Site icon Vistara News

IND vs ENG: ಬುಮ್ರಾ ಯಾರ್ಕರ್​ ದಾಳಿಗೆ ಚೆಲ್ಲಾಪಿಲ್ಲಿಯಾದ ವಿಕೆಟ್​; ವಿಡಿಯೊ ವೈರಲ್​

Ollie Pope's stumps are destroyed by a Jasprit Bumrah yorker

ವಿಶಾಖಪಟ್ಟಣಂ: ಭಾರತ ಟೆಸ್ಟ್(IND vs ENG) ತಂಡದ ಉಪನಾಯಕ ಹಾಗೂ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರ ಮೊನಚಾದ ಬೌಲಿಂಗ್​ ದಾಳಿಗೆ ಇಂಗ್ಲೆಂಡ್​ ಆಟಗಾರರು ತರಗೆಲೆಯಂತೆ ಉದುರಿ ಹೋದ ವಿಡಿಯೊ ವೈರಲ್​ ಆಗಿದೆ. ಅದರಲ್ಲೂ ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್​(Ben Stokes) ಮತ್ತು ಓಲಿ ಪೋಪ್(Ollie Pope)​ ಅವರು ಕ್ಲೀನ್​ ಬೌಲ್ಡ್​ ಆದ ವಿಡಿಯೊವಂತೂ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೊ ಕಂಡು ಕ್ರಿಕೆಟ್​ ಅಭಿಮಾನಿಗಳು ಕೂಡ ಒಂದು ಕ್ಷಣ ದಂಗಾಗಿದ್ದಾರೆ.

ಪಂದ್ಯದ ಆರಂಭದಿಂದಲೇ ಯಾರ್ಕರ್​ ಎಸೆತಗಳ ಮೂಲಕ ಇಂಗ್ಲೆಂಡ್​ ಬ್ಯಾಟರ್​ಗಳಿಗೆ ಕಾಡಿದ ಜಸ್​ಪ್ರೀತ್ ಬುಮ್ರಾ 15.5 ಓವರ್​ ಎಸೆದು 5 ಮೇಡನ್​ ಸಹಿತ 45 ರನ್​ ವೆಚ್ಚದಲ್ಲಿ 6 ವಿಕೆಟ್​ ಉಡಾಯಿಸಿದರು. ಇದೇ ವೇಳೆ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳ ಮೇಲುಗಲ್ಲು ದಾಡಿದ ಸಾಧನೆಯನ್ನೂ ಕೂಡ ಮಾಡಿದರು.

ಹೈದರಾಬಾದ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್​ನ ದ್ವಿತೀಯ ಇನಿಂಗ್ಸ್​ನಲ್ಲಿ 196 ರನ್ ಬಾರಿಸಿ ಭಾರತದ ಸೋಲಿಗೆ ಕಾರಣರಾಗಿದ್ದ ಓಲಿ ಪೋಪ್​ಗೆ ಈ ಪಂದ್ಯದಲ್ಲಿ ಬುಮ್ರಾ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ಬಿಡಲಿಲ್ಲ. ಘಾತಕ ಯಾರ್ಕರ್​ ಒಂದನ್ನು ಎಸೆದು ಕ್ಲೀನ್​ ಬೌಲ್ಡ್​ ಮಾಡಿದರು. ಬುಮ್ರಾ ಎಸೆದ ವೇಗಕ್ಕೆ ವಿಕೆಟ್​ಗಳು ಚೆಲ್ಲಾಪಿಲ್ಲಿಯಾಗಿ ಎಗರಿ ಬಿದ್ದವು. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ IND vs ENG 2nd Test: ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ ಬರೆದ ದಾಖಲೆಗಳ ಪಟ್ಟಿ ಹೀಗಿದೆ​

ಓಲಿ ಪೋಪ್​ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದ ಬೆನ್ನಲ್ಲೇ ನಾಯಕ ಬೆನ್​​ ಸ್ಟೋಕ್ಸ್​ಗೂ ಇದೇ ರೀತಿಯ ಯಾರ್ಕರ್​ ಎಸೆದು ಅವರುನ್ನು ಕೂಡ ಕ್ಲೀನ್​ ಬೌಲ್ಡ್​ ಮಾಡಿದರು. ಬುಮ್ರಾ ಬೌಲಿಂಗ್​ ಕಂಡು ಸ್ಟೋಕ್ಸ್​ ಒಂದು ಕ್ಷಣ ಸ್ಟನ್​ ಆಗಿ ನಿಂತು ಬಿಟ್ಟರು. ಮೊದಲ ಟೆಸ್ಟ್​ ಪಂದ್ಯದಲ್ಲಿಯೂ ಸ್ಟೋಕ್ಸ್ ಇದೇ ರೀತಿಯಲ್ಲಿ ಬುಮ್ರಾ​ಗೆ ವಿಕೆಟ್​ ಒಪ್ಪಿಸಿದ್ದರು.

ಜಸ್​ಪ್ರೀತ್​ ಬುಮ್ರಾ ಅವರು ಜೋ ರೂಟ್​(Joe Root) ವಿಕೆಟ್​ ಕೀಳುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಬುಮ್ರಾ ಅವರು ಟೆಸ್ಟ್​ನಲ್ಲಿ ರೂಟ್​ ಅವನ್ನು 8ನೇ ಬಾರಿ ಔಟ್​ ಮಾಡಿದ ದಾಖಲೆ ತಮ್ಮದಾಗಿಸಿಕೊಂಡರು. ಬುಮ್ರಾ ಅವರು 20 ಇನ್ನಿಂಗ್ಸ್‌ಗಳಲ್ಲಿ ರೂಟ್​ಗೆ ಬಿಟ್ಟುಕೊಟ್ಟದ್ದು ಕೇವಲ 245 ರನ್ ಮಾತ್ರ. 8 ಬಾರಿ ವಿಕೆಟ್​ ಉಡಾಯಿಸಿದ್ದಾರೆ.

Exit mobile version