Site icon Vistara News

IND vs ENG: 4 ವಿಕೆಟ್​ ಕಿತ್ತು ವಿಶೇಷ ದಾಖಲೆ ಬರೆದ ಮೊಹಮ್ಮದ್​ ಸಿರಾಜ್

Mohammed Siraj appeals for an lbw

ರಾಜ್​ಕೋಟ್​: ಇಂಗ್ಲೆಂಡ್(IND vs ENG)​ ವಿರುದ್ಧ ಸಾಗುತ್ತಿರುವ ಮೂರನೇ ಟೆಸ್ಟ್(India vs England 3rd Test)​ ಪಂದ್ಯದಲ್ಲಿ ನಾಲ್ಕು ವಿಕೆಟ್​ ಕಿತ್ತು ಮಿಂಚಿದ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಸಿರಾಜ್(Mohammed Siraj)​ ಅವರು ವಿಶೇಷ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳನ್ನು ಪೂರೈಸಿದ್ದಾರೆ.

ರಾಜ್​ಕೋಟ್​ನ ನಿರಂಜನ್​ ಶಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನಾದಟಲ್ಲಿ ಮೊನಚಾದ ಬೌಲಿಂಗ್​ ದಾಳಿ ಸಂಘಟಿಸಿದ ಸಿರಾಜ್​ 21.1 ಓವರ್​ ಬೌಲಿಂಗ್​ ನಡೆಸಿ 84 ರನ್​ ಬಿಟ್ಟುಕೊಟ್ಟು ಪ್ರಮುಖ ನಾಲ್ಕು ವಿಕೆಟ್​ ಉಡಾಯಿಸಿದರು. ಅವರ ಈ ಬೌಲಿಂಗ್​ ದಾಳಿಯಿಂದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 319 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪ್ರಥಮ ಇನಿಂಗ್ಸ್​ನಲ್ಲಿ 126 ರನ್​ಗಳ ಮುನ್ನಡೆ ಪಡೆದುಕೊಂಡಿತು.

ಈ ನಾಲ್ಕು ವಿಕೆಟ್​ಗಳೊಂದಿಗೆ ಮೊಹಮ್ಮದ್ ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳನ್ನು ಕಬಳಿಸಿ ಈ ಸಾಧನೆ ಮಾಡಿದ ಭಾರತದ 33ನೇ ಬೌಲರ್​ ಎನಿಸಿಕೊಂಡರು. ಅವರ ಈ ಸಾಧನೆಗೆ ಐಪಿಎಲ್​ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಅಭಿನಂದನೆ ಸಲ್ಲಿಸಿದೆ. ಟ್ವಿಟರ್​ ಎಕ್ಸ್​ನಲ್ಲಿ ಸಿರಾಜ್​ ಫೋಟೊ ಶೇರ್​ ಮಾಡಿ ಪ್ರಶಂಸೆ ಸೂಚಿಸಿದೆ.

ಸಿರಾಜ್​ ಇದುವರೆಗೆ ಭಾರತ ಪರ ಮೂರು ಮಾದರಿಯ ಕ್ರಿಕೆಟ್​ನಲ್ಲಿ 76 ಇನಿಂಗ್ಸ್ ಬೌಲಿಂಗ್ ಮಾಡಿ ಒಟ್ಟು 152* ವಿಕೆಟ್​ ಕಲೆಹಾಕಿದ್ದಾರೆ. ಇದರಲ್ಲಿ 68 ಏಕದಿನ, 12 ಟಿ20, 72 ಟೆಸ್ಟ್​ ವಿಕೆಟ್​ಗಳು ಒಳಗೊಂಡಿದೆ.

ಇದನ್ನೂ ಓದಿ Annabel Sutherland: ವೇಗದ ದ್ವಿಶತಕ ಬಾರಿಸಿ ದಾಖಲೆ ಬರೆದ ಅನಾಬೆಲ್ ಸುದರ್ಲ್ಯಾಂಡ್

ಕಪ್ಪು ಪಟ್ಟಿ ಧರಿಸಿದ ಟೀಮ್​ ಇಂಡಿಯಾ ಆಟಗಾರರು


ಇತ್ತೀಗೆಚೆ ನಿಧನರಾದ ಭಾರತ ಕ್ರಿಕೆಟ್​ ತಂಡದ ಅತ್ಯಂತ ಹಿರಿಯ ಟೆಸ್ಟ್​ ಆಟಗಾರ ದತ್ತಾಜಿರಾವ್ ಗಾಯಕ್ವಾಡ್(Dattajirao Gaekwad) ಅವರ ಗೌರವಾರ್ಥವಾಗಿ ಇಂಗ್ಲೆಂಡ್(IND vs ENG) ವಿರುದ್ಧದ ಮೂರನೇ ಟೆಸ್ಟ್‌ನ ಮೂರನೇ ದಿನದಿನಾಟದಲ್ಲಿ ಟೀಮ್​ ಇಂಡಿಯಾ ಆಟಗಾರರು ಕೈಗೆ ಕಪ್ಪು ಬ್ಯಾಂಡ್‌ಗಳನ್ನು( India wear black armbands) ಧರಿಸಿ ಕಣಕ್ಕಿಳಿದರು.

ದತ್ತಾಜಿರಾವ್ ಗಾಯಕ್ವಾಡ್ ಅವರು ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು. ವಯೋಸಹಜ ಕಾಯಿಲೆಗಳಿಂದ ಫೆ.13(ಮಂಗಳವಾರ)ರಂದು ನಿಧನ ಹೊಂದಿದ್ದರು. ಅವರಿಗೆ 95ನೇ ವಯಸ್ಸಾಗಿತ್ತು. 1959 ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ದತ್ತಾಜಿರಾವ್ ಭಾರತವನ್ನು ಮುನ್ನಡೆಸಿದ್ದರು ಮತ್ತು 11 ಟೆಸ್ಟ್‌ಗಳಲ್ಲಿ ಭಾರತ ಪರ ಆಡಿದ್ದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರದಂದು ಟ್ವಿಟರ್​ ಎಕ್ಸ್​ ಖಾತೆಯಲ್ಲಿ ‘ಇತ್ತೀಚೆಗೆ ನಿಧನರಾದ ಭಾರತದ ಮಾಜಿ ನಾಯಕ ಮತ್ತು ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ಅವರ ಸ್ಮರಣಾರ್ಥ ಟೀಮ್ ಇಂಡಿಯಾ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ. ಭಾರತ ಕ್ರಿಕೆಟ್​ಗೆ ದತ್ತಾಜಿರಾವ್ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದೆ.

Exit mobile version