Site icon Vistara News

IND vs ENG: ಭಾರತಕ್ಕೆ ಐದು ರನ್‌ ದಂಡ ವಿಧಿಸಿದ ಅಂಪೈರ್​; ಕಾರಣವೇನು?

R Ashwin drives on the off side

ರಾಜ್​ಕೋಟ್​: ಇಲ್ಲಿನ ನಿರಂಜನ್ ಶಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಭಾರತಕ್ಕೆ ಐದು(India handed five-run penalty) ರನ್‌ಗಳ ದಂಡ ವಿಧಿಸಲಾಗಿದೆ. ಇದಕ್ಕೆ ಕಾರಣ ಆರ್​.ಅಶ್ವಿನ್​ ಅವರು(Ravichandran Ashwin) ಪಿಚ್​ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ದು.

5 ವಿಕೆಟ್​ಗೆ 326 ರನ್​ ಗಳಿಸಿದ್ದಲ್ಲಿಂದ ದ್ವಿತೀಯ ದಿನದಾಟ ಆರಂಭಿಸಿದ ಭಾರತ 5 ರನ್​ ಒಟ್ಟುಗೂಡುವಷ್ಟರಲ್ಲಿ 2 ವಿಕೆಟ್​ ಕಳೆದುಕೊಂಡಿತು. ಶತಕ ವೀರ ಜಡೇಜಾ 2 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಮೊದಲ ದಿನದಾಟದ ಅಂತ್ಯಕ್ಕೆ ಅವರು 110 ರನ್​ ಬಾರಿಸಿದ್ದರು. ಇಂದು 2 ಗಳಿಸಿ ಗಳಿಸಿ ಒಟ್ಟು 112 ರನ್​ ಕಲೆಹಾಕಿದರು. ಕುಲ್​ದೀಪ್​ ಯಾದವ್​ 4 ರನ್​ಗೆ ಔಟಾದರು. ಸದ್ಯ ಅಶ್ವಿನ್​ ಮತ್ತು ಜುರೆಲ್​ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಭೋಜನ ವಿರಾಮದ ಅಂತ್ಯಕ್ಕೆ ಭಾರತ 7 ವಿಕೆಟ್​ ನಷ್ಟಕ್ಕೆ 388 ರನ್​ ಗಳಿಸಿದೆ.

ಭಾರತದ ಬ್ಯಾಟರ್ ರವಿಚಂದ್ರನ್ ಅಶ್ವಿನ್ ಪಿಚ್ ಮಧ್ಯದಲ್ಲಿ ಓಡಿದ ಪರಿಣಾಮ ಇಂಗ್ಲೆಂಡ್​ ತಂಡಕ್ಕೆ ಬ್ಯಾಟಿಂಗ್​ ಇನಿಂಗ್ಸ್​ ಆರಂಭಿಸುವ ಮುನ್ನವೇ 5 ರನ್​ಗಳು ಲಭಿಸಿದೆ. ಭಾರತದ ಮೊದಲ ಇನಿಂಗ್ಸ್‌ನ 102 ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ Kane Williamson: ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಕೇನ್​ ವಿಲಿಯಮ್ಸನ್

ಐಸಿಸಿ ನಿಯಮದ ಪ್ರಕಾರ ಬ್ಯಾಟರ್​ ಅಥವಾ ಬೌಲರ್ ಪಿಚ್​ ಮಧ್ಯ ಭಾಗದಲ್ಲಿ ಓಡಾಡ ಬಾರದು. ಒಂದೊಮ್ಮೆ ಓಡಿದರೆ ಅಂಪೈರ್​ ಮೊದಲ ಹಂತದಲ್ಲಿ ಎಚ್ಚರಿಕೆ ನೀಡುತ್ತಾರೆ. ಮತ್ತೆ ಈ ತಪ್ಪು ಪುನಾರಾವರ್ತನೆಗೊಂಡರೆ ಆಗ ಫೀಲ್ಡ್​ ಅಂಪೈರ್​ 5 ಅಂಕದ ಫೆನಾಲ್ಟಿ ನೀಡುತ್ತಾರೆ. ಅಶ್ವಿನ್​ಗೆ ಅಂಪೈರ್​ ಎಚ್ಚರಿಕೆ ನೀಡಿದರೂ ಕೂಡ ಅವರು ಮತ್ತೆ ಪಿಚ್​ ಮಧ್ಯ ಭಾಗದಲ್ಲಿ ಓಡಿದ್ದಾರೆ. ಹೀಗಾಗಿ ಭಾರತ ತಂಡಕ್ಕೆ 5 ರನ್‌ಗಳ ದಂಡ ವಿಧಿಸಲಾಗಿದೆ. ಎಂಸಿಸಿಯ ಕಾನೂನು 41.14.1 ಪ್ರಕಾರ ಉದ್ದೇಶಪೂರ್ವಕ ಪ್ರಕರಣ ಇದಾಗಿದೆ. ​ಇಂಗ್ಲೆಂಡ್​ ವಿಕೆಟ್​ ನಷ್ಟವಿಲ್ಲದೆ 5 ರನ್​ನಿಂದ ಬ್ಯಾಟಿಂಗ್​ ಆರಂಭಿಸಲಿದೆ.

Exit mobile version