Site icon Vistara News

IND vs ENG: ಬೆನ್ ಸ್ಟೋಕ್ಸ್ ಕ್ಲೀನ್​ ಬೌಲ್ಡ್​ ಮಾಡಿ ಕಪಿಲ್​ ದೇವ್ ದಾಖಲೆ ಸರಿಗಟ್ಟಿದ ಅಶ್ವಿನ್

R Ashwin was too good for Ben Stokes' defence

ಹೈದರಾಬಾದ್​: ಇಲ್ಲಿ ನಡೆಯುತ್ತಿರುವ ಆರಂಭಿಕ ಟೆಸ್ಟ್‌ನ(India vs England 1st Test) ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ(IND vs ENG) ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandran Ashwin) ಅವರು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್(Ben Stokes) ಅವರನ್ನು ಕ್ಲೀನ್​ ಬೌಲ್ಡ್​ ಮಾಡುವ ಮೂಲಕ, ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್​ ದೇವ್​(Kapil Dev) ಅವರ ದಾಖಲೆಯೊಂದನ್ನು ಸರಿಗಟಗಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಅವರು ಸ್ಟೋಕ್ಸ್ ಅವರನ್ನು ಔಟ್ ಮಾಡಿದ್ದು ಇದು 12ನೇ ಬಾರಿ. ಇದೇ ವೇಳೆ ಅಶ್ವಿನ್​ ಕಪಿಲ್​ ದೇವ್​ ದಾಖಲೆಯನ್ನು ಸರಿಗಟ್ಟಿದರು. ಕಪಿಲ್ ದೇವ್ ಪಾಕಿಸ್ತಾನದ ಆಟಗಾರ ಮುದಸ್ಸರ್ ನಝರ್ ಅವರನ್ನು ಒಟ್ಟು 12 ಬಾರಿ ಔಟ್ ಮಾಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬನೇ ಆಟಗಾರನನ್ನು ಅತ್ಯಧಿಕ ಬಾರಿ ಔಟ್ ಮಾಡಿದ ವಿಶ್ವ ದಾಖಲೆ ಇರುವುದು ಆಸ್ಟ್ರೇಲಿಯಾದ ಗ್ಲೆನ್ ಮೆಕ್​ಗ್ರಾಥ್ ಹೆಸರಿನಲ್ಲಿ. ಅವರು ಇಂಗ್ಲೆಂಡ್ ಬ್ಯಾಟರ್​ ಮೈಕೆಲ್ ಅರ್ಥಟನ್ ಅವರನ್ನು 19 ಬಾರಿ ಔಟ್ ಮಾಡಿದ್ದರು. ಸದ್ಯ ವಿಶ್ವ ದಾಖಲೆ ಈಗಲೂ ಅವರ ಹೆಸರಿನಲ್ಲಿಯೇ ಇದೆ.

ಅಶ್ವಿನ್​ ಅವರು ಇದುವರೆಗೆ ಸೋಕ್ಸ್​ಗೆ 232 ರನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಸ್ಟೋಕ್ಸ್ ಹೊರತಾಗಿ, ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಡೇವಿಡ್ ವಾರ್ನರ್ ಅವರನ್ನು 11 ಬಾರಿ ಮತ್ತು ಅಲೆಸ್ಟರ್ ಕುಕ್ ಅವರನ್ನು 9 ಬಾರಿ ಔಟ್ ಮಾಡಿದ್ದಾರೆ. ಅನುಭವಿ ಸ್ಪಿನ್ನರ್ 500 ಟೆಸ್ಟ್ ವಿಕೆಟ್‌ಗಳ ಗಡಿಯನ್ನು ಸಮೀಪಿಸುತ್ತಿದ್ದು, ಸದ್ಯ 495 ಟೆಸ್ಟ್ ವಿಕೆಟ್​ ಪಡೆದಿದ್ದಾರೆ. ಇನ್ನು 5 ವಿಕೆಟ್​ ಕಿತ್ತರೆ ಈ ಮೈಲುಗಲ್ಲು ತಲುಪಲಿದ್ದಾರೆ.

ಇದನ್ನೂ ಓದಿ IND vs ENG: ಇಂಗ್ಲೆಂಡ್​ಗೆ ಹೋಪ್​ ನೀಡಿದ ಓಲಿ ಪೋಪ್

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ದಾಖಲೆ ಬರೆದ ಅಶ್ವಿನ್​


ಅಶ್ವಿನ್​ ಅವರು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 150 ವಿಕೆಟ್​ ಕಬಳಿಸಿದ ಮೂರನೇ ಬೌಲರ್​ ಹಾಗೂ ಎರಡನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅತೀ ವೇಗವಾಗಿ 150 ವಿಕೆಟ್ ಪಡೆದ ವಿಶ್ವ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಹೆಸರಿನಲ್ಲಿತ್ತು. ಲಿಯಾನ್ 63 ಟೆಸ್ಟ್ ಪಂದ್ಯಗಳ ಮೂಲಕ 150 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ. ಅಶ್ವಿನ್ ಕೇವಲ 58 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 150 ವಿಕೆಟ್ ಪೂರೈಸಿದ್ದಾರೆ.

Exit mobile version