Site icon Vistara News

IND vs ENG: ದ್ವಿಶತಕದ ಜತೆಗೆ ಸಿಕ್ಸರ್​ನಲ್ಲಿಯೂ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

Yashasvi Jaiswal

ರಾಜ್​ಕೋಟ್​: ಟೀಮ್​ ಇಂಡಿಯಾದ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್(Yashasvi Jaiswal)​ ಇಂಗ್ಲೆಂಡ್​(IND vs ENG) ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ದ್ವಿಶತಕ ಬಾರಿಸಿದ್ದಾರೆ. ಜತೆಗೆ ಸಿಕ್ಸರ್ ಮೂಲಕವೂ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ರೋಹಿತ್​ ಶರ್ಮ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಜೈಸ್ವಾಲ್​ ಅವರ 2 ನೇ ಟೆಸ್ಟ್​ ದ್ವಿಶತಕ ಇದಾಗಿದೆ.

​133 ಎಸೆತಗಳಿಂದ 104 ಗಳಿಸಿದ ವೇಳೆ ಬೆನ್ನು ನೋವಿನ ಕಾರಣದಿಂದ ಮೂರನೇ ದಿನದಾಟದಿಂದ ನಿವೃತ್ತರಾಗಿದ್ದ ಜೈಸ್ವಾಲ್​ ನಾಲ್ಕನೇ ದಿನದಾಟದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ನೆರದಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಜತೆಗೆ ಆಂಗ್ಲ ಬೌಲರ್​ಗಳ ಬೆವರಿಳಿಸಿದರು. ಅದರಲ್ಲೂ 41 ವರ್ಷದ ಅನುಭವಿ ಬೌಲರ್​ ಜೇಮ್ಸ್​ ಆ್ಯಂಡರ್ಸನ್​ ಅವರಿಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ಬಿಸಿ ಮುಟ್ಟಿಸಿದ್ದು ಪಂದ್ಯದ ಪ್ರಮುಖ ಆಕರ್ಷಣೆಯಾಗಿತ್ತು. ಒಟ್ಟು 214 ರನ್​ ಬಾರಿಸಿ ಅಜೇಯರಾಗಿ ಉಳಿದರು.

10 ಸಿಕ್ಸರ್​ ಬಾರಿಸಿದ ವೇಳೆ ಜೈಸ್ವಾಲ್​ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಭಾರತದ ಪರ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರನಾಗಿ ಮೂಡಿಬಂದರು. ಈ ಹಿಂದೆ 8 ಸಿಕ್ಸರ್​ ಬಾರಿಸಿದ್ದ ನವಜೋತ್ ಸಿಂಗ್ ದಾಖಲೆ ಪತನಗೊಂಡಿತು.

ಭಾರತದ ಪರ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರು


ಯಶಸ್ವಿ ಜೈಸ್ವಾಲ್-10* ಸಿಕ್ಸರ್ ​(2024 ಇಂಗ್ಲೆಂಡ್​ ವಿರುದ್ಧ).

ನವಜೋತ್ ಸಿಂಗ್ ಸಿಧು- 8 ಸಿಕ್ಸರ್​(1994 ಶ್ರೀಲಂಕಾ ವಿರುದ್ಧ).

ಮಯಾಂಕ್​ ಅಗರ್ವಾಲ್​-8 ಸಿಕ್ಸರ್​(2019 ಬಾಂಗ್ಲಾದೇಶ ವಿರುದ್ಧ).

ರೋಹಿತ್​ ದಾಖಲೆ ಪತನ


ಜೈಸ್ವಾಲ್​ ಅವರು 10 ಸಿಕ್ಸರ್​ ಬಾರಿಸುತ್ತಿದ್ದಂತೆ ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟೆಸ್ಟ್​ ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಭಾರತೀಯ ಆಟಗಾರರ ಪೈಕಿ ಜೈಸ್ವಾಲ್ ಅಗ್ರಸ್ಥಾನಕ್ಕೇರಿದ್ದಾರೆ. ಜೈಸ್ವಾಲ್​ ಸದ್ಯ 20 ಸಿಕ್ಸರ್​ ಬಾರಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್​ ಶರ್ಮ ಅವರ ಹೆಸರಿನಲ್ಲಿತ್ತು. ರೋಹಿತ್​ 19 ಸಿಕ್ಸರ್​ ಬಾರಿಸಿದ್ದರು. ಸರಣಿ ಆಡುತ್ತಿರುವ ರೋಹಿತ್​ಗೆ ಮತ್ತೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಒಟ್ಟಾರೆ ಈ ಸರಣಿಯಲ್ಲಿ ಉಭಯ ಆಟಗಾರರ ಮಧ್ಯೆ ಸಿಕ್ಸರ್ ದಾಖಲೆಯ​ ಪೈಪೋಟಿಯೊಂದು ನಡೆಯಲಿದೆ.

ಇದನ್ನೂ ಓದಿ Yashasvi Jaiswal: ಜೈಸ್ವಾಲ್ ಸಿಕ್ಸರ್​ಗೆ ಇಂಗ್ಲೆಂಡ್ ಡಗೌಟ್​ನ ಕುರ್ಚಿ ಪೀಸ್​ ಪೀಸ್‌

​ಭಾರತದ ಪರ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರು


ಯಶಸ್ವಿ ಜೈಸ್ವಾಲ್-20* ಸಿಕ್ಸರ್

ರೋಹಿತ್​ ಶರ್ಮ-19* ಸಿಕ್ಸರ್​

ಹರ್ಭಜನ್​ ಸಿಂಗ್​-14 ಸಿಕ್ಸರ್​

ನವಜೋತ್ ಸಿಂಗ್ ಸಿಧು-11 ಸಿಕ್ಸರ್​

Exit mobile version