ಢಾಕಾ: ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿರುವ ಭಾರತ ತಂಡ ಬಾಂಗ್ಲಾ(IND VS BAN) ವಿರುದ್ಧ ದ್ವಿತೀಯ ಪಂದ್ಯನ್ನಾಡಲು ಸಜ್ಜಾಗಿದೆ. ಸರಣಿ ಆಸೆ ಜೀವಂತವಿರಿಸಬೇಕಿದ್ದರೆ ರೋಹಿತ್ ಪಡೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಾಡಕ್ಕೆ ಸಿಲುಕಿದೆ. ಇದಕ್ಕೂ ಮುನ್ನ ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿಯ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಪಿಚ್ ರಿಪೋರ್ಟ್
ಢಾಕಾದ ಶೇರ್ ಬಾಂಗ್ಲಾ ಮೈದಾನ ಹೆಚ್ಚಾಗಿ ಸ್ಪಿನ್ ಬೌಲರ್ಗಳಿಗೆ ನೆರವು ನೀಡಲಿದೆ. ಇದಕ್ಕೆ ಮೊದಲ ಪಂದ್ಯವೇ ಸಾಕ್ಷಿ. ಉಭಯ ತಂಡಗಳ ಸ್ಪಿನ್ನರ್‌ಗಳೇ ಇಲ್ಲಿ ಹೆಚ್ಚು ವಿಕೆಟ್ ಉರುಳಿಸಿದ್ದರು. ಅದರಂತೆ ಈ ಪಂದ್ಯದಲ್ಲಿಯೂ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಆದ್ದರಿಂದ ಇತ್ತಂಡಗಳು ಹೆಚ್ಚಾಗಿ ಸ್ಪಿನ್ ಅಸ್ತ್ರವನ್ನು ಬಳಸಬಹುದು. ಇನ್ನು ಸಂಜೆಯ ವೇಳೆ ಇಬ್ಬನಿ ಬೀಳುವ ಕಾರಣ ಚೇಸಿಂಗ್ ಮಾಡುವ ತಂಡಕ್ಕೆ ಅಧಿಕ ಲಾಭವಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಮಳೆ ಭೀತಿ ಇಲ್ಲ
ಈ ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಮೀರ್‌ಪುರದಲ್ಲಿ ತಂಪಾದ ವಾತಾವರಣ ಇರಲಿದೆ. ಇದರಿಂದ ಸಂಜೆಯ ವೇಳೆಗೆ ಇಬ್ಬನಿ ಕಾಟ ಕೊಂಚ ಅಧಿಕವಾಗಿರಲಿದೆ. ಪಂದ್ಯ ಆರಂಭದ ವೇಳೆ ತಾಪಮಾನ 29ರಿಂದ 30 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ | INDvsBAN | ನಿಧಾನಗತಿಯಲ್ಲಿ ಓವರ್ ಮುಗಿಸಿದ ಟೀಮ್ ಇಂಡಿಯಾಗೆ ಬಿತ್ತು ದಂಡದ ಬರೆ