ಹೈದರಾಬಾದ್: ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ ಮುತ್ತಿನ ನಗರಿ ಹೈದರಾಬಾದ್ನಲ್ಲಿ ಆರಂಭಗೊಳ್ಳಿದೆ. ಇತ್ತಂಡಗಳ ಈ ಕಾದಾಟಕ್ಕೆ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ(Rajiv Gandhi International Stadium) ಅಣಿಯಾಗಿದೆ. ಈ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಎಷ್ಟು ಟೆಸ್ಟ್ ಆಡಿದೆ? ದಾಖಲೆ ಯಾರ ಪರ ಇದೆ? ಎನ್ನುವ ಮಾಹಿತಿ ಇಂತಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ 5 ಟೆಸ್ಟ್ ಪಂದ್ಯಗಳು ಗಳನ್ನು ಆಡಿದೆ. ಈ ಪೈಕಿ ಭಾರತ ನಾಲ್ಕರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಇಂಗ್ಲೆಂಡ್ ಕೂಡ ಇಲ್ಲಿ ಒಂದು ಟೆಸ್ಟ್ ಪಂದ್ಯ ಆಡಿ ಡ್ರಾ ಸಾಧಿಸಿದೆ. ಹೀಗಾಗಿ ಉಭಯ ತಂಡಗಳ ಈ ಪಂದ್ಯ ತೀವ್ರ ಫೈಪೋಟಿ ಎಂದು ನಿರೀಕ್ಷೆ ಮಾಡಬಹುದು.
ಇದನ್ನೂ ಓದಿ IND vs ENG: ಭಾರತದಲ್ಲಿ ಇಂಗ್ಲೆಂಡ್ ತಂಡದ ಟೆಸ್ಟ್ ಇತಿಹಾಸವೇ ಬಲು ರೋಚಕ!
ಭಾರತ ತಂಡ ಇಲ್ಲಿ ಒಮ್ಮೆಯೂ ಸೋತಿಲ್ಲ. ಕಳೆದ ಐದು ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಈ ಹಿಂದೆ ಸ್ಪಿನ್ ಪಿಚ್ ಆಗಿದ್ದರೂ ಕೂಡ ಪಂದ್ಯ ನಡೆಯದೆ ಹಲವು ವರ್ಷ ಆದ ಕಾರಣದಿಂದ ಈಗ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದು ಕೂಡ ಮುಖ್ಯವಾಗಿದೆ. ಆದರೂ ಕೂಡ ಉಭಯ ತಂಡಗಳು ಸ್ಪಿನ್ಗೆ ಹೆಚ್ಚಿನ ಮಹತ್ವ ನೀಡಿದೆ. ಇಂಗ್ಲೆಂಡ್ ಈಗಾಗಲೇ ಪಂದ್ಯಕ್ಕೂ ಮುನ್ನವೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಏಕೈಕ ವೇಗಿಗೆ ಅವಕಾಶ ನೀಡಿ ಉಳಿದ ಎಲ್ಲ ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದೆ.
Dhoni ☝️
— England Cricket (@englandcricket) January 22, 2024
H. Singh ☝️
Kumar ☝️
One of those magical Broady spells in 2011 ✨@Igcom #MoreThanAMoment#INDvENG pic.twitter.com/xqcmNubaRV
ಇತ್ತಂಡಗಳು ಮೊದಲ ಬಾರಿ ಸೆಣಸಾಡಿದ್ದು 2010ರಲ್ಲಿ. ಎಂ.ಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ತಂಡ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ನಲ್ಲಿ ಸುಧಾರಿತ ಪ್ರದರ್ಶನವನ್ನು ತೋರುತ್ತಿದ್ದರೂ 2012 ರಿಂದ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಈ ಬಾರಿಯಾದರೂ ಗೆದ್ದಿತೇ ಎನ್ನುವುದು ಈ ಸರಣಿಯ ಕುತೂಹಲ.
ಇದನ್ನೂ ಓದಿ IND vs ENG: ಧ್ರುವ್ ಜುರೆಲ್ ಟೆಸ್ಟ್‌ಗೆ ಪದಾರ್ಪಣೆ ಸಾಧ್ಯತೆ
ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಬ್ಯಾಟಿಂಗ್, ಬೌಲಿಂಗ್ ಸಾಧಕರು
ಹೆಚ್ಚು ರನ್: ಸಚಿನ್ ತೆಂಡೂಲ್ಕರ್- 32 ಟೆಸ್ಟ್‌ಗಳಲ್ಲಿ 2535 ರನ್.
ಗರಿಷ್ಠ ವೈಯಕ್ತಿಕ ಸ್ಕೋರ್: ಗ್ರಹಾಂ ಗೂಚ್ (333 ರನ್) ಲಾರ್ಡ್ಸ್, ಜುಲೈ 1990.
ಶತಕ: ಜೋ ರೂಟ್ – 25 ಟೆಸ್ಟ್‌ಗಳಲ್ಲಿ 9.
ಅರ್ಧಶತಕ: ಸುನಿಲ್ ಗವಾಸ್ಕರ್ – 28 ಟೆಸ್ಟ್‌ಗಳಲ್ಲಿ 16.
ಅತಿ ಹೆಚ್ಚು ಸಿಕ್ಸರ್: ಇಯಾನ್ ಬೋಥಮ್- 14 ಟೆಸ್ಟ್‌ಗಳಲ್ಲಿ 24.
ಬೌಲಿಂಗ್ ದಾಖಲೆ
ಅತಿ ಹೆಚ್ಚು ವಿಕೆಟ್‌ಗಳು: ಜೇಮ್ಸ್ ಆಂಡರ್ಸನ್ – 35 ಟೆಸ್ಟ್‌ಗಳಲ್ಲಿ 139 ವಿಕೆಟ್‌ಗಳು.
ಅತ್ಯುತ್ತಮ ಬೌಲಿಂಗ್ (ಇನಿಂಗ್ಸ್): ಫ್ರೆಡ್ ಟ್ರೂಮನ್ (31ಕ್ಕೆ 8) ಮ್ಯಾಂಚೆಸ್ಟರ್, ಜುಲೈ 1952.
ಅತ್ಯುತ್ತಮ ಬೌಲಿಂಗ್ (ಪಂದ್ಯ): ಇಯಾನ್ ಬೋಥಮ್ (106ಕ್ಕೆ 13) ವಾಂಖೆಡೆ ಸ್ಟೇಡಿಯಂ, ಫೆಬ್ರವರಿ 1980.
ಅತಿ ಹೆಚ್ಚು ಐದು ವಿಕೆಟ್ ಗಳಿಕೆ: ಭಗವತ್ ಚಂದ್ರಶೇಖರ್ – 23 ಟೆಸ್ಟ್‌ಗಳಲ್ಲಿ 8.
ಹೆಚ್ಚು 10-ವಿಕೆಟ್ ಸಾಧನೆಗಳು (ಪಂದ್ಯ): ಅಲೆಕ್ ಬೆಡ್ಸರ್ – 7 ಟೆಸ್ಟ್‌ಗಳಲ್ಲಿ 2.
ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು: ಭಗವತ್ ಚಂದ್ರಶೇಖರ್- 5 ಟೆಸ್ಟ್‌ಗಳಲ್ಲಿ 35 ವಿಕೆಟ್‌ಗಳು (ಇಂಗ್ಲೆಂಡ್ ಪ್ರವಾಸ 1972-73).