ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ದ್ವಿಶತಕ ಬಾರಿಸಿ ಮೆರೆದಾಡಿದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಭಾರತ ತಂಡದಲ್ಲಿ ಗಾಯಾಳು ರೋಹಿತ್ ಬದಲಿಗೆ ಆಡಲಿಳಿದ ಇಶಾನ್ ಕಿಶನ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ 131 ಎಸೆತದಿಂದ 10 ಸಿಕ್ಸರ್ ಮತ್ತು 24 ಬೌಂಡರಿ ನೆರವಿನಿಂದ 210 ರನ್ ಗೆ ಔಟಾದರು. ಈ ಮೂಲಕ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವೀರೆಂದ್ರ ಸೆಹವಾಗ್, ಮಾರ್ಟಿನ್ ಗಪ್ಟಿಲ್ ಮತ್ತು ಗೇಲ್ ಅವರ ದಾಖಲೆಯ ಸಾಲಿಗೆ ಸೇರಿದರು.
ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ ಇಶಾನ್ 85 ಎಸೆತಗಳಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿದರು. ಆದರೆ ನಂತರ ಮನಬಂದಂತೆ ಬ್ಯಾಟ್ ಬೀಸಿದ ಅವರು 126 ಎಸೆತದಲ್ಲಿ ದ್ವಿಶತಕದ ಗಡಿ ದಾಟಿದರು.
ಇದನ್ನೂ ಓದಿ | Team India | ಮೊಹಮ್ಮದ್ ಶಮಿ ಸ್ಥಾನ ತುಂಬಲು ತ್ರಿಕೋನ ಸ್ಪರ್ಧೆ, ಯಾರಿಗೆ ಸಿಗಲಿದ ಅವಕಾಶ?