Site icon Vistara News

IND vs ENG: ಕಪ್ಪು ಪಟ್ಟಿ ಧರಿಸಿ ಆಡಲಿಳಿದ ಟೀಮ್​ ಇಂಡಿಯಾ ಆಟಗಾರರು

Jasprit Bumrah removed a reverse-scooping Joe Root early on third day

ರಾಜ್​ಕೋಟ್​: ಇತ್ತೀಗೆಚೆ ನಿಧನರಾದ ಭಾರತ ಕ್ರಿಕೆಟ್​ ತಂಡದ ಅತ್ಯಂತ ಹಿರಿಯ ಟೆಸ್ಟ್​ ಆಟಗಾರ ದತ್ತಾಜಿರಾವ್ ಗಾಯಕ್ವಾಡ್(Dattajirao Gaekwad) ಅವರ ಗೌರವಾರ್ಥವಾಗಿ ಇಂಗ್ಲೆಂಡ್(IND vs ENG) ವಿರುದ್ಧದ ಮೂರನೇ ಟೆಸ್ಟ್‌ನ ಮೂರನೇ ದಿನದಿನಾಟದಲ್ಲಿ ಟೀಮ್​ ಇಂಡಿಯಾ ಆಟಗಾರರು ಕೈಗೆ ಕಪ್ಪು ಬ್ಯಾಂಡ್‌ಗಳನ್ನು( India wear black armbands) ಧರಿಸಿ ಕಣಕ್ಕಿಳಿದರು.

ದತ್ತಾಜಿರಾವ್ ಗಾಯಕ್ವಾಡ್ ಅವರು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು. ವಯೋಸಹಜ ಕಾಯಿಲೆಗಳಿಂದ ಫೆ.13(ಮಂಗಳವಾರ)ರಂದು ನಿಧನ ಹೊಂದಿದ್ದರು. ಅವರಿಗೆ 95ನೇ ವಯಸ್ಸಾಗಿತ್ತು. 1959 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ದತ್ತಾಜಿರಾವ್ ಭಾರತವನ್ನು ಮುನ್ನಡೆಸಿದ್ದರು ಮತ್ತು 11 ಟೆಸ್ಟ್‌ಗಳಲ್ಲಿ ಭಾರತ ಪರ ಆಡಿದ್ದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರದಂದು ಟ್ವಿಟರ್​ ಎಕ್ಸ್​ ಖಾತೆಯಲ್ಲಿ ‘ಇತ್ತೀಚೆಗೆ ನಿಧನರಾದ ಭಾರತದ ಮಾಜಿ ನಾಯಕ ಮತ್ತು ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರ ಸ್ಮರಣಾರ್ಥ ಟೀಮ್ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ. ಭಾರತ ಕ್ರಿಕೆಟ್​ಗೆ ದತ್ತಾಜಿರಾವ್ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದೆ.

ಅತ್ಯಂತ ಹಿರಿಯ ಕ್ರಿಕೆಟಿಗ


1959–60ರ ಋತುವಿನಲ್ಲಿ ಮಹಾರಾಷ್ಟ್ರದ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ 249 ರನ್ ಗಳಿಸಿ ಔಟಾಗದೆ ದತ್ತಾಜಿ ಅವರ ಅತ್ಯಧಿಕ ಸ್ಕೋರ್ ಆಗಿತ್ತು. ಅವರು 2016 ರಲ್ಲಿ ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾದರು. ಅವರಿಗಿಂತ ಮೊದಲು, ದೀಪಕ್ ಶೋಧನ್ ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾಗಿದ್ದರು. ಮಾಜಿ ಬ್ಯಾಟ್ಸ್‌ಮನ್ ಶೋಧನ್ ಅಹಮದಾಬಾದ್‌ನಲ್ಲಿ 87 ನೇ ವಯಸ್ಸಿನಲ್ಲಿ ನಿಧನರಾದರು.

ಇದನ್ನೂ ಓದಿ R Ashwin: ಐತಿಹಾಸಿಕ ಸಾಧನೆ ಮಾಡಿದ ಅಶ್ವಿನ್​ಗೆ ಪ್ರಧಾನಿ ಮೋದಿಯಿಂದ ಮೆಚ್ಚುಗೆ

ಬಲಗೈ ಬ್ಯಾಟರ್ ಆಗಿದ್ದ ಗಾಯಕ್ವಾಡ್ ಅವರು 1952ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನಾಡುವ ಮೂಲಕ ಭಾರತ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಅಂತಿಮ ಪಂದ್ಯ ಆಡಿದ್ದರು. 11 ಟೆಸ್ಟ್​ ಪಂದ್ಯಗಳಿಂದ 350 ರನ್​ ಬಾರಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ, ಗಾಯಕ್ವಾಡ್ 1947 ರಿಂದ 1961ರವರೆಗೆ ಬರೋಡಾವನ್ನು ಪ್ರತಿನಿಧಿಸಿದ್ದರು. 1959-60ರ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಔಟಾಗದೆ 249 ರನ್ ಗಳಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು. 110 ಪ್ರಥಮ ದರ್ಜೆ ಕ್ರಿಕೆಟ್​ ಆಡಡಿರುವ ಅವರು 5788 ರನ್​ ಬಾರಿಸಿದ್ದಾರೆ. ಇದರಲ್ಲಿ 17 ಶತಕಗಳು ಒಳಗೊಂಡಿದೆ.

Exit mobile version