ಹೈದರಾಬಾದ್: ಇಂಗ್ಲೆಂಡ್(IND vs ENG) ವಿರುದ್ಧ ಭಾರತ ತಂಡ ನಾಳೆ ಮೊದಲ ಟೆಸ್ಟ್ ಪಂದ್ಯ ಆಡದಿಲಿದೆ. 5 ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಸಿಕ್ಸರ್ಗಳ ಮೂಲಕ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ.
ರೋಹಿತ್ ಶರ್ಮ ಅವರು 5 ಪಂದ್ಯಗಳ ಸರಣಿಯಲ್ಲಿ ಒಟ್ಟು 14 ಸಿಕ್ಸರ್ ಬಾರಿಸಿದರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ದಾಖಲೆ ಮಾಜಿ ಡ್ಯಾಶಿಂಗ್ ಆಟಗಾರ ವಿರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ 104 ಟೆಸ್ಟ್ ಪಂದ್ಯ ಆಡಿ 91 ಸಿಕ್ಸರ್ ಬಾರಿಸಿ ಟೀಮ್ ಇಂಡಿಯಾ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 78 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮ ಅವರು 2 ಸಿಕ್ಸರ್ ಬಾರಿಸಿದರೆ ಧೋನಿ ದಾಖಲೆ ಪತನಗೊಳ್ಳಲಿದೆ. 14 ಸಿಕ್ಸರ್ ಬಾರಿಸಿದರೆ ವೀರೇಂದ್ರ ಸೆಹವಾಗ್ ದಾಖಲೆ ಪತನಗೊಳ್ಳಲಿದೆ. ರೋಹಿತ್ ಸದ್ಯ 54 ಪಂದ್ಯ ಆಡಿ 77 ಸಿಕ್ಸರ್ ಬಾರಿಸಿದ್ದಾರೆ.
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಭಾರತೀಯ ಆಟಗಾರರು
ಆಟಗಾರ | ಸಿಕ್ಸರ್ |
ವಿರೇಂದ್ರ ಸೆಹವಾಗ್ | 91 |
ಮಹೇಂದ್ರ ಸಿಂಗ್ ಧೋನಿ | 77 |
ರೋಹಿತ್ ಶರ್ಮ | 76 |
ಸಚಿನ್ ತೆಂಡೂಲ್ಕರ್ | 69 |
ಕಪಿಲ್ ದೇವ್ | 61 |
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ ದಾಖಲೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಸ್ಟೋಕ್ಸ್ 97 ಪಂದ್ಯ ಆಡಿ 124 ಸಿಕ್ಸರ್ ಬಾರಿಸಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ನಾಯಕನಾಗಿರುವ ಅವರು ಈ ಸಿಕ್ಸರ್ಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ಅವಕಾಶವಿದೆ.
ಇದನ್ನೂ ಓದಿ IND vs ENG: ಕ್ರಿಕೆಟ್ ದೇವರು ಸಚಿನ್ ದಾಖಲೆ ಮೇಲೆ ಕಣ್ಣಿಟ್ಟ ಜೋ ರೂಟ್!
ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಗಳು
ಆಟಗಾರ | ಸಿಕ್ಸರ್ |
ಬೆನ್ ಸ್ಟೋಕ್ಸ್ | 124* |
ಬ್ರೆಂಡನ್ ಮೆಕಲಮ್ | 107 |
ಆ್ಯಡಂ ಗಿಲ್ಕ್ರಿಸ್ಟ್ | 100 |
ಕ್ರಿಸ್ ಗೇಲ್ | 98 |
ಜಾಕ್ ಕ್ಯಾಲಿಸ್ | 97 |
ತಂಡವಾಗಿ ಆಡುತ್ತೇವೆ
ಪಂದ್ಯಕ್ಕೂ ಮುನ್ನ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮ, ನಾನು ಈ ಸರಣಿಗೆ ತಂಡವಾಗಿ ಏನು ಮಾಡಬಹುದು ಎಂಬುದರ ಮೇಲೆ ಹೆಚ್ಚು ಗಮನಹರಿಸಿದ್ದೇವೆ. ಎದುರಾಳಿ ತಂಡವು ಹೇಗೆ ಆಡಲಿದೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ನಮ್ಮ ಆಟವನ್ನು ನಾವು ಪ್ರದರ್ಶಿಸಲಿದ್ದೇವೆ ಎಂದು ಹೇಳಿದರು.
“ಕೇಪ್ ಟೌನ್ ಗೆಲುವು ನಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ. ಆದರೆ, ಹೈದರಾಬಾದ್ ಸಂಪೂರ್ಣವಾಗಿ ವಿಭಿನ್ನ ಪಿಚ್. ಭಾರತದಲ್ಲಿ ನಾವು ಐದು ಟೆಸ್ಟ್‌ಗಳನ್ನು ಆಡುತ್ತಿರುವುದು ಇದು ಮೊದಲ ಬಾರಿಗೆ, ನಾವು ಯಾವಾಗಲೂ ಸುದೀರ್ಘ ಸರಣಿಗಳನ್ನು ಆಡಲು ಬಯಸುತ್ತೇವೆ. 2 ತಿಂಗಳ ಕಾಲ ಉತ್ತಮ ಮತ್ತು ಸ್ಥಿರವಾದ ಕ್ರಿಕೆಟ್ ಆಡುವುದು ಒಂದು ಸವಾಲಾಗಿದೆ” ಎಂದು ರೋಹಿತ್ ಹೇಳಿದ್ದಾರೆ.