ಚತ್ತೋಗ್ರಾಮ್: ಬಾಂಗ್ಲಾದೇಶ(IND VS BAN) ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪುಜಾರ(90) ಮತ್ತು ಶ್ರೇಯಸ್ ಅಯ್ಯರ್(ಅಜೇಯ 82) ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟದಲ್ಲಿ 278 ರನ್ ಗಳಿಸಿದೆ. ಆದರೆ ಈ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಶ್ರೇಯಸ್ ಅಯ್ಯರ್ ಪಡೆದ ಒಂದು ಜೀವದಾನದ ವಿಡಿಯೊ ಇದೀಗ ವೈರಲ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ನಿರೀಕ್ಷಿತ ಮಟ್ಟದ ಆರಂಭ ಸಿಗಲಿಲ್ಲ. ಈ ವೇಳೆ ತಂಡಕ್ಕೆ ಆಸರೆಯಾದ ಚೇತೇಶ್ವರ್ ಪೂಜಾರ ಮತ್ತು ಶ್ರೇಯಸ್ ಅಯ್ಯರ್ ಶತಕದ ಜತೆಯಾಟ ನಡೆಸುವ ಮೂಲಕ ಆಸರೆಯಾದರು.
ಆದರೆ ದಿನದ 84ನೇ ಓವರ್ನಲ್ಲಿ ವೇಗಿ ಇಬಾದತ್ ಹುಸೇನ್ ಎಸೆದ ಓವರ್ನಲ್ಲಿ ಶ್ರೇಯಸ್ ಕ್ಲೀನ್ ಬೌಲ್ಡ್ ಆಗಿದ್ದರು. ಇನ್ಸ್ವಿಂಗ್ ಎಸೆತ ನಿರೀಕ್ಷತ ಮಟ್ಟದ ಬೌನ್ಸ್ ಪಡೆಯದೆ ಒಳ ನುಗ್ಗಿ ಆಫ್ ಸ್ಟಂಪ್ಗೆ ಬಡಿದಿತ್ತು. ಇದೇ ವೇಳೆ ಸ್ಟಂಪ್ನಲ್ಲಿದ್ದ ಎಲ್ಇಡಿ ಲೈಟ್ ಹೊತ್ತಿದ್ದನ್ನು ಕಂಡ ಬಾಂಗ್ಲಾ ಆಟಗಾರರು ವಿಕೆಟ್ ಪಡೆದ ಖಷಿಯಲ್ಲಿ ಸಂಭ್ರಮ ಆಚರಿಸಿದ್ದಾರೆ. ಆದರೆ ಬೇಲ್ಸ್ ಕೆಳಗೆ ಬೀಳದ ಕಾರಣ ಶ್ರೇಯಸ್ ಜೀವದಾನ ಪಡೆದಿದ್ದಾರೆ. ಇದೇ ವೇಳೆ ವಿಕೆಟ್ ಬಳಿ ಬಂದ ಬಾಂಗ್ಲಾ ಆಟಗಾರರು ಬೇಲ್ಸ್ ಬೀಳದನ್ನು ಕಂಡು ನಿಬ್ಬೆರಗಾದರೂ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | IND VS BAN| ತಂಡಕ್ಕೆ ಅಚ್ಚರಿಯ ಕರೆ ಬಂದರೂ ವೀಸಾ ಸಮಸ್ಯೆಯಿಂದ ಮೊದಲ ಟೆಸ್ಟ್ಗೆ ಅಲಭ್ಯರಾದ ಉನಾದ್ಕತ್