ಧರ್ಮಶಾಲಾ: ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿರುವ ರೋಹಿತ್ ಶರ್ಮ(Rohit Sharma), ಇಂಗ್ಲೆಂಡ್ ಎದುರಿನ ಅಂತಿಮ ಟೆಸ್ಟ್ನಲ್ಲಿ(IND vs ENG 5th Test) ಕೇವಲ ಒಂದು ಸಿಕ್ಸರ್ ಬಾರಿಸಿದರೆ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.
ಹೌದು, ಧರ್ಮಶಾಲಾದಲ್ಲಿ ಮಾಚ್ 7ರಿಂದ ಆರಂಭಗೊಳ್ಳಲಿರುವ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಒಂದು ಸಿಕ್ಸರ್ ಬಾರಿಸಿದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 50 ಸಿಕ್ಸರ್ ಪೂರ್ತಿಗೊಳಿಸಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ರೋಹಿತ್ ಇದುವರೆಗೆ 31 ಪಂದ್ಯಗಳ 53 ಇನಿಂಗ್ಸ್ನಿಂದ 49* ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು 78 ಸಿಕ್ಸರ್ ಬಾರಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆಯೂ ಸ್ಟೋಕ್ಸ್ ಹೆಸರಿನಲ್ಲಿದೆ. 128* ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ 14ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ WPL 2024 Points Table: ಡಬ್ಲ್ಯುಪಿಎಲ್ನಲ್ಲಿ ಇನ್ನು 9 ಪಂದ್ಯಗಳು ಬಾಕಿ; ಅಂಕಪಟ್ಟಿ ಹೇಗಿದೆ?
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ದಾಖಲೆ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಡ್ಯಾಶಿಂಗ್ ಆಟಗಾರ ಸೆಹವಾಗ್ 104 ಟೆಸ್ಟ್ ಪಂದ್ಯ ಆಡಿ 91 ಸಿಕ್ಸರ್ ಬಾರಿಸಿದ್ದಾರೆ. ಸೆಹವಾಗ್ ದಾಖಲೆ ಮುರಿಯಲು ರೋಹಿತ್ಗೆ ಇನ್ನು 11 ಸಿಕ್ಸರ್ಗಳ ಅಗತ್ಯವಿದೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಭಾರತೀಯ ಆಟಗಾರರು
ಆಟಗಾರ | ಸಿಕ್ಸರ್ |
ವಿರೇಂದ್ರ ಸೆಹವಾಗ್ | 91 |
ರೋಹಿತ್ ಶರ್ಮ | 81* |
ಮಹೇಂದ್ರ ಸಿಂಗ್ ಧೋನಿ | 78 |
ಸಚಿನ್ ತೆಂಡೂಲ್ಕರ್ | 69 |
ಕಪಿಲ್ ದೇವ್ | 61 |
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಗಳು
ಆಟಗಾರ | ಸಿಕ್ಸರ್ |
ಬೆನ್ ಸ್ಟೋಕ್ಸ್ | 128* |
ಬ್ರೆಂಡನ್ ಮೆಕಲಮ್ | 107 |
ಆ್ಯಡಂ ಗಿಲ್ಕ್ರಿಸ್ಟ್ | 100 |
ಕ್ರಿಸ್ ಗೇಲ್ | 98 |
ಜಾಕ್ ಕ್ಯಾಲಿಸ್ | 97 |
ಹೆಲಿಕಾಪ್ಟರ್ನಲ್ಲಿ ಧರ್ಮಶಾಲಾಕ್ಕೆ ಬಂದಿಳಿದ ರೋಹಿತ್
ಕೆಜಿಎಫ್ ಶೈಲಿಯಲ್ಲಿ ಯಶ್ ಬಂದಂತೆ ರೋಹಿತ್ ಶರ್ಮ ಅವರು ಖಾಸಗಿ ಹೆಲಿಕಾಪ್ಟರ್ ಮೂಲಕ ಮಂಗಳವಾರ ಧರ್ಮಶಾಲಾಕ್ಕೆ ಬಂದಿಳಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ. ರೋಹಿತ್ ಶರ್ಮ ಅವರು ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್ ಮರ್ಚಂಟ್ ಪುತ್ರಿ ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ತಡವಾಗಿ ತಂಡ ಸೇರಿದ್ದಾರೆ. ತಂಡದ ಉಳಿದ ಆಟಗಾರರು 2 ದಿನಗಳ ಮುಂದೆಯೇ ಧರ್ಮಶಾಲಾ ತಲುಪಿದ್ದರು.
Rohit Sharma has reached Dharamshala in a private helicopter. pic.twitter.com/YYp3WxtDqV
— Mufaddal Vohra (@mufaddal_vohra) March 5, 2024