Site icon Vistara News

IND vs ENG: ಸಂಪೂರ್ಣವಾಗಿ ಇಂಗ್ಲೆಂಡ್​ ಟೆಸ್ಟ್​ ಸರಣಿಯಿಂದ ಹೊರಗುಳಿಯಲಿದ್ದಾರೆ ಕೊಹ್ಲಿ?

virat kohli test

ಮುಂಬಯಿ: ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಇಂಗ್ಲೆಂಡ್(IND vs ENG) ನಡುವಣ ಟೆಸ್ಟ್ ಸರಣಿಯಲ್ಲಿ ಗಾಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಮಧ್ಯೆ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಉಳಿದಿರುವ ಮೂರು ಟೆಸ್ಟ್​ಗಳಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಆಯ್ಕೆ ಸಮಿತಿ ಉಳಿದ ಮೂರು ಟೆಸ್ಟ್‌ ಪಂದ್ಯಕ್ಕೆ ಒಂದೆರಡು ದಿನಗಳಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ವೈಯಕ್ತಿಕ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದಿದ್ದ ಕೊಹ್ಲಿ ಮುಂದಿನ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2021ರ ಆಸ್ಟ್ರೇಲಿಯಾ ಟೆಸ್ಟ್​ ಸರಣಿಯ ವೇಳೆಯೂ ಕೊಹ್ಲಿ ಮೊದಲ ಟೆಸ್ಟ್ ಬಳಿಕ ಉಳಿದ ಎಲ್ಲ ಪಂದ್ಯಗಳಿಗೂ ಅಲಭ್ಯರಾಗಿದ್ದರು. ಕುಟುಂಬದ ವಿಚಾರದಲ್ಲಿ ಕೊಹ್ಲಿ ಮೊದಲ ಆದ್ಯತೆ ನೀಡಿತ್ತಾರೆ. ಹೀಗಾಗಿ ಈ ಬಾರಿಯೂ ಸಂಪೂರ್ಣವಾಗಿ ಸರಣಿಯಿಂದ ಹೊರಗುಳಿದರೂ ಅಚ್ಚರಿ ಇಲ್ಲ.

ಮೊಹಮ್ಮದ್ ಶಮಿ ಇನ್ನೂ ಗಾಯದಿಂದ ಬಳಲುತ್ತಿರುವುದರಿಂದ ಅವರು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಮೊದಲ ಪಂದ್ಯದ ವೇಳೆ ಗಾಯಗೊಂಡ ರವೀಂದ್ರ ಜಡೇಜಾ ಕೂಡ ಮೂರನೇ ಟೆಸ್ಟ್​ ನಿಂದ ಹೊರಬಿದ್ದಿದ್ದಾರೆ. ಕೆ.ಎಲ್​ ರಾಹುಲ್​ ಲಭ್ಯತೆ ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆ ಗಾಯದ ಮಧ್ಯೆ ಕೊಹ್ಲಿಯೂ ಸರಣಿಯಿಂದ ದೂರ ಉಳಿದರೆ ಪಂದ್ಯಕ್ಕೆ ಭಾರೀ ಹೊಡೆತ ಬೀಳಲಿದೆ.

ಇದನ್ನೂ ಓದಿ Virat Kohli: ಕೊಹ್ಲಿ ನನ್ನ ಮೇಲೆ ಉಗುಳಿದ್ದರು; ಗಂಭೀರ ಆರೋಪ ಮಾಡಿದ ಡೀನ್​ ಎಲ್ಗರ್​

ತಾಯಿ ಬಗ್ಗೆ ಸುಳ್ಳು ಸುದ್ದಿ ಹರಡುವವರಿಗೆ ಕೊಹ್ಲಿ ಸಹೋದರನ ಎಚ್ಚರಿಕೆ


ತಾಯಿಗೆ ಅನಾರೋಗ್ಯ ಇರುವ ವಿಚಾರವನ್ನು ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ನಿರಾಕರಿಸಿದ್ದಾರೆ. ತಾಯಿ ಫಿಟ್ ಮತ್ತು ಚೆನ್ನಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಮಾಧ್ಯಮಗಳು ನಕಲಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಅವರು ಒತ್ತಾಯಿಸಿದ್ದಾರೆ. ವಿರಾಟ್ ಅವರ ವೃತ್ತಿಜೀವನದಲ್ಲಿ ತಾಯಿ ಸರೋಜ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಂದ ಸಾಕಷ್ಟು ಪ್ರೇರಣೆ ಪಡೆದುಕೊಂಡಿದ್ದಾರೆ.

ಮೈಕಲ್ ವಾನ್, ನಾಸಿರ್ ಹುಸೇನ್ ಮತ್ತು ಜೆಫ್ರಿ ಬಾಯ್ಕಾಟ್ ಅವರು ಭಾರತವು ಮೊದಲ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿಯ ಸೇವೆಯನ್ನು ನಷ್ಟ ಮಾಡಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಮೂವರ ಪ್ರಕಾರ, ವಿರಾಟ್ ತಂಡದ ಭಾಗವಾಗಿದ್ದರೆ ಆತಿಥೇಯ ರಾಷ್ಟ್ರವು ಪಂದ್ಯವನ್ನು ಗೆಲ್ಲುತ್ತಿತ್ತು. ಬಾಯ್ಕಾಟ್ ಮತ್ತು ವಾನ್ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಮತ್ತು ನಾಯಕತ್ವವನ್ನು ಟೀಕಿಸಿದರು. ರೋಹಿತ್ ತನ್ನ ಪ್ರಧಾನ ಸ್ಥಾನವನ್ನು ದಾಟಿದ್ದಾರೆ. ಅವರ ಅತಿಥಿ ಪಾತ್ರಗಳು ತಂಡಕ್ಕೆ ಸಹಾಯ ಮಾಡುವುದಿಲ್ಲ ಎಂದು ಜೆಫ್ರಿ ಹೇಳಿದ್ದಾರೆ.

Exit mobile version