Site icon Vistara News

IND vs ENG: ಗಿಲ್‌ಗೆ ಪೂಜಾರಗಿಂತ ಹೆಚ್ಚು ಆದ್ಯತೆ ಸಿಗುತ್ತಿದೆ; ಅನಿಲ್ ಕುಂಬ್ಳೆ ಆಕ್ರೋಶ

Shubman Gill was unable to capitalise on a solid start

ಹೈದರಾಬಾದ್: ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಿರುವ ಭಾರತ ಕ್ರಿಕೆಟ್​ ತಂಡದ ಯುವ ಆಟಗಾರ ಶುಭಮನ್​ ಗಿಲ್​ಗೆ(Shubman Gill) ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರಗಿಂತ(Cheteshwar Pujara) ಹೆಚ್ಚಿನ ಆದ್ಯತೆ ಸಿಗುತ್ತಿದೆ ಮಾಜಿ ಆಟಗಾರ ಅನಿಲ್ ಕುಂಬ್ಳೆ(Anil Kumble) ಅಭಿಪ್ರಾಯಪಟ್ಟಿದ್ದಾರೆ.

ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಕಾಣುತ್ತಿರುವ ವಿಚಾರವಾಗಿ ಮಾತನಾಡಿದ ಅನಿಲ್ ಕುಂಬ್ಳೆ, ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್‌ನಲ್ಲಿ ಶುಭಮನ್​ ಗಿಲ್​ ಗಮನಾರ್ಹ ಪ್ರದರ್ಶನ ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಗಿಲ್ ಕಳೆದ 11 ಟೆಸ್ಟ್‌ ಇನಿಂಗ್ಸ್​ ಆಡಿದರೂ ಕೂಡ ಅವರಿಂದ ಕನಿಷ್ಠಿ ಒಂದೇ ಒಂದು ಅರ್ಧಶತಕವನ್ನೂ ಬಾರಿಸಲು ಸಾಧ್ಯವಾಗಿಲ್ಲ. ಗಿಲ್​ಗೆ ನೀಡಲಾದ ಅವಕಾಶ ಬಹುಶಃ ಚೇತೇಶ್ವರ ಪೂಜಾರಗೂ ಕೂಡ ಸಿಗಲಿಲ್ಲ ಎಂದು ಹೇಳಿದರು.

ಪೂಜಾರ ಸದ್ಯ ರಣಜಿ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಪೂರೈಸಿದ ದಾಖಲೆಯನ್ನು ಮಾಡಿರುವ ಅವರು ತವರಿನ ಟೆಸ್ಟ್​ ಸರಣಿಯಲ್ಲಿ(IND vs ENG) ಅವಕಾಶ ವಂಚಿತರಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅನಿಲ್ ಕುಂಬ್ಳೆ ಹೇಳಿದರು.

ಇದನ್ನೂ ಓದಿ IND vs ENG: ದಾಖಲೆ ನಿರ್ಮಿಸಲು ಅಶ್ವಿನ್​ಗೆ ಬೇಕು ಕೇವಲ 5 ವಿಕೆಟ್​

ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ರನ್ ಮಳೆಯನ್ನೇ ಸುರಿಸಿದ ಗಿಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಮಂಕಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನ(India vs England 1st Test) ಎರಡೂ ಇನಿಂಗ್ಸ್​ನಲ್ಲಿಯೂ ಅವರು ನಿರೀಕ್ಷಿತ ಬ್ಯಾಟಿಂಗ್​ ತೋರ್ಪಡಿಸುವಲ್ಲಿ ಎಡವಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ 23 ರನ್​ ಬಾರಿಸಿದ್ದ ಗಿಲ್​ ದ್ವಿತೀಯ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡರು. ಈ ಮೂಲಕ ಕಳೆದ 11 ಟೆಸ್ಟ್​ ಇನಿಂಗ್ಸ್​ನಲ್ಲಿ ಘೋರ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದರು.

13, 8, 6, 10, 29*, 2, 26, 36, 10, 23, 0. ಇದು ಶುಭಮನ್​ ಗಿಲ್​ ಅವರು ಕಳೆದ 11 ಟೆಸ್ಟ್ ಇನಿಂಗ್ಸ್​ನಲ್ಲಿ ಗಳಿಸ ಮೊತ್ತವಾಗಿದೆ. ದ್ವಿತೀಯ ಟೆಸ್ಟ್​ ಪಂದ್ಯದಲ್ಲಾದರೂ ಎಚ್ಚೆತ್ತುಕೊಂಡು ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರದೇ ಹೋದರೆ ಅವರನ್ನು ತಂಡದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಬಹುದು.

35 ವರ್ಷದ ಪೂಜಾರ ಕೊನೆಯ ಬಾರಿ ಭಾರತ ಪರ ಆಡಿದ್ದು ಜುಲೈ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ. ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದಾಗಿ ಅವರು ತಂಡದಿಂದ ಹೊರಬಿದ್ದಿದ್ದರು. ಪೂಜಾರ ಎರಡೂ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. 

Exit mobile version