ಢಾಕಾ: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನೂತನ ಮೈಲುಗಲ್ಲೊಂದನ್ನು ಸ್ಥಾಪಿಸಿದ್ದಾರೆ. 2022ರ ಸಾಲಿನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಕಿತ್ತ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಢಾಕಾದಲ್ಲಿ ನಡೆಯುತ್ತಿರುವ ದ್ವಿತೀಯ ಏಕ ದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು ಆರಂಭಿಕ ಬ್ಯಾಟರ್ ಅನಾಮುಲ್ ಹಕ್ ಮತ್ತು ಲಿಟನ್ ದಾಸ್ ಅವರ ವಿಕೆಟ್ ಕೀಳುವ ಮೂಲಕ 2022ರ ಸಾಲಿನಲ್ಲಿ ಭಾರತದ ಪರ ಅತಿ ಹೆಚ್ಚು ಏಕ ದಿನ ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್(21 ವಿಕೆಟ್) ಅವರ ದಾಖಲೆಯನ್ನು ಹಿಂದಿಕ್ಕಿದರು. ಸದ್ಯ ಸಿರಾಜ್ 14 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆದಿದ್ದಾರೆ.
2022ರಲ್ಲಿ ಏಕ ದಿನ ಪಂದ್ಯಗಳಲ್ಲಿ ಭಾರತದ ಪರ ಅಗ್ರ ವಿಕೆಟ್ ಪಡೆದ ಆಟಗಾರರು
ಆಟಗಾರ | ಪಂದ್ಯ | ವಿಕೆಟ್ |
ಮೊಹಮ್ಮದ್ ಸಿರಾಜ್ | 14 | 23 |
ಯಜುವೇಂದ್ರ ಚಹಲ್ | 14 | 21 |
ಪ್ರಸಿದ್ಧ್ ಕೃಷ್ಣ | 11 | 21 |
ಶಾರ್ದೂಲ್ ಠಾಕೂರ್ | 15 | 19 |
ಇದನ್ನೂ ಓದಿ | IND VS BAN | ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ; ಭಾರತಕ್ಕೆ ಬೌಲಿಂಗ್ ಆಹ್ವಾನ