ಢಾಕಾ: ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ನಡೆಸುವ ಆಯ್ಕೆ ಮಾಡಿದೆ. ಅದರಂತೆ ಪ್ರವಾಸಿ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಲಿದೆ. ಈ ಪಂದ್ಯದ ಮೂಲಕ ವೇಗಿ ಕುಲ್ದೀಪ್ ಸೇನ್ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಪಿಚ್ ರಿಪೋರ್ಟ್
ಶೇರ್ ‘ಎ’ ಬಾಂಗ್ಲಾ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿರಲಿದೆ. ಇಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಸರಾಸರಿ 250ರ ಗಟಿದಾಟುವಲ್ಲಿ ಯಶಸ್ಸು ಕಂಡಿದೆ. ಆದರೆ ಆರಂಭದಲ್ಲಿ ಈ ಪಿಚ್ ವೇಗಿಗಳಿಗೆ ನೆರವು ನೀಡುವ ನಿರೀಕ್ಷೆಯಿದೆ. ಆದ್ದರಿಂದ ಆರಂಭಿಕ ಆಟಗಾರರು ಎಚ್ಚರಿಕೆಯ ಆಟವಾಡುವುದು ಅತ್ಯಗತ್ಯ.
ತಂಡಗಳು
ಭಾರತ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಸೇನ್, ಶಬಾಜ್ ಅಹ್ಮದ್.
ಬಾಂಗ್ಲಾದೇಶ
ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಶಕಿಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಮಹಮ್ಮದುಲ್ಲಾ ರಿಯಾದ್, ಅಫೀಫ್ ಹುಸೈನ್, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್, ಹಸನ್ ಮಹಮೂದ್, ಅನಮುಲ್ ಹಕ್.
ಪಂದ್ಯ ಆರಂಭ: ಬೆಳಗ್ಗೆ 11:30ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.
ಇದನ್ನೂ ಓದಿ | IND VS BANGLA | ಭಾರತ ಮತ್ತು ಬಾಂಗ್ಲಾ ನಡುವಿನ ಏಕ ದಿನ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?