Site icon Vistara News

IND vs BAN: ಕೊಹ್ಲಿಗೆ ಶತಕ ಬಾರಿಸಲು ಒಪ್ಪಿಸಿದ್ದೇ ರಾಹುಲ್​; ಪಂದ್ಯದ ಬಳಿಕ ರಿವೀಲ್

KL Rahul

ಪುಣೆ: ಬಾಂಗ್ಲಾ(IND vs BAN) ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಶತಕ ಬಾರಿಸಲು ನೆರವಾದ ಕನ್ನಡಿಗ ಕೆ.ಎಲ್​ ರಾಹುಲ್​ ಎಲ್ಲರ ಮನಗೆದ್ದಿದ್ದಾರೆ. ಕೊಹ್ಲಿ ಅಭಿಮಾನಿಗಳು ರಾಹುಲ್​ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಾರ್ದಿಕ್​ ಪಾಂಡ್ಯ ಅವರಿಗೆ ಕೆಲ ನೆಟ್ಟಿಗರು ಈ ಗುಣವನ್ನು ನೋಡಿ ಕಲಿಯುವಂತೆ ಸಲಹೆ ನೀಡಿದ್ದಾರೆ. ಆದರೆ ಈ ಶತಕ ಬಾರಿಸಲು ಕೊಹ್ಲಿಯನ್ನು ಒಪ್ಪಿಸಿದ ಪರಿಯನ್ನು ರಾಹುಲ್​ ಪಂದ್ಯದ ಬಳಿಕ ರಿವೀಲ್​ ಮಾಡಿದ್ದಾರೆ.

ವಿರಾಟ್​ ಕೊಹ್ಲಿಗೆ ಶತಕ ಬಾರಿಸಲು ಮತ್ತು ತಂಡ ಗೆಲುವಿಗೆ ಕೇವಲ 20 ರನ್​ಗ ಅಗತ್ಯವಿತ್ತು. ಈ ವೇಳೆ ರಾಹುಲ್​ ಅವರು ಒಂದು ಬೌಂಡರಿ ಅಥವಾ ರನ್​ ಗಳಿದರೂ ಕೊಹ್ಲಿಗೆ ಶತಕ ತಪ್ಪುತ್ತದೆ. ಇದೇ ಕಾರಣಕ್ಕೆ ರಾಹುಲ್​ ಅವರು ಒಂದೂ ರನ್​ ಮಾಡದೆ ಕೊಹ್ಲಿಗೆ ಈ ರನ್​ ಬಾರಿಸಲು ಅವಕಾಶ ನೀಡಿ ಶತಕ ಪೂರ್ತಿಗೊಳ್ಳುವಂತೆ ಮಾಡಿದರು. ಆದರೆ ಕೊಹ್ಲಿಯನ್ನು ಶತಕ ಬಾರಿಸುವಂತೆ ಒತ್ತಾಯಿಸಿದ ರೀತಿಯನ್ನು ರಾಹುಲ್​ ಪಂದ್ಯದ ಬಳಿಕ ರಿವಿಲ್ ಮಾಡಿದ್ದಾರೆ.

ವೈಯಕ್ತಿಕ ದಾಖಲೆ ಬೇಡ

ಪಂದ್ಯದ ಬಳಿಕ ಮಾತನಾಡಿದ ರಾಹುಲ್​ ಅವರು, ನಾನು ಕೊಹ್ಲಿ ಜತೆ ಸಿಂಗಲ್ ತೆಗೆದುಕೊಳ್ಳುವುದು ಬೇಡವೆಂದು ಹೇಳಿದೆ. ಆದರೆ ವಿರಾಟ್ ಕೊಹ್ಲಿ ಇದಕ್ಕೆ ಒಪ್ಪಲಿಲ್ಲ. ಸಿಂಗಲ್ ತೆಗೆದುಕೊಳ್ಳದಿದ್ದರೆ ಜನರು ನನ್ನನ್ನು ಕೆಟ್ಟದ್ದಾಗಿ ನೋಡುತ್ತಾರೆ. ಈ ರೀತಿ ಮಾಡುವ ಮೂಲಕ ನಾನು ನನ್ನ ವೈಯಕ್ತಿಕ ದಾಖಲೆಗಾಗಿ ಆಡುತ್ತಿದ್ದೇನೆ ಎಂದು ಜನರು ಹೇಳಿಕೊಳ್ಳುತ್ತಾರೆ ಎಂದು ಕೊಹ್ಲಿ ಹೇಳಿದ್ದರು. ಆದರೆ ನಾನು ವಿರಾಟ್​ ಅವರನ್ನು ಸಮಾಧಾನ ಪಡಿಸಿ, ಪಂದ್ಯ ಹೇಗಿದ್ದರೂ ನಾವು ಸುಲಭ ಗೆಲ್ಲುತ್ತೇವೆ ನೀವೂ ಶತಕ ಪೂರೈಸಲೇ ಬೇಕು ಎಂದು ಹೇಳಿದೆ ಒಲ್ಲದ ಮನಸ್ಸಿನಿಂದಲೇ ವಿರಾಟ್ ಕೊಹ್ಲಿ ನನ್ನ ಮಾತುಗಳನ್ನು ಒಪ್ಪಿಕೊಂಡರು. ಇದಾದ ಬಳಿಕ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದರು” ಎಂದು ಕೆಎಲ್​ ರಾಹುಲ್​ ಹೇಳಿದರು.

ರಾಹುಲ್ ಅವರು ವಿರಾಟ್​ಗೆ ಶತಕ ಪೂರ್ತಿಗೊಳಿಸಲು ನೆರವಾದ ಕಾರಣ ಕೊಹ್ಲಿ ಅಭಿಮಾನಿಗಳು ರಾಹುಲ್​ ಅವರ ಗುಣವನ್ನು ಕೊಂಡಾಡಿದ್ದಾರೆ. ಅಲ್ಲದೆ ಸಮಾಜಿಕ ಜಾಲತಾಣದಲ್ಲಿಯೂ ರಾಹುಲ್​ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಹಾರ್ದಿಕ್​ ಪಾಂಡ್ಯ ಅವರಿಗೆ ಕೆಲ ನೆಟ್ಟಿಗರು ಬುದ್ಧಿವಾದ ಹೇಳಿದ್ದಾರೆ.

ಇದನ್ನೂ ಓದಿ Virat Kohli: ಸಚಿನ್ ದಾಖಲೆ ಮುರಿದು ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ

ಹಾರ್ದಿಕ್​ ಪಾಂಡ್ಯ ಅವರು ಈ ಹಿಂದೆ ತಿಲಕ್​ ವರ್ಮ ಅವರಿಗೆ ಅರ್ಧಶತಕ ಮತ್ತು ವಿಶ್ವಕಪ್​ನ ಮೊದಲ ಪಂದ್ಯವಾದ ಆಸೀಸ್​ ವಿರುದ್ಧ ರಾಹುಲ್​ಗೆ ಶತಕ ಬಾರಿಸುವ ಅವಕಾಶ ಇದ್ದಾಗ ಇದನ್ನು ಸಿಕ್ಸರ್​ ಬಾರಿಸಿ ತಪ್ಪಿಸಿದ್ದರು. ಈ ವೇಳೆ ಪಾಂಡ್ಯ ಅವರನ್ನು ಸ್ವಾರ್ಥಿ ಎಂದು ನೆಟ್ಟಿಗರು ಕರೆದಿದ್ದರು. ಇದೀಗ ಕೊಹ್ಲಿಗೆ ಶತಕ ಬಾರಿಸಲು ರಾಹುಲ್​ ಮಾಡಿದ ತ್ಯಾಗವನ್ನು ನೋಡಿ ಪಾಂಡ್ಯಗೆ ಈ ರೀತಿಯ ಗುಣವನ್ನು ಬೆಳಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

Exit mobile version