ಧರ್ಮಶಾಲಾ: ಟೆಸ್ಟ್ನಲ್ಲಿ 700 ವಿಕೆಟ್ಗಳ ಸನಿಹದಲ್ಲಿರುವ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್(James Anderson) ಅವರು ವಿರಾಟ್ ಕೊಹ್ಲಿ(Virat Kohli) ಟೆಸ್ಟ್ ಸರಣಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯ(IND vs ENG 5th Test) ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸಂದರ್ಶವೊಂದರಲ್ಲಿ ಆ್ಯಂಡರ್ಸನ್ ಈ ಮಾತನ್ನು ಹೇಳಿದ್ದಾರೆ.
ಆಂಡರ್ಸನ್ ಅವರು ವಿರಾಟ್ ಕೊಹ್ಲಿಯನ್ನು 37 ಪಂದ್ಯಗಳಿಂದ ಒಟ್ಟು 10 ಬಾರಿ ಔಟ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 25 ಪಂದ್ಯಗಳಲ್ಲಿ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಆರಂಭಿಕ 2 ಟೆಸ್ಟ್ನಿಂದ ಹಿಂದೆ ಸರಿದಿದ್ದರು. ಮೂರನೇ ಪಂದ್ಯದಲ್ಲಿ ಅವರು ತಂಡ ಸೇರಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮೂರನೇ ಪಂದ್ಯ ಆರಂಭಕ್ಕೂ ಮುನ್ನವೇ ಕೊಹ್ಲಿ ಸರಣಿಯ ಎಲ್ಲ ಪಂದ್ಯಗಳಿಂದ ಹಿಂದೆ ಸರಿದಿರುವ ನಿರ್ಧಾರ ಪ್ರಕಟಿಸಿದ್ದರು.
ಜಿಯೊ ಸಂದರ್ಶನದಲ್ಲಿ ಮಾತನಾಡಿದ ಆ್ಯಂಡರ್ಸನ್, ‘ಕಳೆದ ಹಲವು ವರ್ಷಗಳಲ್ಲಿ ತನಗೆ ಕಠಿಣ ಸ್ಪರ್ಧೆಯಾಗಿದ್ದ ವಿರಾಟ್ ಕೊಹ್ಲಿಯ ಸವಾಲನ್ನು ಈ ಬಾರಿ ಎದುರಿಸಲು ಸಾಧ್ಯವಾಗಿಲ್ಲ. ಗುಣಮಟ್ಟದ ಬ್ಯಾಟ್ಸ್‌ಮನ್‌ಗಳ ಎದುರು ಸವಾಲು ಮೆಟ್ಟಿ ನಿಲ್ಲಬೇಕೆಂಬುವುದೇ ನನ್ನ ಪ್ರಮುಖ ಗುರಿ. ಸವಾಲಿನ ಆಟಗಾರನಾದ ಕೊಹ್ಲಿ ಆಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಹೇಳಿದರು.
James Anderson On Virat Kohli's Absence.#CricketTwitter #INDvENG #ViratKohli #JamesAnderson pic.twitter.com/2kNto3HKiv
— CRICKETNMORE (@cricketnmore) March 2, 2024
ವಯಸ್ಸು 41 ದಾಡಿದರೂ ಕೂಡ ಯುವ ಆಟಗಾರರನ್ನು ನಾಚಿಸುವಂತ ಫಿಟ್ನೆಸ್ ಮತ್ತು ಬೌಲಿಂಗ್ ಕೌಶಲ್ಯ ಹೊಂದಿರುವ ಇಂಗ್ಲೆಂಡ್ ತಂಡದ ಪ್ರಧಾನ ವೇಗಿ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಪೂರ್ತಿಗೊಳಿಸಲು ಇನ್ನು ಕೇವಲ 2 ವಿಕೆಟ್ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ನಲ್ಲಿ(India vs England 5th Test) ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. ಭಾರತ ಪ್ರವಾಸದ ವೇಳೆಯೇ ಆ್ಯಂಡರ್ಸನ್ ಅವರು 700 ವಿಕೆಟ್ ಸಾಧನೆ ಭಾರತದ ನೆಲದಲ್ಲೇ ಮಾಡುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಾಲ ಸನ್ನಿಹಿತವಾದಂತಿದೆ.
ಭಾರತ ವಿರುದ್ಧದ ಅಂತಿಮ ಟೆಸ್ಟ್ನಲ್ಲಿ ಆ್ಯಂಡರ್ಸನ್ ಅವರು 2 ವಿಕೆಟ್ ಕಿತ್ತರೆ 700 ವಿಕೆಟ್ ಕ್ಲಬ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಹಾಗೂ ಮೊದಲ ವೇಗಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ, ದಿವಂಗತ ಶೇನ್ ವಾರ್ನ್ 700 ಟೆಸ್ಟ್ ವಿಕೆಟ್ ಕಿತ್ತ ಉಳಿದಿಬ್ಬರು ಆಟಗಾರರು.
2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜೇಮ್ಸ್ ಆ್ಯಂಡರ್ಸನ್ ಅವರು ಇಂಗ್ಲೆಂಡ್ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್ ಪರ ಅವರು 186 ಟೆಸ್ಟ್ ಪಂದ್ಯ ಆಡಿ 698* ವಿಕೆಟ್ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್ ಪಡೆದಿದ್ದಾರೆ.