ಢಾಕಾ: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ಢಾಕಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಈಗಾಗಲೇ ಟೀಮ್ ಇಂಡಿಯಾ ಬಾಂಗ್ಲಾ ತಲುಪಿದೆ. ಇದಕ್ಕೂ ಮುನ್ನ ಮುಂಬೈ ವಿಮಾನ ನಿಲ್ದಾಣದಿಂದ ಢಾಕಾಕ್ಕೆ ಪ್ರಯಾಣ ಬೆಳೆಸುವ ವೇಳೆ ರೋಹಿತ್ ಶರ್ಮಾ ತಮ್ಮ ಫೋಟೊಗಳನ್ನು ಕ್ಲಿಕ್ಕಿಸಲು ಮುಂದಾದ ಪತ್ರಕರ್ತರ ಮೇಲೆ ಕೊಂಚ ಗರಂ ಆಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಜಿಲ್ಯಾಂಡ್ ಸರಣಿಯಿಂದ ವಿಶ್ರಾಂತಿಯಲ್ಲಿದ್ದ ರೋಹಿತ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸೇರಿದಂತೆ ಕೆಲ ಆಟಗಾರರು ಗುರುವಾರ ಬಾಂಗ್ಲಾದೇಶಕ್ಕೆ ಪ್ರಯಾಣಿಸಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಫೋಟೊ ಕ್ಲಿಕ್ಕಿಸಲು ಮುಂದಾಗಿದ್ದನ್ನು ಕಂಡು ಕೋಪಗೊಂಡ ನಾಯಕ ರೋಹಿತ್ ಶರ್ಮಾ, ಇಷ್ಟೊಂದು ಫೋಟೋಗಳನ್ನು ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪತ್ರಕರ್ತರಿಗೆ ಪ್ರಶ್ನಿಸಿದ್ದಾರೆ.
ರೋಹಿತ್ ಪ್ರಶ್ನೆಗೆ ಉತ್ತರಿಸಿದ ಪತ್ರಕರ್ತರು, ನಾವು ಮಾಧ್ಯಮದಿಂದ ಬಂದವರು. ಹೀಗಾಗಿ ನಾವು ಮಾಧ್ಯಮಗಳಿಗೆ ಫೋಟೊಗಳನ್ನು ನೀಡಬೇಕಾಗಿದೆ ಎಂದಿದ್ದಾರೆ. ಮಾಧ್ಯಮದವರ ಈ ಉತ್ತರ ಕೇಳಿಸಿಕೊಂಡ ರೋಹಿತ್ ಏನು ಪ್ರತಿಕ್ರಿಕೆ ನೀಡದೆ ನಗು ಮುಖದೊಂದಿಗೆ ಅಲ್ಲಿಂದ ತೆರಲಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ | IND VS BANGLA | ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಶಮಿ ಔಟ್; ಉಮ್ರಾನ್ ಮಲಿಕ್ಗೆ ಅವಕಾಶ