ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್(IND vs ENG 5th Test) ಪಂದ್ಯ ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ. ಪಂದ್ಯ ನಡೆಯುವ ಹಿಮಾಚಲ ಪ್ರದೇಶದ ಧರ್ಮಶಾಲಾ(Dharamshala)ದಲ್ಲಿ ಭಾರಿ ಮಂಜಿನ ಮತ್ತು ಮಳೆಯ ಸಮಸ್ಯೆ ಎದುರಾಗಿದೆ. ಪಂದ್ಯದ ಸಮಯದಲ್ಲಿ ತಾಪಮಾನವು 1 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.
ಉಭಯ ತಂಡಗಳ ಆಟಗಾರರು ಈಗಾಗಲೇ ಧರ್ಮಶಾಲಾ ತಲುಪಿದ್ದರೂ ಕೂಡ ಅಭ್ಯಾಸ ನಡೆಸಿಲ್ಲ. ಮೈದಾನ ಒದ್ದೆಯಾಗಿರುವುದರಿಂದ ಜಾರಿ ಬಿದ್ದು ಗಾಯವಾಗುವ ಸಾಧ್ಯತೆಯಿಂದ ಅಭ್ಯಾಸ ಮಾಡಿಲ್ಲ. ಮಂಗಳವಾರದಿಂದ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ. ಇಂಗ್ಲೆಂಡ್ ಆಟಗಾರರು ಧರ್ಮಶಾಲಾದ ಸ್ಥಳೀಯ ಹಳ್ಳಿಗಾಡಿನ ರಸ್ತೆಯೊಂದರಲ್ಲಿ ಜಾಗಿಂಗ್ ಮಾಡಿರುವ ವಿಡಿಯೊ ವೈರಲ್ ಆಗಿದೆ.
England's players made the most of a beautiful morning in Dharamsala 🏔️
— Circle of Cricket (@circleofcricket) March 4, 2024
🎥: @benstokes38 pic.twitter.com/wxkam0afZZ
ಇಲ್ಲಿನ ಕೆಲ ಪ್ರವಾಸಿ ತಾಣಗಳಿಗೂ ಇಂಗ್ಲೆಂಡ್ ಆಟಗಾರರು ಭೇಟಿ ನೀಡಿದ್ದಾರೆ. 700 ವಿಕೆಟ್ಗಳ ಸನಿಹದಲ್ಲಿರುವ ಜೇಮ್ಸ್ ಆ್ಯಂಡರ್ಸನ್ ಅವರು ಜಲಪಾತದ ಮುಂದೆ ಕುಳಿತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
James Anderson enjoying at Dharamsala.#INDvsENG pic.twitter.com/y2kFSTSkyW
— Don Cricket 🏏 (@doncricket_) March 4, 2024
ಇಲ್ಲಿ ನಡೆಯುತ್ತಿರುವ 2 ಟೆಸ್ಟ್ ಪಂದ್ಯ ಇದಾಗಿದೆ. ಇಲ್ಲಿ ಮೊದಲ ಟೆಸ್ಟ್ ನಡೆದದ್ದು 2017ರಲ್ಲಿ. ಭಾರತ-ಆಸ್ಟೇಲಿಯಾ ನಡುವೆ. ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿರುವುದರಿಂದ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್ ಬೌಲಿಂಗ್ ಸ್ವರ್ಗವೆನಿಸಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್ ಓವಲ್, ನ್ಯೂಲ್ಯಾಂಡ್ಸ್ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ IPL 2024: ಸನ್ರೈಸರ್ಸ್ ತಂಡಕ್ಕೆ ಪ್ಯಾಟ್ ಕಮಿನ್ಸ್ ನೂತನ ನಾಯಕ
England are back in Dharamsala this week playing the 5th & final Test against India.
— Adam Mountford (@tmsproducer) March 3, 2024
An incredible place to visit & a real bucket list ground to broadcast from.
Great memories from when @bbctms were there in October. #bbccricket #INDvENG pic.twitter.com/yLvSE19I4P
ಈಗಾಗಲೇ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಭಾರತ ತಂಡಕ್ಕೆ ಐಪಿಎಲ್ ಟೂರ್ನಿಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯ ಎಂದರೂ ತಪ್ಪಾಗಲಾರದು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಿಟ್ಟಿನಲ್ಲಿ ನೋಡುವುದಾದರೆ ಈ ಪಂದ್ಯ ಇತ್ತಂಡಗಳಿಗೂ ಮಹತ್ವದಾಗುತ್ತದೆ. ಏಕೆಂದರೆ ಫೈನಲ್ ಪ್ರವೇಶ ಪಡೆಯಬೇಕಾದರೆ ಅಂಕಪಟ್ಟಿಯಲ್ಲಿ ಅಂತಿಮವಾಗಿ ಮೊದಲ ಎರಡು ಸ್ಥಾನ ಪಡೆಯಬೇಕಾಗುತ್ತದೆ.