ಅಡಿಲೇಡ್: ಇಂಗ್ಲೆಂಡ್ ವಿರುದ್ಧದ ಐಸಿಸಿ ಟಿ 20 ವಿಶ್ವ ಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತ(IND VS ENG) ತಂಡದ ಟಿ20 ವಿಶ್ವ ಕಪ್ ಅಭಿಯಾನ ಅಂತ್ಯಕಂಡಿದೆ. ಸೋಲಿನಲ್ಲಿಯೂ ಟೀಮ್ ಇಂಡಿಯಾ ಕೆಟ್ಟ ದಾಖಲೆಯೊಂದನ್ನು ಬರೆದಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ಗುರುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ(50) ಮತ್ತು ಹಾರ್ದಿಕ್ ಪಾಂಡ್ಯ(63) ಅವರ ಅರ್ಧಶತಕದ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 168 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಜೋಸ್ ಬಟ್ಲರ್(80*) ಮತ್ತು ಅಲೆಕ್ಸ್ ಹೇಲ್ಸ್(86*) ಅವರ ಬ್ಯಾಟಿಂಗ್ ಆರ್ಭಟದಿಂದ 16 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 170 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಭಾರತ ಈ ಸೋಲಿನೊಂದಿಗೆ ಟಿ20 ವಿಶ್ವ ಕಪ್ನ ಇದುವರೆಗಿನ ಸೆಮಿಫೈನಲ್ ಇತಿಹಾಸದಲ್ಲಿ 10 ವಿಕೆಟ್ಗಳಿಂದ ಸೋತ ಮೊದಲ ತಂಡ ಎಂಬ ಕೆಟ್ಟ ದಾಖಲೆಗೆ ಗುರಿಯಾಯಿತು. ಈ ಮೊದಲು ಟಿ20 ವಿಶ್ವ ಕಪ್ನ ಲೀಗ್ ಹಂತದಲ್ಲಿ ಹಲವು ತಂಡಗಳು 10 ವಿಕೆಟ್ ಅಂತರದಿಂದ ಹೀನಾಯವಾಗಿ ಸೋತ ಎಷ್ಟೋ ನಿದರ್ಶನಗಳಿಗೆ ಆದರೆ ಸೆಮಿಫೈನಲ್ನಲ್ಲಿ ದಾಖಲಾದ ಮೊದಲ ಹೀನಾಯ ಸೋಲು ಇದಾಗಿದೆ.
ಇದನ್ನೂ ಓದಿ | Virat Kohli | ಇಂಗ್ಲೆಂಡ್ ವಿರುದ್ಧದ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದ ಕಿಂಗ್ ಕೊಹ್ಲಿ