ಅಡಿಲೇಡ್: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಗುರುವಾರ ಅಡಿಲೇಡ್ ಮೈದಾನದಲ್ಲಿ ಸೆಮಿಫೈನಲ್ ಕಾದಾಟ ನಡೆಯಲಿದೆ. ಉಭಯ ತಂಡಗಳಿಗೂ ಫೈನಲ್ ಪ್ರವೇಶಿಸಲು ಈ ಪಂದ್ಯ ಮಾಡು ಇಲ್ಲ ಮಡಿ ಪಂದ್ಯವಾಗಿದೆ ಆದರೆ ಇದ್ದಕೂ ಮಿಗಿಲಾದ ಸ್ವಾರಸ್ಯಕರ ವಿಚಾರವೆಂದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬರೋಬ್ಬರಿ 35 ವರ್ಷಗಳ ಬಳಿಕ ನಕೌಟ್ನಲ್ಲಿ ಮುಖಾಮುಖಿಯಾಗುತ್ತಿರುವುದು. ಈ ಮುಖಾಮುಖಿಯಲ್ಲಿ ಏನಾಗಿತ್ತು ಎಂಬ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡ ಕೊನೆಯದಾಗಿ ಸೆಮಿಫೈನಲ್ ಮುಖಾಮುಖಿಯಾದದ್ದು 1987ರ ಏಕದಿನ ವಿಶ್ವ ಕಪ್ನಲ್ಲಿ. ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೈಕ್ ಗ್ಯಾಟಿಂಗ್ ಸಾರಥ್ಯದ ಇಂಗ್ಲೆಂಡ್ ತಂಡ ಭಾರತ ವಿರುದ್ಧ 35 ರನ್ಗಳಿಂದ ಗೆದ್ದು ಭಾರತವನ್ನು ಕೂಟದಿಂದ ಹೊರದಬ್ಬಿತು. ಇದರ ಬಳಿಕ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ನಲ್ಲಿ ಒಮ್ಮೆಯೂ ಮುಖಾಮುಖಿಯಾಗಿಲ್ಲ.
ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು 1983ರ ಏಕದಿನ ವಿಶ್ವ ಕಪ್ ಸೆಮಿಫೈನಲ್ನಲ್ಲಿ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ಈ ಸೆಣಸಾಟದಲ್ಲಿ ಕಪಿಲ್ ಸಾರಥ್ಯದ ಟೀಮ್ ಇಂಡಿಯಾ 6 ವಿಕೆಟ್ ಅಂತರದಿಂದ ಆಂಗ್ಲರನ್ನು ಸದೆಬಡಿದು ಫೈನಲ್ ಪ್ರವೇಶಿಸಿ ಚಾಂಪಿಯನ್ ಆಗಿತ್ತು. ಇದು ಭಾರತಕ್ಕೆ ಒಲಿದ ಮೊದಲ ವಿಶ್ವ ಕಪ್ ಕಿರೀಟವಾಗಿದೆ. ಇದೀಗ 35 ವರ್ಷದ ಬಳಿಕದ ಈ ಮುಖಾಮುಖಿಯಲ್ಲಿ ಭಾರತ ಮತ್ತೆ ಗೆದ್ದು ಫೈನಲ್ ಪ್ರವೇಶಿಸಿ ಚಾಂಪಿಯನ್ ಆಗಲಿದೆಯಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | T20 World Cup | ಇಂಗ್ಲೆಂಡ್ ವಿರುದ್ಧವೂ ಪಂತ್ ಕಣಕ್ಕಿಳಿಯುವ ಸುಳಿವು ನೀಡಿದ ಡ್ರಾವಿಡ್