ರಾಜ್‌ಕೋಟ್: ಇಂಗ್ಲೆಂಡ್(IND vs ENG) ವಿರುದ್ಧ ನಾಳೆ(ಗುರುವಾರ)ಯಿಂದ ರಾಜ್ಕೋಟ್ನಲ್ಲಿ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್(India vs England 3rd Test) ಪಂದ್ಯಕ್ಕಾಗಿ ಟೀಮ್ ಇಂಡಿಯಾ(Team India) ನೂತನ ಸ್ವರೂಪದ ತಂಡವನ್ನು ಆರಿಸಿ ಕಣಕ್ಕಿಳಿಯುವ ಅನಿವಾರ್ಯತೆಗೆ ಸಿಲುಕಿದೆ. ಇದಕ್ಕೆ ಕಾರಣ ಗಾಯದಿಂದ ಅನುಭವಿ ಆಟಗಾರರು ಅಲಭ್ಯರಾಗಿರುವುದು. ಹೀಗಾಗಿ ಈ ಪಂದ್ಯದಲ್ಲಿ ಕನಿಷ್ಠ 2 ಮಂದಿ ಆಟಗಾರರು ಭಾರತ ಪರ ಟೆಸ್ಟ್ ಕ್ಯಾಪ್ ಪಡೆಯುವುದು ಪಕ್ಕಾ ಎನ್ನಬಹುದು.
ವಿಕೆಟ್ ಕೀಪರ್ ಧ್ರುವ ಜುರೆಲ್(Dhruv Jurel) ಮತ್ತು ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್(Sarfaraz Khan) ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತಗೊಂಡಿದೆ. ಇಬ್ಬರೂ ಆಟಗಾರರು ಕೂಡ ಭಾರತ ತಂಡದೊಂದಿಗೆ ಮಂಗಳವಾರ ಮತ್ತು ಬುಧವಾರ ಸುದೀರ್ಘ ಅಭ್ಯಾಸ ನಡೆಸಿದ್ದಾರೆ. ಅಲ್ಲದೆ ಬಿಸಿಸಿಐ ಬುಧವಾರ ಜುರೆಲ್ ಅವರನ್ನು ವಿಶೇಷ ಸಂದರ್ಶನ ಮಾಡುವ ಮೂಲಕ ಭಾರತದ ಜೆರ್ಸಿಯಲ್ಲಿ ಫೋಟೊ ಶೂಟ್ ಕೂಡ ಮಾಡಿದೆ. ಇದನೆಲ್ಲ ನೋಡುವಾಗ ಅವರು ನಾಳೆಯ ಪಂದ್ಯದಲ್ಲಿ ಆಡುವುದು ಖಚಿತ ಎನ್ನಬಹುದು.
𝗗𝗵𝗿𝘂𝘃 𝗝𝘂𝗿𝗲𝗹 – 𝗙𝗶𝗿𝘀𝘁 𝗜𝗺𝗽𝗿𝗲𝘀𝘀𝗶𝗼𝗻𝘀!
— BCCI (@BCCI) February 14, 2024
Being named in the Test squad 🙂
Day 1 jitters with #TeamIndia 😬
Finding his seat in the bus 🚌
Jurel is a mixed bag of fun & emotions!#INDvENG | @dhruvjurel21 | @IDFCFIRSTBank pic.twitter.com/WQryiDhdHG
ಭರತ್ಗೆ ಕೊಕ್!
ರಿಷಭ್ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆಯಲ್ಲಿರುವ ಕಾರಣ ಅವರ ಬದಲಿಗೆ ಕೆ.ಎಸ್. ಭರತ್ ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಸತತ 7 ಟೆಸ್ಟ್‌ಗಳಲ್ಲಿ ಇವರಿಂದ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಿಲ್ಲ. ಕೀಪಿಂಗ್ ಕೂಡ ಗಮನಾರ್ಹ ಮಟ್ಟದಲಿಲ್ಲ. ಹೀಗಾಗಿ ಅವರನ್ನು ಮೂರನೇ ಪಂದ್ಯಕ್ಕೆ ಬೆಂಚ್ ಕಾಯಿಸುವ ಸಾಧ್ಯತೆ ಅಧಿಕವಾಗಿದೆ.
ಇದನ್ನೂ ಓದಿ KL Rahul: ಕೆ.ಎಲ್ ರಾಹುಲ್ ಮೇಲೆ ಬಿಸಿಸಿಐ ಗರಂ; ವಿಡಿಯೊ ಹಂಚಿಕೊಂಡಿದ್ದೇ ಕಾರಣ!
ಸರ್ಫರಾಜ್ಗೆ ಅವಕಾಶ
ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಸ್ಥಾನ ಮತ್ತು ಫಿಟ್ನೆಸ್ ಪಾಸ್ ಆಗದ ಕಾರಣ ಮೂರನೇ ಪಂದ್ಯದಿಂದ ಡ್ರಾಪ್ ಔಟ್ ಆಗಿರುವ ಕೆ.ಎಲ್ ರಾಹುಲ್ ಕ್ರಮಾಂಕವೂ ಖಾಲಿ ಇದೆ. ಈ 2 ಸ್ಥಾನಗಳ ಪೈಕಿ ಒಂದು ಸ್ಥಾನ ಸರ್ಫರಾಜ್ ಖಾನ್ಗೆ ಸಿಗುವು ಪಕ್ಕಾ ಆಗಿದೆ. ದೇಶೀಯ ಕ್ರಿಕೆಟ್ನಲ್ಲಿ ಅಭೂತಪೂರ್ವ ಸಾಧನೆ ತೋರಿರುವ ಮುಂಬೈಕರ್ ಸರ್ಫರಾಜ್ಗೆ ಈ ಹಿಂದೆಯೇ ಅನೇಕ ಮಾಜಿ ಆಟಗಾರರು ತಂಡದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಇದೀಗ ಅವರಿಗೆ ಭಾರತ ಪರ ಆಡುವ ಕಾಲ ಸನ್ನಿಹಿತವಾದಂತಿದೆ.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ತ ಪಡಿಕ್ಕಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.