ಅಡಿಲೇಡ್: ಟಿ20 ವಿಶ್ವ ಕಪ್ನ ಭಾರತ ಮತ್ತು ಬಾಂಗ್ಲಾದೇಶ(IND VS BANGLA) ವಿರುದ್ಧದ ಪಂದ್ಯ ಮಳೆಯಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದೀಗ ಪಂದ್ಯ ನಡೆಯುವುದು ಅನುಮಾನ ಎನ್ನುವಂತಾಗಿದೆ. ಬಾಂಗ್ಲಾದೇಶ ತಂಡ ಭಾರತ ನೀಡಿದ 185 ರನ್ಗಳ ಸವಾಲು ಬೆನ್ನಟ್ಟುತ್ತಿದ್ದ ವೇಳೆ ಮಳೆ ಸುರಿಯಲಾರಂಭಿಸಿದೆ.
ಟಿ20 ವಿಶ್ವ ಕಪ್ನ ಸೂಪರ್-12 ಪಂದ್ಯದ ಬುಧವಾರದ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 6 ವಿಕೆಟ್ಗೆ 184 ರನ್ ಗಳಿಸಿ ಸವಾಲೊಡ್ಡಿತು. ಬಳಿಕ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಆರಂಭದಿಂದಲೇ ಭಾರತದ ಬೌಲರ್ಗಳನ್ನು ಕಾಡಿದಿದರು. ಅದರಂತೆ 7 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿ ಉತ್ತಮ ಸ್ಥಿಯಲ್ಲಿತ್ತು. ಈ ವೇಳೆ ಮಳೆ ಸುರಿದ ಕಾರಣ ಸದ್ಯಕ್ಕೆ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಒಂದೊಮ್ಮೆ ಪಂದ್ಯ ರದ್ದಾದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾಗೆ ಗೆಲುವಿನ ಅವಕಾಶ ಹೆಚ್ಚು ಎನ್ನಬಹುದು. ಏಕೆಂದರೆ ಭಾರತ ತಂಡಕ್ಕಿಂತ ಬಾಂಗ್ಲಾ ಉತ್ತಮ ಆರಂಭ ಪಡೆದಿದೆ. ರನ್ರೇಟ್ ಆಧಾರದಲ್ಲಿ ಬಾಂಗ್ಲಾಗೆ ಹೆಚ್ಚಿನ ಅವಕಾಶವಿದೆ. ಬಾಂಗ್ಲಾ ಪರ ಲಿಟ್ಟನ್ ದಾಸ್ 26 ಎಸೆತಗಳಲ್ಲಿ ಅಜೇಯ 59 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬಾಂಗ್ಲಾ ಗೆಲುವಿಗೆ 78 ಎಸೆತಗಳಲ್ಲಿ 119 ರನ್ ಅಗತ್ಯವಿದೆ.
ಇದನ್ನೂ ಓದಿ | IND VS BANGLA | ಕೊಹ್ಲಿ, ರಾಹುಲ್ ಅರ್ಧಶತಕ; ಬಾಂಗ್ಲಾ ಗೆಲುವಿಗೆ 185 ರನ್ ಸವಾಲು