Site icon Vistara News

IND VS BAN | ಮೆಹದಿ ಹಸನ್​ ಎಸೆತದಲ್ಲಿ 100 ಮೀಟರ್​ ದೂರ ಸಿಕ್ಸರ್​ ಸಿಡಿಸಿದ ಉಮೇಶ್​ ಯಾದವ್​!

umesh yadav

ಚತ್ತೋಗ್ರಾಮ್​: ಬಾಂಗ್ಲಾದೇಶ(IND VS BAN) ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ವೇಗಿ ಉಮೇಶ್​ ಯಾದವ್​ 100 ಮೀಟರ್​ ದೂರ ಸಿಕ್ಸರ್​ ಸಿಡಿಸಿ ಬಾಂಗ್ಲಾ ಆಟಗಾರರನ್ನು ಬೆರಗಾಗುವಂತೆ ಮಾಡಿದ್ದಾರೆ. ಉಮೇಶ್​ ಬಾರಿಸಿದ ಈ ಸಿಕ್ಸರ್​ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆರ್​. ಅಶ್ವಿನ್​ ವಿಕೆಟ್​ ಪತನದ ಬಳಿಕ ಕ್ರೀಸ್‌ಗೆ ಬಂದ ಉಮೇಶ್​ ಯಾದವ್​ ತಾವು ಎದುರಿಸಿದ ಎರಡನೇ ಎಸೆತದಲ್ಲೇ ಆಫ್‌ ಸ್ಪಿನ್ನರ್‌ ಮೆಹದಿ ಹಸನ್‌ಗೆ ಸಿಕ್ಸರ್​ ರುಚಿ ತೋರಿಸಿದ್ದಾರೆ. ಈ ಸಿಕ್ಸರ್​ 100 ಮೀ. ದೂರಕ್ಕೆ ಚಿಮ್ಮಿದನ್ನು ಕಂಡ ಬಾಂಗ್ಲಾ ಆಟಗಾರರು ಒಂದು ಕ್ಷಣ ಬೆರಗಾದರು. ಉಮೇಶ್‌ ಅವರ ಈ ಸಾಮರ್ಥ್ಯಕ್ಕೆ ಕ್ರಿಕೆಟ್‌ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹು ದಿನಗಳ ಬಳಿಕ ಕ್ರಿಕೆಟ್​ ಆಡುತಿದ್ದರೂ ಇಷ್ಟು ಲಿಲಾಜಾಲವಾಗಿ ಸಿಕ್ಸರ್​ ಬಾರಿಸಿದ್ದು ನಿಜವಾಗಿಯೂ ಶ್ರೇಷ್ಠ ಎಂದು ಶ್ಲಾಘಿಸಿದ್ದಾರೆ. ಇನ್ನು ಒಟ್ಟು 2 ಸಿಕ್ಸರ್​ ಬಾರಿಸಿದ ಉಮೇಶ್​ ಯಾದವ್​ 15 ರನ್ ​ಗಳಿಸಿ ಅಜೇಯರಾಗಿ ಉಳಿದರು.

ಭಾರತ ಮೊದಲ ಇನಿಂಗ್ಸ್​ನಲ್ಲಿ 404 ರನ್​ ಗಳಿಸಿ ಸವಾಲೊಡ್ಡಿದೆ. ಗುರಿ ಬೆನ್ನಟ್ಟಿದ ಬಾಂಗ್ಲಾ 133ಕ್ಕೆ 8 ವಿಕೆಟ್​ ಕಳೆದುಕೊಂಡು ಬ್ಯಾಟಿಂಗ್​ ಕಾಯ್ದುಕೊಂಡಿದೆ. 4 ಪರ ಮೆಹದಿ ಹಸನ್ 112 ರನ್​ಗೆ 4 ವಿಕೆಟ್‌ ಕಿತ್ತು ಮಿಂಚಿದರು. ಉಳಿದಂತೆ ಭಾರತದ ಬೌಲರ್​ಗಳಾದ ಕುಲ್​ದೀಪ್​ ಯಾದವ್​(4), ಮೊಹಮ್ಮದ್​ ಸಿರಾಜ್​(3) ವಿಕೆಟ್​ ಉರುಳಿಸಿದ್ದಾರೆ.

ಇದನ್ನೂ ಓದಿ | IND VS BAN | ಕೆಣಕಿದ ಲಿಟನ್​ ದಾಸ್​ಗೆ ಮರು ಎಸೆತದಲ್ಲೇ ಪೆವಿಲಿಯನ್​ ದಾರಿ ತೋರಿಸಿದ ಸಿರಾಜ್​!

Exit mobile version