ಅಡಿಲೇಡ್: ಟಿ20 ವಿಶ್ವ ಕಪ್ನ ಬುಧವಾರದ ಸೂಪರ್-12 ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ(IND VS Bangla). ಉಭಯ ತಂಡಗಳಿಗೂ ಸೆಮಿಫೈನಲ್ಗೇರುವ ಮಹತ್ವದ ಪಂದ್ಯವಾದ್ದರಿಂದ ತೀವ್ರ ಪೈಪೋಟಿ ನಿರೀಕ್ಷಿಸಬಹುದು. ಸದ್ಯ ಬಿ ಗ್ರೂಪ್ನಲ್ಲಿ ಇತ್ತಂಡಗಳು 4 ಸಮಾನ ಅಂಕ ಗಳಿಸಿದರೂ ರನ್ ರೇಟ್ ಆಧಾರದಲ್ಲಿ ಭಾರತ ತಂಡ ಬಾಂಗ್ಲಾದೇಶಕ್ಕಿಂತ ಮುಂದಿದ್ದು ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತ ತಂಡ ಒಂದು ಬದಲಾವಣೆ ಮಾಡಿದ್ದು, ದೀಪಕ್ ಹೂಡಾ ಬದಲು ಅಕ್ಷರ್ ಪಟೇಲ್ಗೆ ಅವಕಾಶ ನೀಡಲಾಗಿದೆ. ಬಾಂಗ್ಲಾದೇಶ ತಂಡವು ಒಂದು ಬದಲಾವಣೆ ಮಾಡಿದ್ದು, ಸೌಮ್ಯ ಸರ್ಕಾರ್ ಬದಲಿಗೆ ಶೋರಿಫುಲ್ ಇಸ್ಲಾಂಗೆ ಆಡುವ ಬಳಗದಲ್ಲಿ ಅವಕಾಶ ನೀಡಿದೆ.
ಪಿಚ್ ರಿಪೋರ್ಟ್
ಅಡಿಲೇಡ್ ಓವಲ್ ಮೈದಾನ ಬ್ಯಾಟರ್ಗಳಿಗೆ ಮತ್ತು ಬೌಲರ್ಗಳಿಗೆ ಅನುಕೂಲಕರವಾಗಿದೆ. ಆದರೆ ಬೌಂಡರಿ ಲೈನ್ ದೂರ ಇರುವ ಕಾರಣ ಬೌಲರ್ಗಳಿಗೆ ಅಧಿಕ ಲಾಭ. ಬ್ಯಾಟರ್ಗಳು ಇಲ್ಲಿ ಸಂಪೂರ್ಣ ಬಲದೊಂದಿಗೆ ಬ್ಯಾಟ್ ಬೀಸಬೇಕಾಗಿದೆ.
ಭಾರತ: ಕೆ.ಎಲ್. ರಾಹುಲ್, ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್.ಅಶ್ವಿನ್, ದಿನೇಶ್ ಕಾರ್ತಿಕ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್.
ಬಾಂಗ್ಲಾದೇಶ: ಶಕಿಬ್ ಅಲ್ ಹಸನ್(ನಾಯಕ), ಶಂಟೊ, ಲಿಟ್ಟನ್ ದಾಸ್, ಅಫಿಫ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್, ಮೊಸ್ದೆಕ್ ಹೊಸೈನ್, ಟಸ್ಕಿನ್ ಅಹ್ಮದ್, ಹಸನ್ ಮಹ್ಮುದ್, ಮುಸ್ತಾಫಿಜುರ್ ರೆಹಮಾನ್. ಶೋರಿಫುಲ್ ಇಸ್ಲಾಂ.
ಇದನ್ನೂ ಓದಿ | Team India | ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಬಿಸಿಸಿಐಗೆ ಹಿಡಿ ಶಾಪ ಹಾಕಿದ ಆಟಗಾರರು