Site icon Vistara News

IND vs ENG 2nd Test: 6 ವಿಕೆಟ್ ಕೆಡವಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

Jasprit Bumrah picked up figures of 6 for 45

ವಿಶಾಖಪಟ್ಟಣಂ: ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಇಂಗ್ಲೆಂಡ್​ ವಿರುದ್ಧದ ದ್ವಿತೀಯ(IND vs ENG) ಟೆಸ್ಟ್​ನ(IND vs ENG 2nd Test) ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್​ ಕೀಳುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಒಟ್ಟು 15.5 ಓವರ್​ ಎಸೆದ ಬುಮ್ರಾ 45 ರನ್​ ವೆಚ್ಚದಲ್ಲಿ 6 ವಿಕೆಟ್​ ಕಿತ್ತು ಆಂಗ್ಲರ ಕುಸಿತಕ್ಕೆ ಕಾರಣರಾದರು.

ದಾಖಲೆ ನಂ.1


ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ(Dr. Y.S. Rajasekhara Reddy ACA-VDCA Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಬುಮ್ರಾ ಘಾತಕ ಸ್ಪೆಲ್ ನಡೆಸಿ ಗಮನಸೆಳೆದರು. ಆಂಗ್ಲರ ನಾಯಕ ಬೆನ್​ ಸ್ಟೋಕ್ಸ್​ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬುಮ್ರಾ ಈ ವಿಕೆಟ್​ನೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ಮೂಲಕ ಟೆಸ್ಟ್​ನಲ್ಲಿ ಅತಿ ವೇಗವಾಗಿ 150 ವಿಕೆಟ್​ ಪಡೆದ ಏಷ್ಯಾದ ಎರಡನೇ ವೇಗಿ ಎನಿಸಿಕೊಂಡರು.

ದಾಖಲೆ ನಂ.2


ಬುಮ್ರಾ ಪಡೆದ ವಿಕೆಟ್​ಗಳೆಂದರೆ, ಓಲಿ ಪೋಪ್​, ಜೋ ರೂಟ್​, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಟಾಮ್ ವಿಲಿಯಂ ಹಾರ್ಟ್ಲಿ ಹಾಗೂ ಜೇಮ್ಸ್ ಆ್ಯಂಡರ್ಸನ್​. ಇದೇ ವೇಳೆ ಬುಮ್ರಾ ಅವರು ಕಪಿಲ್​ ದೇವ್​ ಅವರ 41 ವರ್ಷಗಳ ಹಿಂದಿನ ದಾಖಲೆಯೊಂದನ್ನು ಸರಿಗಟ್ಟಿದರು.

ಇದನ್ನೂ ಓದಿ IND vs END 2nd Test: ದ್ವಿತೀಯ ಟೆಸ್ಟ್​ನಲ್ಲಿ ಹಿಡಿತ ಸಾಧಿಸಿದ ಭಾರತ; 171 ರನ್​ ಲೀಡ್​

ಬುಮ್ರಾ ಪಡೆದ 6 ವಿಕೆಟ್​ಗಳಲ್ಲಿ 4 ವಿಕೆಟ್​ಗಳು 3 ನೇ ಕ್ರಮಾಂಕದಿಂದ 6 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಟಗಾರರದ್ದಾಗಿತ್ತು. 1983ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕಪಿಲ್​ ದೇವ್​ ಅವರು ಈ ಸಾಧನೆ ಮಾಡಿದ್ದರು. ಇದೀಗ 41 ವರ್ಷಗಳ ಬಳಿಕ ಕಪಿಲ್​ ಅವರ ಸಾಧನೆಯನ್ನು ಬುಮ್ರಾ ಪುನಾರವರ್ತಿಸಿದ್ದಾರೆ. ಕಪಿಲ್​ ಆ ಪಂದ್ಯದಲ್ಲಿ 83 ರನ್​ಗೆ 9 ವಿಕೆಟ್ ಕಿತ್ತಿದ್ದರು.

ದಾಖಲೆ ನಂ.3


ಜಸ್​ಪ್ರೀತ್​ ಬುಮ್ರಾ ಅವರು ಜೋ ರೂಟ್​(Joe Root) ವಿಕೆಟ್​ ಕೀಳುವ ಮೂಲಕ ಟೆಸ್ಟ್​ನಲ್ಲಿ ರೂಟ್​ ಅವನ್ನು 8ನೇ ಬಾರಿ ಔಟ್​ ಮಾಡಿದ ದಾಖಲೆ ತಮ್ಮದಾಗಿಸಿಕೊಂಡರು. ಬುಮ್ರಾ ಅವರು 20 ಇನ್ನಿಂಗ್ಸ್‌ಗಳಲ್ಲಿ ರೂಟ್​ಗೆ ಬಿಟ್ಟುಕೊಟ್ಟದ್ದು ಕೇವಲ 245 ರನ್ ಮಾತ್ರ.

ಬೆನ್​ ಸ್ಟೋಕ್ಸ್​(Ben Stokes) ಮತ್ತು ಓಲಿ ಪೋಪ್(Ollie Pope)​ ಅವರನ್ನು ಬುಮ್ರಾ ಕ್ಲೀನ್​ ಬೌಲ್ಡ್​ ಮಾಡಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೊ ಕಂಡು ಕ್ರಿಕೆಟ್​ ಅಭಿಮಾನಿಗಳು ಕೂಡ ಒಂದು ಕ್ಷಣ ದಂಗಾಗಿದ್ದಾರೆ. ಬುಮ್ರಾ ಎಸೆದ ವೇಗಕ್ಕೆ ವಿಕೆಟ್​ಗಳು ಚೆಲ್ಲಾಪಿಲ್ಲಿಯಾಗಿ ಎಗರಿ ಬಿದ್ದವು. ಈ ವಿಡಿಯೊ ವೈರಲ್​ ಆಗಿದೆ. ಬುಮ್ರಾ ಬೌಲಿಂಗ್​ ಕಂಡು ಸ್ಟೋಕ್ಸ್​ ಒಂದು ಕ್ಷಣ ಸ್ಟನ್​ ಆಗಿ ನಿಂತು ಬಿಟ್ಟರು. ಮೊದಲ ಟೆಸ್ಟ್​ ಪಂದ್ಯದಲ್ಲಿಯೂ ಸ್ಟೋಕ್ಸ್ ಇದೇ ರೀತಿಯಲ್ಲಿ ಬುಮ್ರಾ​ಗೆ ವಿಕೆಟ್​ ಒಪ್ಪಿಸಿದ್ದರು.

Exit mobile version