Site icon Vistara News

IND vs BAN: ಪಾಂಡ್ಯ ಬಲಿಷ್ಠ ಹೊಡೆತಕ್ಕೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್; ವಿಡಿಯೊ ವೈರಲ್​

IND vs BAN

IND vs BAN:Shoriful Islam walks off the field after suffering nasty injury

ನ್ಯೂಯಾರ್ಕ್: ಶನಿವಾರ ರಾತ್ರಿ ನಡೆದ ಬಾಂಗ್ಲಾದೇಶ(IND vs BAN) ವಿರುದ್ಧದ ಟಿ20 ವಿಶ್ವಕಪ್​ ಟೂರ್ನಿಯ(ICC Mens T20 World Cup) ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ 60 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಐಪಿಎಲ್​ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಹಾರ್ದಿಕ್​ ಪಾಂಡ್ಯ(Hardik Pandya) ಈ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಇದೇ ವೇಳೆ ಪಾಂಡ್ಯ ಬಾರಿಸಿದ ಪವರ್​ ಫುಲ್​ ಹೊಡೆತವೊಂದು​ ಶೋರಿಫುಲ್ ಇಸ್ಲಾಂ(Shoriful Islam) ಅವರ ಕೈಗೆ ತಾಗಿ ಗಾಯಗೊಂಡ ಘಟನೆಯೂ ಸಂಭವಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ರಿಷಭ್​ ಪಂತ್​ ಅವರ ಅರ್ಧಶತಕ ಮತ್ತು ಪಾಂಡ್ಯ ಅವರ ಅಜೇಯ 40 ರನ್​ಗಳ ನೆರವಿನಿಂದ 5 ವಿಕೆಟಿಗೆ 182 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಬಾಂಗ್ಲಾ ತಂಡ ಇದಕ್ಕೂ ಮುನ್ನ ಆಡಿದ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ವಿರುದ್ಧವೂ ಸೋಲು ಕಂಡಿತ್ತು.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಭಾರತದ ಬ್ಯಾಟಿಂಗ್​ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಸ್ಟ್ರೈಕ್​ನಲ್ಲಿದ್ದರು. ಬೌಲಿಂಗ್ ನಡೆಸುತ್ತಿದ್ದ ಶೋರಿಫುಲ್ ಇಸ್ಲಾಂ ಐದನೇ ಎಸೆತವನ್ನು ಯಾರ್ಕರ್ ಎಸೆದರು. ಈ ಎಸೆತವನ್ನು ಪಾಂಡ್ಯ ಬಲವಾಗಿ ಬೀಸಿದರು. ನೇರವಾಗಿ ಬಂದ ಚೆಂಡನ್ನು ತಡೆಯುವ ಯತ್ನದಲ್ಲಿ ಶೋರಿಫುಲ್ ಇಸ್ಲಾಂ ಅಂಗೈಗೆ ಗಾಯ ಮಾಡಿಕೊಂಡರು. ಚೆಂಡು ರಬಸವಾಗಿ ಬಂದಿದ್ದರಿಂದ ಶೋರಿಫುಲ್ ಎಡಗೈಗೆ ಗಾಯವಾಯಿತು. ಬಳಿಕ ರಕ್ತ ಸುರಿಯಲಾರಂಭಿಸಿತು. ಬೌಲರ್ ಮೈದಾನದಲ್ಲಿ ನರಳುತ್ತಿರುವುದನ್ನು ನೋಡಿದ ಫಿಸಿಯೋ ತಕ್ಷಣವೇ ಮೈದಾನಕ್ಕೆ ಬಂದು ಶೋರಿಫುಲ್ ಅವರನ್ನು ಅಲ್ಲಿಂದ ಕರೆದೊಯ್ದರು. ಮೈದಾನ ತೊರೆದ ಕಾರಣ ಕೊನೆಯ ಎಸೆತವನ್ನು ತಂಜಿಮ್ ಹಸನ್ ಬೌಲ್ ಮಾಡಿ ಓವರ್​ ಪೂರ್ತಿಗೊಳಿಸಿದರು. ಗಾಯವನ್ನು ನೋಡುವಾಗ ಶೋರಿಫುಲ್ ಲೀಗ್​ ಹಂತದ ಪಂದ್ಯವನ್ನಾಡುವುದು ಕೂಡ ಅನುಮಾನ ಎನ್ನುವಂತಿದೆ.

ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ವಿಫಲವಾಗಿದ್ದ ಹಾರ್ದಿಕ್​ ಪಾಂಡ್ಯ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದಾಗ ಹಲವರು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಪಾಂಡ್ಯ ಅಭ್ಯಾಸ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿ ಮತ್ತು ತಂಡದ ವಿಶ್ವಾಸ ಹೆಚ್ಚಿಸುವಂತೆ ಮಾಡಿದ್ದಾರೆ. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆದಿದ ಪಾಂಡ್ಯ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 23 ಎಸೆತಗಳಿಂದ 2 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ ಅಜೇಯ 40 ರನ್ ಚಚ್ಚಿದರು. ಒಂದು ವಿಕೆಟ್​ ಕೂಡ ಕಿತ್ತರು.

ಕಾರು ಅಪಘಾತದ ಬಳಿಕ ಮೊದಲ ಬಾರಿ ಟೀಮ್​ ಇಂಡಿಯಾ ಪರ ಆಡಿದ ರಿಷಭ್​ ಪಂತ್​ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ಗಮನಸೆಳೆದರು. ತಮ್ಮ ನೆಚ್ಚಿನ ಒನ್​ ಹ್ಯಾಂಡ್​ ಸಿಕ್ಸರ್​ ಕೂಡ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಪಂತ್​ ಬರೋಬ್ಬರಿ 4 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿ 53 ರನ್​ ಗಳಿಸಿದರು.

Exit mobile version