Site icon Vistara News

IND vs BAN: ಇಂದು ಭಾರತ-ಬಾಂಗ್ಲಾ ಸೂಪರ್​-8 ಸೆಣಸಾಟ; ಪಂದ್ಯಕ್ಕೆ ಮಳೆ ಭೀತಿ ಇದೆಯೇ?

IND vs BAN

IND vs BAN: Will rain wash out Super 8 clash in North Sound, Antigua?

ಆ್ಯಂಟಿಗುವಾ​: ಇಂದು ನಡೆಯುವ ವಿಶ್ವಕಪ್​ ಸೂಪರ್​-8 ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ(IND vs BAN) ಸೆಣಸಾಡಲಿವೆ. ಈಗಾಗಲೇ ಒಂದು ಪಂದ್ಯ ಗೆದ್ದು ಬೀಗಿರುವ ಭಾರತ ಈ ಪಂದ್ಯವನ್ನು ಕೂಡ ಗೆದ್ದು ಸೆಮಿಫೈನಲ್​ ಟಿಕೆಟ್​ ಬಹುತೇಕ ಖಚಿತಪಡಿಸುವ ಇರಾದೆಯಲ್ಲಿದೆ. ಬಾಂಗ್ಲಾದೇಶ ಸೋಲು ಕಂಡರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಬಾಂಗ್ಲಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಹವಾಮಾನ ವರದಿಗಳ ಪ್ರಕಾರ, ಶನಿವಾರ ಈ ಸ್ಥಳದ ತಾಪಮಾನವು ಹಗಲಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ 27 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಮಧ್ಯಾಹ್ನ ಸ್ವಲ್ಪ ಮೋಡ ಕವಿದ ವಾತಾವರಣ ಕಂಡು ಬಂದರೂ ಕೂಡ ಮಳೆಯಾಗುವ ಸಾಧ್ಯತೆ ಶೇ.1ರಷ್ಟಿದೆ. ತೇವಾಂಶವು 68% ಆಗಿರುತ್ತದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರಗೊಳ್ಳಲಿದೆ. ಈ ಕ್ರೀಡಾಂಗಣದಲ್ಲಿ ಒಟ್ಟು 34 ಟಿ 20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 16 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 16 ಪಂದ್ಯಗಳನ್ನು ಗೆದ್ದಿವೆ.

ಕ್ರೀಡಾಂಗಣದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ 122 ಆಗಿದ್ದರೆ, ಸರಾಸರಿ ಎರಡನೇ ಇನ್ನಿಂಗ್ಸ್ ಮೊತ್ತ 105 ಆಗಿದೆ. ಐಸಿಸಿ ಟಿ 20 ವಿಶ್ವಕಪ್ 2024 ರ ಹಿಂದಿನ ಪಂದ್ಯದಲ್ಲಿ ಯುಎಸ್ಎ ವಿರುದ್ಧ ದಕ್ಷಿಣ ಆಫ್ರಿಕಾ 194/4 ಸ್ಕೋರ್ ಮಾಡಿದೆ. ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣವನ್ನು ಕಡಿಮೆ ಸ್ಕೋರಿಂಗ್ ಕ್ರೀಡಾಂಗಣ ಎಂದು ಕರೆಯಬಹುದು. ಏಕೆಂದರೆ 34 ಟಿ 20 ಐ ಪಂದ್ಯಗಳ ನಂತರವೂ ಯಾವುದೇ ತಂಡವು 200 ಕ್ಕೂ ಹೆಚ್ಚು ಮೊತ್ತ ದಾಖಲಿಸಿಲ್ಲ. ಪಿಚ್ ಅನ್ನು ಬೌಲಿಂಗ್ ಸ್ನೇಹಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಬ್ಯಾಟರ್​ಗಳು ರನ್ ಗಳಿಸಲು ಕಷ್ಟಪಡುತ್ತಾರೆ. ವೇಗಿಗಳಿಗಿಂತ ಸ್ಪಿನ್ನರ್ ಗಳು ಹೆಚ್ಚು ಅನುಕೂಲ ಪಡೆಯುತ್ತಾರೆ.

ಇದನ್ನೂ ಓದಿ T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

ಭಾರತ ಕಳೆದ ಪಂದ್ಯದ ಆಡುವ ಬಳಗವನ್ನೇ ಈ ಪಂದ್ಯದಲ್ಲಿಯೂ ಕಣಕ್ಕಿಳಿಸಬಹುದು. ಹೀಗಾಗಿ ಬೌಲಿಂಗ್‌ ಸಿರಾಜ್​ ಈ ಪಂದ್ಯದಲ್ಲಿಯೂ ಬೆಂಚ್​ ಕಾಯಬೇಕು. ಸಿರಾಜ್‌ ಬದಲು ಕುಲದೀಪ್‌ ಅವರನ್ನು ಆಡಿಸಿದ ಪ್ರಯೋಗ ಯಶಸ್ವಿಯಾಗಿದೆ. ಸದ್ಯಕ್ಕೇ ಸಮಸ್ಯೆ ಇರುವುದೆಂದರೆ ಓಪನಿಂಗ್​. ತಂಡ ಪವರ್‌ ಪ್ಲೇಯಲ್ಲಿ ನಿರೀಕ್ಷಿತ ಆರಂಭ ಪಡೆಯಲು ವಿಫ‌ಲವಾಗುತ್ತಿದೆ. ನಾಯಕ ರೋಹಿತ್​ ಮತ್ತು ಕೊಹ್ಲಿ ಜೋಡಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ.

ಮುಖಾಮುಖಿ ಸಾಧನೆ


ಆಡಿದ ಪಂದ್ಯಗಳು: 13
ಭಾರತಕ್ಕೆ ಗೆಲುವು 12
ಬಾಂಗ್ಲಾದೇಶ ವಿರುದ್ಧ ಗೆಲುವು 01
ಫಲಿತಾಂಶ ಇಲ್ಲ 00
ಮೊದಲ ಪಂದ್ಯ: 06/06/2009 (ಭಾರತ ಗೆದ್ದಿದೆ)
ಕೊನೇ: 06/10/2023 (ಭಾರತ ಗೆದ್ದಿದೆ)

ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅರ್ಶ್​ದೀಪ್​ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ. ಸಿರಾಜ್ .

ಬಾಂಗ್ಲಾದೇಶ ತಂಡ: ನಜ್ಮುಲ್ ಹುಸೇನ್ ಶಾಂಟೊ (ನಾಯಕ), ತಂಜೀದ್ ಹಸನ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ತೌಹಿದ್ ಹೃದೋಯ್, ಮಹಮುದುಲ್ಲಾ, ಜೇಕರ್ ಅಲಿ, ರಿಷದ್ ಹುಸೇನ್, ತಸ್ಕಿನ್ ಅಹ್ಮದ್, ತಂಜೀಮ್ ಹಸನ್ ಸಾಕಿಬ್, ಮುಸ್ತಾಫಿಜುರ್ ರಹಮಾನ್, ಸೌಮ್ಯ ಸರ್ಕಾರ್, ಮಹೆದಿ ಹಸನ್, ತನ್ವೀರ್ ಇಸ್ಲಾಂ.

Exit mobile version