾಗಿಯೂ ರೋಹಿತ್ ಶರ್ಮಾ ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದು ಕೇವಲ 28 ಎಸೆತಗಳಲ್ಲಿ ಅಜೇಯ 51 ರನ್ ಸಿಡಿಸಿದ್ದರು. ಆ ಮೂಲಕ ಭಾರತ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ ಅಂತಿಮವಾಗಿ ಭಾರತ ತಂಡ ಕೇವಲ 5 ರನ್ ಅಂತರದಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು.
ಗಾಯಗೊಂಡಿರುವ ರೋಹಿತ್ ಶರ್ಮ ಅಂತಿಮ ಏಕ ದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ನಾಯಕತ್ವ ವಹಿಸಲಿದ್ದಾರೆ. ಜತೆಗೆ ಟೆಸ್ಟ್ ಪಂದ್ಯಕ್ಕೂ ರೋಹಿತ್ ಆಡುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ | INDvsBAN | ರೋಹಿತ್ ಶರ್ಮ ಯಾಕೆ ಮೊದಲೇ ಬ್ಯಾಟ್ ಮಾಡಲು ಬರಲಿಲ್ಲ, ಮಾಜಿ ಕ್ರಿಕೆಟಿಗನ ಪ್ರಶ್ನೆ