ಅಡಿಲೇಡ್: ಭಾರತ ಮತ್ತು ಇಂಗ್ಲೆಂಡ್(IND VS ENG) ವಿರುದ್ಧ ಗುರುವಾರ ಅಡಿಲೇಡ್ನಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ನ ಸೆಮಿಫೈನಲ್ ಪಂದ್ಯದ ಹವಾಮಾನ ವರದಿ ಮತ್ತು ಪಿಚ್ ರಿಪೋರ್ಟ್ ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.
ಪಿಚ್ ರಿಪೋರ್ಟ್
ಅಡಿಲೇಡ್ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ಗೂ ಸಮಾನವಾಗಿ ನೆರವು ನೀಡಲಿದೆ. ಆರಂಭದಲ್ಲಿ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲ ನೀಡುವ ಸಾಧ್ಯತೆಯಿದ್ದು ಬಳಿಕ ಸ್ಪಿನ್ನರ್‌ಗಳಿಗೆ ಉತ್ತಮ ನೆರವು ದೊರೆಯಲಿದೆ. ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವಾಗ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಬೇಕಿದೆ. ಉಭಯ ತಂಡಗಳಲ್ಲಿಯೂ ಸ್ಟಾರ್ ಸ್ಪಿನ್ನರ್ಗಳಿರುವ ಕಾರಣ ಸಮಾನ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಮಳೆ ಭೀತಿ ಇಲ್ಲ
ಮಳೆ ಬಂದರೂ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವಿದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಸಮರಕ್ಕೆ ಮಳೆ ಭೀತಿ ಇಲ್ಲ ಎಂದು ತಿಳಿದು ಬಂದಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಗುರುವಾರ ಅಡಿಲೇಡ್ನಲ್ಲಿ ಮಳೆಯಾಗುವ ಯಾವೆದೇ ಸಾಧ್ಯತೆಗಳಿಲ್ಲ ಎಂದು ತಿಳಿಸಿದೆ. ಟೂರ್ನಿಯಲ್ಲಿ ಇದುವರೆಗೆ ಭಾರತಕ್ಕೆ ಮಳೆ ತೊಂದರೆ ನೀಡಿಲ್ಲ. ಪಾಕಿಸ್ತಾನ ವಿರುದ್ಧದ ಕೂಟದ ಮೊದಲ ಪಂದ್ಯಕ್ಕೆ ಮಳೆ ಭೀತಿ ಇದೆ ಎಂದು ಹೇಳಿದರೂ ಯಾವುದೇ ಅಡ್ಡಿಯಾಗಿಲ್ಲ. ಬಾಂಗ್ಲಾ ವಿರುದ್ಧ ಪಂದ್ಯದ ವೇಳೆ ಮಳೆ ಅಡ್ಡಿಪಡಿಸಿದರೂ, ಅದು ಭಾರತಕ್ಕೆ ವರವಾಗಿಯೇ ಪರಿಣಮಿಸಿತು. ಆದರೆ ಗುರುವಾರದ ಪಂದ್ಯಕ್ಕೆ ಯಾವುದೇ ವಿಘ್ನವಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಇದನ್ನೂ ಓದಿ | T20 Ranking | ಸೂರ್ಯ ನಂ.1 ಸ್ಥಾನ ಭದ್ರ, ಟಾಪ್ 10ನಿಂದ ಹೊರಬಿದ್ದ ವಿರಾಟ್ ಕೊಹ್ಲಿ