ಧರ್ಮಶಾಲಾ: ಇಂಗ್ಲೆಂಡ್ ನಡುವಣ 5ನೇ ಟೆಸ್ಟ್(India vs England 5th Test) ಪಂದ್ಯದಲ್ಲಿ ಯುವ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ (Devdutt Padikkal) ಅವರು ಕಣ್ಕಕಿಳಿಯುವ ಮೂಲಕ ಭಾರತ ಟೆಸ್ಟ್ಗೆ ಪದಾರ್ಪಣೆ ಮಾಡಿದರು. ಅವರು ಭಾರತ ಪರ ಟೆಸ್ಟ್ ಆಡಿದ 314ನೇ ಆಟಗಾರ ಎನಿಸಿಕೊಂಡರು. 100ನೇ ಟೆಸ್ಟ್ ಆಡುತ್ತಿರುವ ಆರ್ ಅಶ್ವಿನ್ ಅವರು ಕ್ಯಾಪ್ ನೀಡಿ ಪಡಿಕ್ಕಲ್ ಅವರನ್ನು ತಂಕ್ಕೆ ಬರಮಾಡಿಕೊಂಡರು.
Test Cap number 3⃣1⃣4⃣
— BCCI (@BCCI) March 7, 2024
Congratulations to Devdutt Padikkal who is all set to make his Test Debut! 👏👏
Go well @devdpd07 🙌
Follow the match ▶️ https://t.co/OwZ4YNua1o#TeamIndia | #INDvENG | @IDFCFIRSTBank pic.twitter.com/6XdcvaKl0s
ಕೇರಳ ಮೂಲದ ಆಟಗಾರ
ಬಹುತೇಕರು ದೇವದತ್ತ ಪಡಿಕ್ಕಲ್ ಅವರನ್ನು ಕನ್ನಡಿಗ ಎಂದು ಕರೆಯುತ್ತಾರೆ. ಆದರೆ, ಪಡಿಕ್ಕಲ್ ಕೇರಳ ಮೂಲದವರು. ಹೌದು, ಪಡಿಕ್ಕಲ್ ಜನಿಸಿದ್ದು ಕೇರಳ ರಾಜ್ಯದ ಎಡಪ್ಪಲ್ ಎಂಬ ಪಟ್ಟಣದಲ್ಲಿ. ಕೇರಳದಲ್ಲಿ ಹುಟ್ಟಿದ್ದರೂ ಕೂಡ ಪಡಿಕ್ಕಲ್ ತನ್ನ ಬಾಲ್ಯ ಕಳೆದಿದ್ದು ಹೈದರಾಬಾದ್ನಲ್ಲಿ. 11 ವರ್ಷವಿದ್ದಾಗ ಬೆಂಗಳೂರಿಗೆ ಬಂದ ಪಡಿಕ್ಕಲ್ ಇಲ್ಲಿನ ಸೈಂಟ್ ಜೋಸೆಫ್ ಹೈಸ್ಕೂಲ್ ಸೇರಿ ಇಲ್ಲಿಯೇ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಬಳಿಕ ಕರ್ನಾಟಕ ತಂಡದ ಪರ ತಮ್ಮ ಕ್ರಿಕೆಟ್ ಜರ್ನಿ ಆರಂಭಿಸಿದರು. ಅವರ ಐಪಿಎಲ್ ಜರ್ನಿ ಕೂಡ ಆರಂಭವಾದದ್ದು ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ. ಸದ್ಯ ಪಡಿಕ್ಕಲ್ ಅಪ್ಟಟ ಕನ್ನಡಿಗ ಕೆ.ಎಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸದಸ್ಯನಾಗಿದ್ದಾರೆ.
A look at #TeamIndia's Playing XI for the 5th and final #INDvENG Test!
— BCCI (@BCCI) March 7, 2024
Devdutt Padikkal makes his Test Debut 👏👏
Follow the match ▶️ https://t.co/OwZ4YNua1o@IDFCFIRSTBank pic.twitter.com/TvFY7L9CjB
ಸವಾಲುಗಳನ್ನು ಮೆಟ್ಟಿನಿಂತ ಪಡಿಕ್ಕಲ್
ಪಡಿಕ್ಕಲ್ ಅವರ ಕ್ರಿಕೆಟ್ ಜರ್ನಿಯ ಆರಂಭಿಕ ದಿನಗಳು ತುಂಬಾ ಯಶಸ್ಸಿನಿಂದ ಕೂಡಿತ್ತು. ಆದರೆ, ಬಳಿಕ ಅವರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಿದರು. ಸರಿ ಸುಮಾರು ನಾಲ್ಕು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ ಅವರು ಒಂದು ವರ್ಷ ಸಂಪೂರ್ಣವಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಏನೇ ಆದರೂ ಕೂಡ ಛಲ ಬಿಡಿದ 23 ವರ್ಷದ ಈ ಕ್ರಿಕೆಟಿಗ ಎಲ್ಲ ಸವಾಲನ್ನು ಮೆಟ್ಟಿ ನಿಂತು ಇದೀಗ ಭಾರತ ಪರ ಟೆಸ್ಟ್ನಲ್ಲಿ ಪದಾರ್ಪಣೆ ಮಾಡುವ ತವಕದಲ್ಲಿದ್ದಾರೆ. ಅನಾರೋಗ್ಯ ಕಾಡದಿದ್ದಿದ್ದರೆ ಅವರು ಮೂರು ವರ್ಷಗಳ ಹಿಂದೆಯೇ ಭಾರತ ಪರ ಟೆಸ್ಟ್ ಆಡುವ ಸಾಧ್ಯತೆ ಇತ್ತು. ಇದೀಗ ಕೊನೆಗೂ ಅವರಿಗೆ ಟೀಮ್ ಇಂಡಿಯಾ ಪರ ಆಡುವ ಭಾಗ್ಯ ಒಲಿದಿದೆ. ಶ್ರೇಷ್ಠ ಆಟವಾಡುವ ಮೂಲಕ ಹಲವು ವರ್ಷ ಭಾರತ ತಂಡದಲ್ಲಿ ಆಡಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.
ಕಾಡಿದ ಆರೋಗ್ಯ ಸಮಸ್ಯೆ
2021ರ ಐಪಿಎಲ್‌ನಲ್ಲಿಯೂ ಅವರು 400ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅದೇ ವರ್ಷ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಆಡಲು ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದರು. ಅದೇ ವರ್ಷ ಪಡಿಕಲ್ ಆರೋಗ್ಯ ಕೈಕೊಟ್ಟಿತು. ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಾಡಿ ದೇಹದ ತೂಕ ಇಳಿದುಹೋಯಿತು. ಚೇತರಿಸಿಕೊಳ್ಳಲು ದೀರ್ಘ ಕಾಲ ಹಿಡಿಯಿತು. ಸುಮಾರು ಒಂದೂವರೆ ವರ್ಷ ಅವರು ಕ್ರಿಕೆಟ್ ಮರಳಲು ಶ್ರಮಪಡಬೇಕಾಯಿತು. ಹೀಗಾಗಿ ಅವರನ್ನು ಆರ್ಸಿಬಿ ತಂಡದಿಂದ ಕೈಬಿಟ್ಟಿತು. ರಾಜಸ್ಥಾನ್ ತಂಡ ಸೇರಿದ ಅವರು ಇಲ್ಲಿಯೂ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಬಳಿಕ ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡು ಈ ಬಾರಿಯ ರಣಜಿ ಟೂರ್ನಿಯಲ್ಲಿ ರಾಜ್ಯ ಪರ ಉತ್ತಮ ರನ್ ಗಳಿಸಿದ್ದರು. ಗಾಯಗೊಂಡು ಮೂರನೇ ಟೆಸ್ಟ್ನಿಂದ ರಾಹುಲ್ ಹೊರ ಬಿದ್ದ ಕಾರಣ ಭಾರತ ತಂಡದಲ್ಲಿ ಸ್ಥಾನ ಪಡೆದ ಪಡಿಕ್ಕಲ್ ಇದೀಗ ಅಂತಿಮ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.