ರಾಜ್ಕೋಟ್: ಭಾರತ(IND vs ENG) ಮತ್ತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್(India vs England 3rd Test) ಪಂದ್ಯ ರಾಜ್ಕೋಟ್ನಲ್ಲಿ ನಡೆಯಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್(3rd Test Pitch Report), ಸಂಭಾವ್ಯ ತಂಡ ಮತ್ತು ಹವಾಮಾನ ವರದಿಯ ಸಂಪೂರ್ಣ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ರಾಜ್‌ಕೋಟ್‌ನ ಪಿಚ್ ಹೇಗಿರಲಿದೆ ಎನ್ನುವ ಕುತೂಹಲ ಇತ್ತಂಡಗಳಿಗೂ ಕಾಡಿದೆ. ಏಕೆಂದರೆ ಇಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಸ್ನೇಹಿಯಾಗಿದೆ. ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಹೀಗಿದ್ದರೂ ಕೂಡ ಬೌಲರ್ಗಳು ಕೂಡ ಇಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಕೆಲವು ಪಂದ್ಯಗಳು ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೆ ನೆರವಾದ ಉದಾಹರಣೆಯೂ ಇದೆ. ಹೀಗಾಗಿ ಪಿಚ್ ಹೇಗೆ ವರ್ತಿಸಲಿದೆ? ಎನ್ನುವ ಕುರಿತು ಉಭಯ ತಂಡಗಳಿಗೂ ಸವಾಲಿನಿಂದ ಕೂಡಿದೆ. ಈ ಪಂದ್ಯಕ್ಕೆ ಯಾವುದೇ ಹವಾಮಾನ ವೈಪರೀತ್ಯದ ಸಮಸ್ಯೆ ಇಲ್ಲ. ಹೀಗಾಗಿ 5 ದಿನ ಪಂದ್ಯ ಸಾಗಲಿದೆ.
Extra seamer seems sensible for England. Here’s the pitch at Rajkot, one day out pic.twitter.com/mp0s3jIam2
— Mike atherton (@Athersmike) February 14, 2024
1932 ರಿಂದ ಭಾರತ ಮತ್ತು ಇಂಗ್ಲೆಂಡ್ ಒಟ್ಟಾರೆಯಾಗಿ 133 ಟೆಸ್ಟ್ ಪಂದ್ಯಗಳಲ್ಲಿ ಎದುರಾಗಿದೆ. ಭಾರತ 51, ಇಂಗ್ಲೆಂಡ್ 32 ಪಂದ್ಯಗಲ್ಲಿ ಗೆಲುವು ಸಾಧಿಸಿದೆ. 50 ಪಂದ್ಯಗಳು ಡ್ರಾಗೊಂಡಿದೆ. ಭಾರತದಲ್ಲಿ ಆಡಿದ 56 ಪಂದ್ಯಗಳಲ್ಲಿ ಆತಿಥೇಯರು 23 ಮುಖಾಮುಖಿಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದರೆ, ಇಂಗ್ಲೆಂಡ್ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 28 ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡಿದೆ.
ಇಂಗ್ಲೆಂಡ್ ತಂಡ ಪ್ರಕಟ
ಪ್ರವಾಸಿ ಇಂಗ್ಲೆಂಡ್ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಆಫ್-ಸ್ಪಿನ್ನರ್ ಶೋಯೆಬ್ ಬದಲಿಗೆ ಮಾರ್ಕ್ ವುಡ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಾರ್ಕ್ ವುಡ್ ಸೇರ್ಪಡೆಯಿಂದ ತಂಡದಲ್ಲಿ 2 ವೇಗಿಗಳು ಕಾಣಿಸಿಕೊಂಡಿದ್ದಾರೆ. ಮೊದಲೆಡರು ಪಂದ್ಯಗಳಲ್ಲಿ ಕೇವಲ ಒಂದು ವೇಗಿಯನ್ನು ಮಾತ್ರ ಇಂಗ್ಲೆಂಡ್ ಕಣಕ್ಕಿಳಿಸಿತ್ತು.
ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್.
ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಸರ್ಫರಾಜ್ ಖಾನ್, ರಜತ್ ಪಾಟಿದಾರ್, ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.