Site icon Vistara News

IND VS BAN | ಲಿಟ್ಟನ್ ದಾಸ್ ಅದ್ಭುತ ಕ್ಯಾಚ್​ಗೆ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ

Litton Das

ಢಾಕಾ: ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 186 ರನ್​ಗೆ ಕುಸಿದಿದೆ. ಆದರೆ ಈ ಪಂದ್ಯದಲ್ಲಿ ಬಾಂಗ್ಲಾ ನಾಯಕ ಲಿಟ್ಟನ್ ದಾಸ್ ಅವರು ಹಿಡಿದ ವಿರಾಟ್​ ಕೊಹ್ಲಿಯ ಅದ್ಭುತ ಕ್ಯಾಚ್ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಜತೆಗೆ ಕ್ರೀಸ್​ನಲ್ಲಿದ್ದ ವಿರಾಟ್ ಕೊಹ್ಲಿಯೂ ಇದನ್ನೂ ಕಂಡು ಒಂದು ಕ್ಷಣ ಶಾಕ್ ಆದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಾಂಗ್ಲಾದೇಶ ಈ ಪಂದ್ಯದಲ್ಲಿ ಗೆಲ್ಲಲು 187ರನ್​ಗಳ ಗುರಿ ಪಡೆದಿದೆ.

ಶಕೀಬ್ ಹಸನ್​ ಅವರ ಮೊದಲ ಓವರ್​ನಲ್ಲಿ ಈ ಘಟನೆ ಸಂಭವಿಸಿದೆ. ಓವರ್‌ನ ನಾಲ್ಕನೇ ಎಸೆತವನ್ನು ವಿರಾಟ್ ಕೊಹ್ಲಿ ಶಾರ್ಟ್​ ಕವರ್ ಕಡೆ ಬಾರಿಸಿದರು. ಕೊಹ್ಲಿಯ ಈ ಸ್ಟೈಲೀಸ್ ಹೊಡೆತವನ್ನು ಕಂಡಾಗ ಪಕ್ಕಾ ಬೌಂಡರಿ ಎಂದು ಊಹಿಸಲಾಗಿತ್ತು. ಆದರೆ ಕಣ್​ ಮಿಟುಕಿಸುವಲ್ಲಿ 30 ಯಾರ್ಡ್ ಸರ್ಕಲ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಲಿಟನ್ ದಾಸ್ ಚಿರತೆಯಂತೆ ಎಗರಿ ಚೆಂಡನ್ನು ಹಿಡಿದು ಎಲ್ಲರನ್ನು ದಿಗ್ಭ್ರಮೆಗೊಳಿಸಿದರು. ಈ ವಿಡಿಯೊ ಕಂಡ ಕೊಹ್ಲಿ ಮತ್ತು ರೋಹಿತ್ ಒಂದು ಕ್ಷಣ​ ಮೂಕವಿಸ್ಮಿತರಾದರು.

ಇದನ್ನೂ ಓದಿ | IND VS BAN | ಶಕಿಬ್​ ಸ್ಪಿನ್​ ದಾಳಿಗೆ ನಲುಗಿದ ಟೀಮ್​ ಇಂಡಿಯಾ; ಬಾಂಗ್ಲಾ ಗೆಲುವಿಗೆ 187 ರನ್​ ಗುರಿ

Exit mobile version