Site icon Vistara News

IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್

IND vs BNG

ನವದೆಹಲಿ: ಇದೇ ತಿಂಗಳು ಭಾರತ ಮಹಿಳಾ ಕ್ರಿಕೆಟ್(IND vs BNG)​ ತಂಡ 5 ಪಂದ್ಯಗಳ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗಾಗಿ ಪ್ರಕಟಗೊಂಡ ತಂಡದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್(Shreyanka Patil)​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯ ಏಪ್ರಿಲ್​ 28ರಂದು ನಡೆಯಲಿದೆ.

ತಂಡವನ್ನು ಹರ್ಮನ್​ಪ್ರೀತ್​ ಕೌರ್​ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧನಾ ಉಪನಾಯಕಿಯಾಗಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ 2ನೇ ಆವೃತ್ತಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಆಶಾ ಸೋಭನಾ(Asha Sobhana), ಸಜನಾ ಸಜೀವನ್‌(Sajana Sajeevan) ಸೀನಿಯರ್​ ತಂಡದಲ್ಲಿ ಮೊದಲ ಕರೆ ಪಡೆದಿದ್ದಾರೆ. ಬೆನ್ನು ನೋವಿನ ಕಾರಣದಿಂದಾಗಿ ಜೆಮೀಮಾ ರೋಡ್ರಿಗಸ್​(Jemimah Rodrigues) ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ಭಾರತ ಆಡಿದ ಎಲ್ಲ ಸರಣಿಯಲ್ಲೂ ಜೆಮೀಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.

ಭಾರತ ತಂಡ


ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧನಾ, ಶಫಾಲಿ ವರ್ಮ, ಡಿ. ಹೇಮಲತಾ, ಸಜನಾ ಸಜೀವನ್‌, ರಿಚಾ ಘೋಷ್‌, ಯಾಸ್ತಿಕಾ ಭಾಟಿಯಾ, ರಾಧಾ ಯಾದವ್‌, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್‌, ಅಮನ್‌ಜೋತ್‌ ಕೌರ್‌, ಶ್ರೇಯಾಂಕಾ ಪಾಟೀಲ್‌, ಸೈಕಾ ಇಶಾಖ್‌, ಆಶಾ ಸೋಭನಾ, ರೇಣುಕಾ ಸಿಂಗ್‌ ಠಾಕೂರ್‌, ಟಿತಾಸ್‌ ಸಾಧು.

ಸ್ಥಾನ ಪಡೆದ ಶ್ರೇಯಾಂಕ


21 ವರ್ಷದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತೋರಿದ ಪ್ರದರ್ಶನದಿಂದ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುವಂತೆ ಮಾಡಿತ್ತು. ಹಂತ ಹಂತವಾಗಿ ಬೆಳೆದ ಇವರು 2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವಕಾಶ ಪಡೆದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆಡುವ ಮೂಲಕ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಬಾಂಗ್ಲಾ ಸರಣಿಗೂ ಆಯ್ಕೆಯಾಗಿದ್ದಾರೆ. ಇದುವರೆಗೆ ಭಾರತ ಪರ 2 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 2 ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 12 ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಸರಣಿಯ ವೇಳಾಪಟ್ಟಿ


ಮೊದಲ ಟಿ20 ಪಂದ್ಯ-ಏಪ್ರಿಲ್​ 28
.

ದ್ವಿತೀಯ ಟಿ20 ಪಂದ್ಯ-ಏಪ್ರಿಲ್​ 30.

ಮೂರನೇ ಟಿ20 ಪಂದ್ಯ-ಮೇ 2.

ನಾಲ್ಕನೇ ಟಿ20 ಪಂದ್ಯ- ಮೇ 6.

ಐದನೇ ಟಿ20 ಪಂದ್ಯ- ಮೇ 9.

Exit mobile version