Site icon Vistara News

IND vs ENG: 20 ವರ್ಷಗಳ ಬಳಿಕ ಗೆಲುವು ಕಂಡೀತೇ ಭಾರತ; ಗೆದ್ದರೆ ಅಧಿಕೃತ ಸೆಮಿ ಪ್ರವೇಶ

India vs England

ಲಕ್ನೋ: ಸತತ ಸೋಲಿನಿಂದ ವಿಶ್ವಕಪ್​ ಟೂರ್ನಿಯಿಂದ ಹೊರ ಬೀಳುವ ಹಂತಕ್ಕೆ ಬಂದು ನಿಂತಿರುವ ಹಾಲಿ ಚಾಂಪಿಯನ್​ ಇಂಗ್ಲೆಂಡ್(IND vs ENG)​ ಮತ್ತು ಸೆಮಿಫೈನಲ್ ಹೊಸ್ತಿಲಲ್ಲಿರುವ ಭಾರತ, ಲಕ್ನೋದಲ್ಲಿ ಲಕ್​ ಪರೀಕ್ಷೆಗೆ ಸಿದ್ಧವಾಗಿದೆ. ಇತ್ತಂಡಗಳ ಈ ಪಂದ್ಯ ಭಾನುವಾರ ಲಕ್ನೋದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ(Ekana Cricket Stadium, Lucknow)ನಲ್ಲಿ ನಡೆಯಲಿದೆ.

20 ವರ್ಷಗಳ ಬಳಿಕ ಗೆಲುವು ಒಲಿದೀತೇ?

ಭಾರತ ತಂಡ ಇಂಗ್ಲೆಂಡ್​ ವಿರುದ್ಧ ವಿಶ್ವಕಪ್​ನಲ್ಲಿ ಗೆಲುವು ಕಾಣದೆ 20 ವರ್ಷಗಳೇ ಕಳೆದಿದೆ. ಕೊನೆಯ ಬಾರಿ ಭಾರತ ತಂಡ ಗೆಲುವು ಸಾಧಿಸಿದ್ದು 2003ರಲ್ಲಿ. ಆ ಬಳಿಕ ಎರಡು ವಿಶ್ವಕಪ್​ ಆಡಿದರೂ ಭಾರತ ಗೆಲುವು ಸಾಧಿಸಲು ವಿಫಲವಾಗಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಕಂಡಿದೆ. 2015 ಆವೃತ್ತಿಯಲ್ಲಿ ಉಭಯ ತಂಡಗಳಿಗೆ ಮುಖಾಮುಖಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಭಾರತ 20 ವರ್ಷಗಳ ಬಳಿಕ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಸದ್ಯದ ಇಂಗ್ಲೆಂಡ್​ ಪರಿಸ್ಥಿತಿಯನ್ನು ನೋಡುವಾಗ ಇದು ಭಾರತಕ್ಕೆ ಕಷ್ಟವಲ್ಲ.

ಸೂರ್ಯಕುಮಾರ್​ಗೆ ಮತ್ತೊಂದು ಅವಕಾಶ

ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಅವರು ಈ ಪಂದ್ಯಕ್ಕೂ ಅಲಭ್ಯರಾದ ಕಾರಣ ಸೂರ್ಯಕುಮಾರ್​ ಯಾದವ್​ ಅವರು ಆಡುವುದು ಖಚಿತ. ಕಳೆದ ಪಂದ್ಯದಲ್ಲಿ ಅವರು ಆಡಿದರೂ ರನೌಟ್​ ಆಗಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಕಳೆದ ಪಂದ್ಯದ ವೈಫಲ್ಯಕ್ಕೆ ಈ ಪಂದ್ಯದಲ್ಲಿ ಸಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಶಾರ್ದೂಲ್ ಠಾಕೂರ್ ಆಲ್​ರೌಂಡರ್ (Hardik Pandya)​ ಆಗಿದ್ದರೂ, ಅವರು ಈ ಹಿಂದಿನ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಹೀಗಾಗಿ ಅವರಿಗೆ ಜಾಗ ಸಿಗುವುದು ಕಷ್ಟ.

ಇದನ್ನೂ ಓದಿ AUS vs NZ: ಅಂತಿಮ ಓವರ್​ನಲ್ಲಿ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ

ಸಿರಾಜ್​ಗೆ ವಿಶ್ರಾಂತಿ ಸಾಧ್ಯತೆ

ಲಕ್ನೋ ಪಿಚ್​ ಸ್ಪಿನ್ನರ್​​​ಗಳಿಗೆ ಹೆಚ್ಚು ನೆರವು ನೀಡಲಿದೆ. ಹಾಗಾಗಿ ಭಾರತದ ಮೂವರು ವೇಗಿಗಳ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಆರ್.​ ಅಶ್ವಿನ್ (R Ashwin) ಅವ​ರನ್ನು ಆಯ್ಕೆ ಮಾಡಿ ಸಿರಾಜ್​ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ 5 ವಿಕೆಟ್​ ಕಿತ್ತು ಮಿಂಚಿದ ಮೊಹಮ್ಮದ್ ಶಮಿ(Mohammed Shami) ಈ ಪಂದ್ಯದಲ್ಲಿಯೂ ಆಡುವುದು ಖಚಿತ. ಹೀಗಾಗಿ ಸಿರಾಜ್​ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ IND vs ENG: ಆಂಗ್ಲರ ವಿರುದ್ಧದ ಪಂದ್ಯಕ್ಕೆ ಸಂಭಾವ್ಯ ತಂಡ; ಪಿಚ್​ ರಿಪೋರ್ಟ್​ ಹೀಗಿದೆ

ರಾಹುಲ್​ಗೆ ತವರು ಪಂದ್ಯ

ಐಪಿಎಲ್​ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸುವ ಕೆ.ಎಲ್​ ರಾಹುಲ್​ ಅವರಿಗೆ ಇದು ತವರಿನ ಪಂದ್ಯವಾಗಿದೆ. ಏಕೆಂದರೆ ಲಕ್ನೋ ತನ್ನ ಪಂದ್ಯವನ್ನು ಇದೇ ಮೈದಾನಲ್ಲಿ ಹೆಚ್ಚು ಆಡಿದೆ. ಹೀಗಾಗಿ ಅವರಿಗೆ ತವರಿನ ಪಂದ್ಯ ಎಂದರೂ ತಪ್ಪಾಗಲಾದು. ಅತ್ತ ಇಂಗ್ಲೆಂಡ್​ ತಂಡದ ಮಾರ್ಕ್​ ವುಡ್​ಗೂ ತವರಿನ ಪಂದ್ಯ ಎನ್ನಬಹುದು. ಅವರು ಕೂಡ ಐಪಿಎಲ್​ನಲ್ಲಿ ಲಕ್ನೋ ತಂಡವನ್ನು ಪ್ರತಿನಿಧಿಸುತ್ತಾರೆ.

ನಿರೀಕ್ಷೆಗಳೆಲ್ಲ ನೀರಲ್ಲಿ ಹೋಮ

ವಿಶ್ವದ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ ಇಂಗ್ಲೆಂಡ್​ ತಂಡದ ಮೇಲೆ ಭಾರಿ ನಿರೀಕ್ಷೆ ಮಾಡಲಾಗಿತ್ತು. ಈ ಬಾರಿಯೂ ಅವರು ಕಪ್​ ಗೆಲ್ಲುವುದು ಖಚಿತ ಎಂದು ಹೇಳಲಾಗಿತ್ತು. ಆದರೆ ತಂಡದ ಪ್ರದರ್ಶನ ನೋಡುವಾಗ ನಿರೀಕ್ಷೆಗಳೆಲ್ಲ ಹುಸಿಯಾಗಿದೆ. ದುರ್ಬಲ ಅಫಘಾನಿಸ್ತಾನ, ಶ್ರೀಲಂಕಾ ವಿರುದ್ಧವೂ ಸೋಲು ಕಂಡಿದೆ. ವಿಶ್ವಕಪ್​ ಇತಿಹಾಸದಲ್ಲೇ ಇಂಗ್ಲೆಂಡ್​ ಈ ರೀತಿಯ ಶೋಚನೀಯ ಸ್ಥಿತಿ ಎದುರಿಸಿದ್ದು ಇದೇ ಮೊದಲ ಬಾರಿ.

ನಾಯಕ ಜಾಸ್​ ಬಟ್ಲರ್​, ಜಾನಿ ಬೇರ್​ ಸ್ಟೋ, ಬೆನ್​ ಸ್ಟೋಕ್ಸ್​, ಆಲ್​ ರೌಂಡರ್​ ಮೊಯಿನ್​ ಅಲಿ ಇವರೆಲ್ಲ ಎರಡಂಕಿ ಮೊತ್ತ ಪೇರಿಸುವಲ್ಲಿ ವಿಫಲಾಗುತ್ತಿದ್ದಾರೆ. ಒಟ್ಟಾರೆಯಾಗಿ ಬ್ಯಾಟಿಂಗ್​ ಮರೆತವರಂತೆ ಆಡುತ್ತಿದ್ದಾರೆ. ಇವರೆಲ್ಲ ಸಿಡಿದು ನಿಂತರೆ ಎಂತಹ ತಂಡವನ್ನು ಮಗುಚು ಹಾಕುವ ಸಾಮರ್ಥ್ಯವಿದೆ. ಆದರೆ ಇವರೆಲ್ಲ ಕ್ರಿಕೆಟ್​ ಜೋಶ್​ ತೋರುತ್ತಿಲ್ಲ.

Exit mobile version