ಲಕ್ನೋ: ಇಂಗ್ಲೆಂಡ್(IND vs ENG) ವಿರುದ್ಧದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿ 4 ವಿಕೆಟ್ ಕಿತ್ತು ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಶಮಿ(Mohammed Shami) ಅವರು ವಿಶ್ವಕಪ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ(ODI World Cup History) ಅತ್ಯಂತ ವೇಗವಾಗಿ 40 ವಿಕೆಟ್(40 Wickets ) ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
33 ವರ್ಷದ ಶಮಿ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲಿಂಗ್ ನಡೆಸಿ 2 ಮೇಡನ್ ಸಹಿತ ಕೇವಲ 22 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಉಡಾಯಿಸಿದ್ದರು. ಅವರ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ಇಂಗ್ಲೆಂಡ್ ಬ್ಯಾಟರ್ಗಳು ವಿಲವಿಲನೇ ಒದ್ದಾಡಿದ್ದರು. ಅಷ್ಟರ ಮಟ್ಟಿಗೆ ಘಾತಕವಾಗಿತ್ತು ಶಮಿಯ ಎಸೆತಗಳು. ಇಬ್ಬನಿಯನ್ನು ಲೆಕ್ಕಿಸದೇ ಚೆಂಡನ್ನು ಇನ್ ಸ್ಪಿಂಗ್ ಮತ್ತು ಔಟ್ ಸ್ವಿಂಗ್ ಮಾಡುವ ಮೂಲಕ ಅತ್ಯಮೋಘ ಪ್ರದರ್ಶನ ತೋರಿದರು.
ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ಉತ್ತಮ ಬೌಲಿಂಗ್ ಸಂಘಟಿಸಿದ್ದ ಶಮಿ 5 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಭಾರತ ಪರ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದ್ದರು.
ಇದನ್ನೂ ಓದಿ ICC World Cup 2023: ವಿಶ್ವಕಪ್ನಲ್ಲಿ ಆಸೀಸ್ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್
ಭಾರತ ಪರ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಜಹೀರ್ ಖಾನ್ ಹೆಸರಿನಲ್ಲಿದೆ. ಅವರು 2003-2011 ವರೆಗೆ ವಿಶ್ವಕಪ್ ಆಡಿ 44 ವಿಕೆಟ್ಗಳನ್ನು ಕಿತ್ತಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಅವರು 1992-2003 ಆಡಿ 44 ವಿಕೆಟ್ ಪಡೆದಿದ್ದಾರೆ. ಸದ್ಯ 13 ಪಂದ್ಯ ಆಡಿರುವ ಶಮಿ ಅವರು 40* ವಿಕೆಟ್ ಪಡೆದಿದ್ದಾರೆ. ಮುಂದಿನ ಪಂದ್ಯಗಳಲ್ಲಿ 5 ವಿಕೆಟ್ ಪಡೆದರೆ ಶ್ರೀನಾಥ್ ಮತ್ತು ಜಹೀರ್ ಖಾನ್ ದಾಖಲೆಯ ಮುರಿಯುವ ಮೂಲಕ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.
15 ಪಂದ್ಯಗಳನ್ನು ಆಡಿ 32 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ಭಾರತೀಯ ಸಾಧಕ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 31 ವಿಕೆಟ್ ಪಡೆದಿರುವ ಮಾಜಿ ಆಟಗಾರ ಅನಿಲ್ ಕುಂಬ್ಳೆ 5ನೇ ಸ್ಥಾನದಲ್ಲಿದ್ದಾರೆ. ಕುಂಬ್ಳೆ ಅವರ ದಾಖಲೆಯನ್ನು ಬುಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಕೀಳುವ ಮೂಲಕ ಹಿಂದಿಕ್ಕಿದ್ದರು.
ಇದನ್ನೂ ಓದಿ Rohit Sharma: ಸಚಿನ್ ದಾಖಲೆ ಸರಿಗಟ್ಟಿ ಇನ್ನೂ ಹಲವು ದಾಖಲೆ ಬರೆದ ರೋಹಿತ್ ಶರ್ಮ
ಗ್ಲೆನ್ ಮೆಕ್ಗ್ರಾತ್ಗೆ ಮೊದಲ ಸ್ಥಾನ
ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್(Glenn McGrath) ಅವರು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿದ್ದಾರೆ. 1996-2007ರ ತನಕ ವಿಶ್ವಕಪ್ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್ ಪಂದ್ಯ ಆಡಿರುವ ಅವರು 1955 ಬಾಲ್ ಎಸೆದು 71 ವಿಕೆಟ್ ಕೆಡವಿದ್ದಾರೆ. 42 ಮೇಡನ್ ಒಳಗೊಂಡಿದೆ. 15 ರನ್ಗೆ 7 ವಿಕೆಟ್ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ಇದನ್ನೂ ಓದಿ Viral Video ಎಲ್ಬಿಡಬ್ಲ್ಯೂ ವಿಚಾರದಲ್ಲಿ ಕುಲ್ದೀಪ್ಗೆ ಚಳಿ ಬಿಡಿಸಿದ ರೋಹಿತ್ ಶರ್ಮ
ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್ ಆಡಿ 68 ವಿಕೆಟ್ ಪಡೆದಿದ್ದಾರೆ. ಸ್ಟಾರ್ಕ್ ಅವರು ಇನ್ನು 13 ವಿಕೆಟ್ ಕಿತ್ತರೆ ಮುರಳೀಧರನ್ ದಾಝಲೆಯನ್ನು ಮುರಿಯಬಹುದು. ಮುರಳೀಧರನ್ ಅವರು 17 ಬಾರಿ ಬೌಲ್ಡ್ ಮೂಲಕ ವಿಕೆಟ್ ಕಿತ್ತಿದ್ದಾರೆ.