ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜನವರಿ 25 ರಂದು (ಗುರುವಾರ) ಹೈದರಾಬಾದ್‌ನ(Hyderabad) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Rajiv Gandhi International Stadium) ಆರಂಭಗೊಳ್ಳಲಿದೆ. ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಈ ಸರಣಿಯನ್ನೂ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಗುರಿಯಲ್ಲಿದ್ದಾರೆ. ಹೈದರಾಬಾದ್ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ ಎನ್ನುವ ಮಾಹಿತಿ ಇಂತಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದುವರೆಗೆ ಭಾರತ 5 ಟೆಸ್ಟ್ ಪಂದ್ಯಗಳು ಗಳನ್ನು ಆಡಿದೆ. ಆ ಪೈಕಿ ಭಾರತ ನಾಲ್ಕರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಡ್ರಾ ಸಾಧಿಸಿದ್ದು ಇಂಗ್ಲೆಂಡ್ ವಿರುದ್ದವೇ. ಭಾರತ ತಂಡ ಇಲ್ಲಿ ಒಮ್ಮೆಯೂ ಸೋತಿಲ್ಲ. ಕಳೆದ ಐದು ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಇದಾಗಿದೆ. ಹಿಂದಿನ ದಾಖಲೆ ನೋಡುವಾಗ ಭಾರತ ಈ ಬಾರಿಯೂ ಇಲ್ಲಿ ಗೆದ್ದು ತನ್ನ ಅಜೇಯ ದಾಖಲೆಯನ್ನು ಮುಂದುವರಿಸುವ ವಿಶ್ವಾಸವಿದೆ.
ಇಂಗ್ಲೆಂಡ್ ತಂಡದ ವಿರುದ್ಧ ಭಾರತ ಈ ಮೈದಾನದಲ್ಲಿ 1 ಪಂದ್ಯ ಮಾತ್ರ ಆಡಿದೆ. ಇತ್ತಂಡಗಳು ಮೊದಲ ಬಾರಿ ಸೆಣಸಾಡಿದ್ದು 2010ರಲ್ಲಿ. ಎಂ.ಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಭಾರತ ತಂಡ ಈ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
ಇದನ್ನೂ ಓದಿ India vs England, 1st Test: ಕೋಚ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ನಲ್ಲಿ ಸುಧಾರಿತ ಪ್ರದರ್ಶನವನ್ನು ತೋರುತ್ತಿದ್ದರೂ 2012 ರಿಂದ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಈ ಬಾರಿಯಾದರೂ ಗೆದ್ದಿತೇ ಅಥವಾ ರೋಹಿತ್ ಹ್ಯಾಟ್ರಿಕ್ ಸರಣಿ ಗೆದ್ದ ನಾಯಕನಾದರೇ? ಎನ್ನುವುದು ಈ ಸರಣಿಯ ಕುತೂಹಲ.
ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಬ್ಯಾಟಿಂಗ್, ಬೌಲಿಂಗ್ ಸಾಧಕರು
ಹೆಚ್ಚು ರನ್: ಸಚಿನ್ ತೆಂಡೂಲ್ಕರ್- 32 ಟೆಸ್ಟ್‌ಗಳಲ್ಲಿ 2535 ರನ್.
ಗರಿಷ್ಠ ವೈಯಕ್ತಿಕ ಸ್ಕೋರ್: ಗ್ರಹಾಂ ಗೂಚ್ (333 ರನ್) ಲಾರ್ಡ್ಸ್, ಜುಲೈ 1990.
ಶತಕ: ಜೋ ರೂಟ್ – 25 ಟೆಸ್ಟ್‌ಗಳಲ್ಲಿ 9.
ಅರ್ಧಶತಕ: ಸುನಿಲ್ ಗವಾಸ್ಕರ್ – 28 ಟೆಸ್ಟ್‌ಗಳಲ್ಲಿ 16.
ಅತಿ ಹೆಚ್ಚು ಸಿಕ್ಸರ್: ಇಯಾನ್ ಬೋಥಮ್- 14 ಟೆಸ್ಟ್‌ಗಳಲ್ಲಿ 24.
ಬೌಲಿಂಗ್ ದಾಖಲೆ
ಅತಿ ಹೆಚ್ಚು ವಿಕೆಟ್‌ಗಳು: ಜೇಮ್ಸ್ ಆಂಡರ್ಸನ್ – 35 ಟೆಸ್ಟ್‌ಗಳಲ್ಲಿ 139 ವಿಕೆಟ್‌ಗಳು.
ಅತ್ಯುತ್ತಮ ಬೌಲಿಂಗ್ (ಇನಿಂಗ್ಸ್): ಫ್ರೆಡ್ ಟ್ರೂಮನ್ (31ಕ್ಕೆ 8) ಮ್ಯಾಂಚೆಸ್ಟರ್, ಜುಲೈ 1952.
ಅತ್ಯುತ್ತಮ ಬೌಲಿಂಗ್ (ಪಂದ್ಯ): ಇಯಾನ್ ಬೋಥಮ್ (106ಕ್ಕೆ 13) ವಾಂಖೆಡೆ ಸ್ಟೇಡಿಯಂ, ಫೆಬ್ರವರಿ 1980.
ಅತಿ ಹೆಚ್ಚು ಐದು ವಿಕೆಟ್ ಗಳಿಕೆ: ಭಗವತ್ ಚಂದ್ರಶೇಖರ್ – 23 ಟೆಸ್ಟ್‌ಗಳಲ್ಲಿ 8.
ಹೆಚ್ಚು 10-ವಿಕೆಟ್ ಸಾಧನೆಗಳು (ಪಂದ್ಯ): ಅಲೆಕ್ ಬೆಡ್ಸರ್ – 7 ಟೆಸ್ಟ್‌ಗಳಲ್ಲಿ 2.
ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು: ಭಗವತ್ ಚಂದ್ರಶೇಖರ್- 5 ಟೆಸ್ಟ್‌ಗಳಲ್ಲಿ 35 ವಿಕೆಟ್‌ಗಳು (ಇಂಗ್ಲೆಂಡ್ ಪ್ರವಾಸ 1972-73).