Site icon Vistara News

IND vs ENG: ತಂಡದಿಂದ ಕೈಬಿಟ್ಟು ರಣಜಿ ಆಡುವಂತೆ ಮುಕೇಶ್​ಗೆ ಸೂಚನೆ ನೀಡಿದ ಬಿಸಿಸಿಐ

Mukesh Kumar

ರಾಜ್​ಕೋಟ್​​: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್(IND vs ENG) ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ(India vs England 3rd Test) ಮುನ್ನ ಭಾರತ ತಂಡದಿಂದ ವೇಗಿ ಮುಕೇಶ್ ಕುಮಾರ್(Mukesh Kumar) ಅವರನ್ನು ಬಿಡುಗಡೆ ಮಾಡಿದ್ದು, ಶುಕ್ರವಾರ ಬಿಹಾರ ವಿರುದ್ಧದ ರಣಜಿ ಟ್ರೋಫಿ(Ranji Trophy) ಪಂದ್ಯಕ್ಕಾಗಿ ಬೆಂಗಾಲ್ ಸೇರಲು ಬಿಸಿಸಿಐ(BCCI) ಅವಕಾಶ ನೀಡಿದೆ.

ವಿಶಾಖಪಟ್ಟಣಂನಲ್ಲಿ ಎರಡನೇ ಟೆಸ್ಟ್ ಆಡಿದ್ದ ಬಲಗೈ ವೇಗಿ ಮುಕೇಶ್ ಕುಮಾರ್, ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯಕ್ಕಾಗಿ ಭಾರತೀಯ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ.

“ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ಗೆ ಭಾರತ ತಂಡದಿಂದ ಮುಖೇಶ್ ಕುಮಾರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಅವರು ರಾಂಚಿಯಲ್ಲಿ ನಡೆಯುವ 4ನೇ ಪಂದದ ವೇಳೆ ಮತ್ತೆ ತಂಡ ಸೇರಲಿದ್ದಾರೆ. ರಣಜಿ ಟ್ರೋಫಿ ತಂಡವಾದ ಬಂಗಾಳವನ್ನು ಸೇರಿಕೊಳ್ಳುತ್ತಾರೆ” ಎಂದು ಬಿಸಿಸಿಐ ತಿಳಿಸಿದೆ.

30 ವರ್ಷದ ಮುಕೇಶ್ ಕುಮಾರ್​ ವಿಶಾಕಪಟ್ಟಣದಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಭಾರತ ಪರ ಆಡಿದ್ದರು. ಆದರೆ ಕೇವಲ ಒಂದು ವಿಕೆಟ್​ ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವಿಶ್ರಾಂತಿಯಲ್ಲಿದ್ದ ಮೊಹಮ್ಮದ್​ ಸಿರಾಜ್​ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮುಕೇಶ್ ಕುಮಾರ್ ಅವರನ್ನು ಮೂರನೇ ಪಂದ್ಯದಿಂದ ಕೈಬಿಟ್ಟು ತಮ್ಮ ಬೌಲಿಂಗ್​ ಸುಧಾರಣೆಗಾಗಿ ರಣಜಿ ಆಡಲು ಸೂಚಿಸಲಾಗಿದೆ. ಮುಕೇಶ್​ ಬಿಹಾರ ವಿರುದ್ಧ ರಣಜಿ ಪಂದ್ಯಲ್ಲಿ ಬಂಗಾಳ ಪರ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ IND vs ENG 3rd Test: ಟೆಸ್ಟ್​ಗೆ ಸರ್ಫರಾಜ್​ ಪದಾರ್ಪಣೆ; ಮೈದಾನದಲ್ಲೇ ತಂದೆ ಭಾವುಕ

ಚೇತರಿಕೆಯ ಹಾದಿಯಲ್ಲಿ ಟೀಮ್ ಇಂಡಿಯಾ


ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ತಂಡಕ್ಕೆ ಮಾರ್ಕ್​ ವುಡ್​ ಆರಂಭದಲ್ಲೇ ಅವಳಿ ಆಘಾತವಿಕ್ಕಿದರು. ಯಶಸ್ವಿ ಜೈಸ್ವಾಲ್​ ಮತ್ತು ಶುಭಮನ್​ ಗಿಲ್​ ವಿಕೆಟ್​ ಕಿತ್ತರು. ಜೈಸ್ವಾಲ್​ 10 ರನ್​ ಗಳಿಸಿದರೆ, ಶುಭಮನ್​ ಗಿಲ್​ ಖಾತೆಯೇ ತೆರೆಯದೆ ಶೂನ್ಯ ಸುತ್ತಿದರು. ಈ ವಿಕೆಟ್​ ಪತನದ ಬೆನ್ನಲ್ಲೇ ರಜತ್​ ಪಾಟಿದಾರ್​ ಕೂಡ 5 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು.

33ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ನೆರವಾದದ್ದು ನಾಯಕ ರೋಹಿತ್​ ಶರ್ಮಾ ಮತ್ತು ರವೀಂದ್ರ ಜಡೇಜಾ. ಉಭಯ ಆಟಗಾರರು ಕೂಡ ಆಂಗ್ಲರ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಉತ್ತಮ ಇನಿಂಗ್ಸ್​ ಕಟ್ಟುತ್ತಿದ್ದಾರೆ. ರೋಹಿತ್​ ಅರ್ಧಶತಕ ಪೂರ್ತಿಗೊಳಿಸಿದರೆ, ಜಡೇಜಾ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದಾರೆ. ಉಭಯ ಆಟಗಾರರ ಈ ತಾಳ್ಮೆಯುತ ಬ್ಯಾಟಿಂಗ್​ನಿಂದಾಗಿ ತಂಡ ಆರಂಭಿಕ ಆಘಾತದಿಂದ ಚೇತರಿಕೆ ಕಂಡಿದೆ.

Exit mobile version