ಢಾಕಾ: ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಕದನ ಗುರುವಾರ ಆರಂಭವಾಗಲಿದೆ. ಈಗಾಗಲೇ ಮೊದಲ ಪಂದ್ಯವನ್ನು ಸೋತಿರುವ ಆತಿಥೇಯ ಬಾಂಗ್ಲಾಕ್ಕೆ ತವರಿನಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಲು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಉಭಯ ತಂಡಗಳ ಸಂಭಾವ್ಯ ತಂಡಗಳ ಮಾಹಿತಿ ಈ ಕೆಳಗಿನಂತಿದೆ.
ಪಿಚ್ ರಿಪೋರ್ಟ್
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬೌಲಿಂಗ್ ಸ್ನೇಹಿಯಾಗಿದೆ. ಕಳೆದ ಏಕದಿನ ಸರಣಿಯಲ್ಲಿ ಇಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 150 ಗಡಿ ದಾಟಲು ಪರದಾಡಿತ್ತು. ಇದೀಗ ಟೆಸ್ಟ್ ಪಂದ್ಯದಲ್ಲಿಯೂ ಬೌಲರ್ಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಆದ್ದರಿಂದ ಇಲ್ಲಿ 5 ದಿನಗಳ ಆಟವನ್ನು ನಿರೀಕ್ಷಿಸುವುದು ಕಷ್ಟಸಾಧ್ಯ ಎನ್ನಲಡ್ಡಿಯಿಲ್ಲ. ಸ್ಪಿನ್ ಬೌಲರ್ಗಳಿಗೆ ಇದು ಹೆಚ್ಚು ನೆರವು ನೀಡುವುದರಿಂದ ಇತ್ತಂಡಗಳು ಸ್ಪಿನ್ನರ್ಗಳಿಗೆ ಪಾಮುಖ್ಯತೆ ನೀಡುವ ಸಾಧ್ಯತೆ ಇದೆ.
ಸಂಭಾವ್ಯ ತಂಡ
ಭಾರತ: ಕೆ.ಎಲ್. ರಾಹುಲ್(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಆರ್. ಅಶ್ವಿನ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್/ ಜೈದೇವ್ ಉನಾದ್ಕತ್
ಬಾಂಗ್ಲಾದೇಶ: ಶಕಿಬ್ ಅಲ್ ಹಸನ್ (ನಾಯಕ), ಮಹ್ಮದುಲ್ಲ ಹಸನ್ ಜಾಯ್, ಝಾಕಿರ್ ಹಸನ್ ನಜ್ಮುಲ್ ಹುಸೇನ್, ಮೊಮಿನುಲ್ ಹಕ್, ಯಾಸಿರ್ ಅಲಿ, ಮುಶ್ಫಿಕರ್ ರಹೀಂ, ಲಿಟನ್ ದಾಸ್, ನುರುಲ್ ಹಸನ್, ಮೆಹೆದಿ ಹಸನ್ ಮಿರಾಜ್, ತೈಜುಲ್ ಇಸ್ಲಾಮ್.
ಇದನ್ನೂ ಓದಿ | IND VS BAN | ಡಾನ್ ಬ್ರಾಡ್ಮನ್ ದಾಖಲೆ ಮುರಿಯುವ ಸನಿಹದಲ್ಲಿ ಚೇತೇಶ್ವರ್ ಪೂಜಾರ!