ರಾಂಚಿ: ಭಾರತ ಮತ್ತು ಇಂಗ್ಲೆಂಡ್(4th Test IND Vs Eng) ನಡುವನ ನಾಲ್ಕನೇ(IND vs ENG) ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಫೆ.23ರಿಂದ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್(KL Rahul) ಅವರು ಆಡುವುದು ಬಹುತೇಕ ಖಚಿತವಾಗಿದೆ. ಆದರೆ, ಜಸ್ಪ್ರೀತ್ ಬುಮ್ರಾ(Jasprit Bumrah) ಆಡುವುದು ಅನುಮಾನ ಎಂದು ವರದಿಯಾಗಿದೆ.
ಸಂಪೂರ್ಣ ಫಿಟ್ ಆಗದ ಕಾರಣದಿಂದಾಗಿ ರಾಹುಲ್ ಅವರನ್ನು ಮೂರನೇ ಟೆಸ್ಟ್ನಿಂದ ಕೈಬಿಡಲಾಗಿತ್ತು. ದೇವದತ್ತ ಪಡಿಕ್ಕಲ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದೀಗ ರಾಹುಲ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರು 4ನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ರಾಹುಲ್ ಆಗಮನದಿಂದ ರಜತ್ ಪಾಟಿದರ್ ಆಡುವ ಬಳಗದಿಂದ ಬಿಡುಗಡೆಯಾಗಲಿದ್ದಾರೆ. ಏಕೆಂದರೆ ಪಾಟಿದಾರ್ ಆಡಿದ 2 ಟೆಸ್ಟ್ನಲ್ಲಿಯೂ ಕಳಪೆ ಬ್ಯಾಟಿಂಗ್ ನಡೆಸಿದ್ದಾರೆ. ಶೂನ್ಯ ಸುತ್ತಿದ್ದೇ ಹೆಚ್ಚು. ಹೀಗಾಗಿ ರಾಹುಲ್ ಬಂದರೆ ಅವರು ಜಾಗ ಬಿಡಬೇಕಿದೆ. ಒಂದೊಮ್ಮೆ ರಾಹುಲ್ ಆಡದಿದ್ದರೂ ಪಾಟಿದಾರ್ ಬದಲು ಪಡಿಕ್ಕಲ್ಗೆ ಅವಕಾಶ ಸಿಗಬಹುದು.
ರಾಹುಲ್ ಮೂರನೇ ಟೆಸ್ಟ್ಗೂ ಮುನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫಿಟ್ನೆಸ್ ವರದಿ ಹೊರಬರುವ ಮೊದಲೇ ತಾವು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು. ಇದನ್ನು ಕಂಡ ಅವರ ಅಭಿಮಾನಿಗಳು ಮೂರನೇ ಟೆಸ್ಟ್ ಪಂದ್ಯಕ್ಕೆ ಪುನರಾಗಮನ ಮಾಡಲಿದ್ದಾರೆ ಎಂದು ಭಾವಿಸಿದ್ದರು. ಆದರೆ ಪಂದ್ಯ ಆರಂಭಕ್ಕೂ ಮುನ್ನ ಅವರು ಈ ಪಂದ್ಯದಿಂದ ಹೊರಬಿದ್ದಿದ್ದರು. ವೈದ್ಯರು, ತಜ್ಞರ ತಂಡ ಫಿಟ್ನೆಸ್ ಘೋಷಿಸುವ ಮೊದಲೇ ತಾವೇ ಫಿಟ್ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಸ್ವಯಂ ಘೋಷಣೆ ಮಾಡಿಕೊಂಡದ್ದು ಬಿಸಿಸಿಐ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
Boss KL Rahul in the nets! 😍 #INDvsAUS pic.twitter.com/a48KPaHLNa
— Kunal Yadav (@Kunal_KLR) February 11, 2024
ಬುಮ್ರಾಗೆ ವಿಶ್ರಾಂತಿ
ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ತಂಡದಲ್ಲಿ ಕೆಲ ಅನುಭವಿ ಆಟಗಾರರು ಗಾಯಗೊಂಡ ಕಾರಣ ಬುಮ್ರಾ ಅವರು ಈ ಪಂದ್ಯದಲ್ಲಿ ಆಡಿದ್ದರು. 4ನೇ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡುವುದು ಖಚಿತ ಎನ್ನಲಾಗಿದೆ. ಮೂರನೇ ಟೆಸ್ಟ್ನಿಂದ ಮುಕೇಶ್ ಕುಮಾರ್ ಅವರನ್ನು ಕೈ ಬಿಟ್ಟು ರಣಜಿ ಆಡುವಂತೆ ಬಿಸಿಸಿಐ ಸೂಚನೆ ನೀಡಿತ್ತು. ನಾಲ್ಕನೇ ಪಂದ್ಯಕ್ಕೆ ತಂಡ ಸೇರಲಿದ್ದಾರೆ ಎ.ದು ತಿಳಿಸಿತ್ತು. ಬೌಲಿಂಗ್ ಸುಧಾರಣೆ ಮಾಡಿಕೊಂಡು ನಾಲ್ಕನೇ ಪಂದ್ಯದಲ್ಲಿ ಅವರಿಗೆ ಬುಮ್ರಾ ಸ್ಥಾನದಲ್ಲಿ ಆಡಿಸುವುದು ಬಿಸಿಸಿಐ ಯೋಜನೆಯಾಗಿದ್ದಂತೆ ಕಾಣುತ್ತಿದೆ.
ಇದನ್ನೂ ಓದಿ IND vs ENG: ಧೋನಿಯ ಶೈಲಿಯಲ್ಲೇ ವಿಕೆಟ್ ಕೀಪಿಂಗ್ ನಡೆಸಿದ ಜುರೆಲ್; ವಿಡಿಯೊ ವೈರಲ್
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ತ ಪಡಿಕ್ಕಲ್/ ಕೆ.ಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.