ಚತ್ತೋಗ್ರಾಮ್: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಬಾಂಗ್ಲಾದೇಶ(IND VS BAN) ಊಟದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 119 ರನ್ ಗಳಿಸಿದೆ. ಈ ಮೂಲಕ ಭಾರತ ನೀಡಿದ 513 ರನ್ ಗುರಿಯನ್ನು ಯಶಸ್ವಿಯಾಗಿ ಹಿಂಬಾಲಿಸುತ್ತಿದೆ.
42 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ ತಂಡಕ್ಕೆ ಆರಂಭಿಕರಾದ ನಜ್ಮುಲ್ ಹುಸೇನ್ ಶಾಂಟೊ (64*) ಹಾಗೂ ಝಕಿರ್ ಹಸನ್ (55*) ಎಚ್ಚರಿಕೆಯ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಬಾಂಗ್ಲಾದೇಶ ತಂಡದ ಗೆಲುವಿಗೆ ಇನ್ನೂ 394 ರನ್ ಅಗತ್ಯವಿದೆ.
ಇದಕ್ಕೂ ಮುನ್ನ ಮೂರನೇ ದಿನವಾದ ಶುಕ್ರವಾರ ಬಾಂಗ್ಲಾದೇಶ ತಂಡವನ್ನು 150ಕ್ಕೆ ಆಲ್‌ಔಟ್ ಮಾಡುವ ಮೂಲಕ 254 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ, 61.4 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಡಿಕ್ಲೆರ್ ಮಾಡಿಕೊಂಡಿತು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 513 ರನ್‌ಗಳ ಬೃಹತ್ ಗುರಿ ನೀಡಿತ್ತು.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧ ಐದು ವಿಕೆಟ್ ಕಿತ್ತು ಅಶ್ವಿನ್, ಕುಂಬ್ಳೆ ದಾಖಲೆ ಮುರಿದ ಕುಲ್ದೀಪ್ ಯಾದವ್