Site icon Vistara News

IND vs ENG: ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್​ ಜತೆ ರೋಹಿತ್​ ಸುದೀರ್ಘ‌ ಚರ್ಚೆ; ವಿಡಿಯೊ ವೈರಲ್​

rohit sharma and ajit agarkar

ವಿಶಾಖಪಟ್ಟಣಂ: ಇಂಗ್ಲೆಂಡ್​ ವಿರುದ್ಧ ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯಲ್ಲಿ ಸೋಲು ಕಂಡಿದ್ದ ಭಾರತ ತಂಡ ವಿಶಾಖಪಟ್ಟಣದಲ್ಲಿ ನಡೆದ ದ್ವಿತೀಯ ಟೆಸ್ಟ್​ನಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಸಮಬಲಕ್ಕೆ ತಂದು ನಿಲ್ಲಿಸಿದೆ. ಇದೀಗ ಮೂರನೇ ಟೆಸ್ಟ್​ ಪಂದ್ಯಕ್ಕೆ(india vs england 3rd test match) ಸಿದ್ಧವಾಗಬೇಕಿದೆ. ಈ ಮಧ್ಯೆ ದ್ವಿತೀಯ ಟೆಸ್ಟ್​ ಬಳಿಕ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್(Ajit Agarkar) ಮೈದಾನದಲ್ಲೇ ನಡೆಸಿದ ದೀರ್ಘ ಚರ್ಚೆಯ ವಿಡಿಯೊವೊಂದು ವೈರಲ್​ ಆಗಿದೆ.

ಭಾರತ ತಂಡ 106 ರನ್​ಗಳಿಂದ ಗೆದ್ದ ಬಳಿಕ ಮೈದಾನದ ಬೌಂಡರಿ ಲೈನ್​ ಬಳಿಕ ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್ ದೀರ್ಘ ಚರ್ಚೆಯೊಂದನ್ನು ನಡೆಸಿದ್ದಾರೆ. ಇದನ್ನು ಕಂಡ ಕಾಮೆಂಟ್ರೇಟರ್​ ಕೆವಿನ್​ ಪೀಟರ್​ಸನ್​, ಬಹುಶಃ ಮುಂದಿನ ಟೆಸ್ಟ್​ ಪಂದ್ಯಗಳಿಗೆ ಆಟಗಾರರ ಆಯ್ಕೆಯ ಕುರಿತು ಚರ್ಚಿಸುತ್ತಿದ್ದಂತಿದೆ ಎಂದು ಹೇಳಿದರು.

“ವೈಜಾಗ್‌ನಲ್ಲಿ ಅನುಭವಿ ಆಟಗಾರರಾದ ರವೀಂದ್ರ ಜಡೇಜಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಇಲ್ಲದ ಹೊರತಾಗಿಯೂ ಪಂದ್ಯ ಗೆದ್ದಿದ್ದರೂ. ಮುಂದಿನ ಪಂದ್ಯದಲ್ಲಿ ಇದೇ ರೀತಿ ಗೆಲುವು ಸಾಧಿಸುವುದು ಕಷ್ಟಕರ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಬೇಕು” ಎಂದು ರೋಹಿತ್​ ಅವರು ಅಗರ್ಕರ್​ಗೆ ಸಲಹೆ ನೀಡುವಂತಿದೆ ಎಂದು ಹೇಳಿದರು. ನೆಟ್ಟಿಗರು ಕೂಡ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ IND vs ENG 3rd Test: ಮೂರನೇ ಟೆಸ್ಟ್​ ಪಂದ್ಯಕ್ಕೆ ಜಸ್​ಪ್ರೀತ್​ ಬುಮ್ರಾಗೆ ವಿಶ್ರಾಂತಿ!

ಕೆಲ ನೆಟ್ಟಿಗರು, ರೋಹಿತ್​ ಅವರು ಅಗರ್ಕರ್ ಬಳಿ ಮೂರನೇ ಟೆಸ್ಟ್​ ಪಂದ್ಯಕ್ಕೆ ಜಸ್​ಪ್ರೀತ್​ ಬುಮ್ರಾಗೆ ವಿಶ್ರಾಂತಿ ನೀಡಿದರೆ ತಂಡಕ್ಕೆ ಹಿನ್ನಡೆಯಾಗಲಿದೆ. ಹೇಗಿದ್ದರೂ ಮೂರನೇ ಪಂದ್ಯಕ್ಕೆ ಇನ್ನು 9 ದಿನಗಳ ಸಮಯಾವಕಾಶವಿದೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯವಿಲ್ಲ ಎಂದು ಮನವರಿಕೆ ಮಾಡುತ್ತಿದ್ದಾರೆ ಎಂದು ಕಲ್ಪನೆ ಮಾಡಿದ್ದಾರೆ.

ರಾಹುಲ್​-ಅಯ್ಯರ್​ ಚರ್ಚೆ


ಇದೇ ವೇಳೆ ರಾಹುಲ್ ದ್ರಾವಿಡ್ ಮತ್ತು ಶ್ರೇಯಸ್​ ಅಯ್ಯರ್​ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತಿರುವ ದೃಶ್ಯ ಕೂಡ ವೈರಲ್​ ಆಗಿದೆ. ಈ ಎಲ್ಲ ಚರ್ಚೆಗಳು ಮುಂಬರುವ ಪಂದ್ಯಗಳ ಸಂಕೇತವಾಗಿರಬಹುದೇ? ಎಂದು ಮಾಜಿ ವೇಗಿ ಜಹೀರ್ ಖಾನ್ ಹೇಳಿದ್ದಾರೆ. ಇನ್ನು ಕೆಲವರು ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡ​ ಶ್ರೇಯಸ್ ಅಯ್ಯರ್​ಗೆ ದ್ರಾವಿಡ್​ ಎಚ್ಚರಿಕೆ ನೀಡುತ್ತಿದ್ದಾರೆ, ಮುಂದಿನ ಪಂದ್ಯದಲ್ಲಿಯೂ ಕಳಪೆ ಪ್ರದರ್ಶನ ತೋರಿದರೆ ತಂಡದಲ್ಲಿ ಉಳಿಯುವುದು ಕಷ್ಟ. ಹೀಗಾಗಿ ಮುಂದಿನ ಪಂದ್ಯದಲ್ಲಿ ಸಾಮರ್ಥ್ಯ ತೋರಲೇ ಬೇಕು ಎಂದು ಸಲಹೆ ನೀಡಿದಂತಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಮೂರನೇ ಟೆಸ್ಟ್ ಪಂದ್ಯಕ್ಕೆ ಇಂದು ಅಥವಾ ನಾಳೆ ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇಂಗ್ಲೆಂಡ್​ ಆಟಗಾರರು ದ್ವಿತೀಯ ಪಂದ್ಯ ಮುಕ್ತಾಯದ ಬೆನ್ನಲ್ಲೇ ಅಬುಧಾಬಿಗೆ ತೆರಳಿದ್ದು ಅಲ್ಲೇ ವಿಶ್ರಾಂತಿ ಮತ್ತು ತರಬೇತಿ ಪಡೆಯಲು ನಿರ್ಧರಿಸಿದೆ. ಭಾರತ ಪ್ರವಾಸಕ್ಕೆ ಬರುವ ಮುನ್ನವೂ ಇಂಗ್ಲೆಂಡ್​ ಅಬುಧಾಬಿಯಲ್ಲೇ ತರಬೇತಿ ಶಿಬಿರ ಆಯೋಜಿಸಿತ್ತು. 

Exit mobile version