ನವದೆಹಲಿ: ಏಕದಿನ ವಿಶ್ವ ಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡ ಮರು ದಿನವೇ ಭಾರತ ಮತ್ತು ಐರ್ಲೆಂಡ್(IND vs IRE) ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಶೀಘ್ರದಲ್ಲೇ ತಂಡ ಕೂಡ ಪ್ರಕಟಗೊಳ್ಳುವು ಸಾಧ್ಯತೆ ಇದೆ. ವಿಂಡೀಸ್(IND vs WI) ವಿರುದ್ಧದ ಸರಣಿ ಮುಗಿದ ತಕ್ಷಣ ಭಾರತ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮೂಲಗಳ ಪ್ರಕಾರ ಏಷ್ಯಾ ಕಪ್(Asia Cup) ಮತ್ತು ಏಕದಿನ ವಿಶ್ವ ಕಪ್ ದೃಷ್ಟಿಯಲ್ಲಿಟ್ಟುಕೊಂಡು ಈ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಭಾರತ ತಂಡ ಐರ್ಲೆಂಡ್ ಪ್ರವಾಸದ(India Tour of Ireland Schedule 2023) ವೇಳೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಆಸರಣಿ ಆಗಸ್ಟ್ 18ರಿಂದ 23ರವರೆಗೆ ಪಂದ್ಯಗಳು ನಡೆಯಲಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಏಷ್ಯಾ ಕಪ್ ಆರಂಭವಾಗಲಿದೆ. ಆಗಸ್ಟ್ 31ರಿಂದ ಈ ಟೂರ್ನಿ ಆರಂಭಗೊಳ್ಳಲಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಕೂಟದ ಪಂದ್ಯಗಳು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಭದ್ರತಾ ಕಾರಣದಿಂದ ಭಾರತ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವ ಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ; ಬೆಂಗಳೂರಿನಲ್ಲೂ ಇದೆ ಪ್ರಮುಖ ಪಂದ್ಯ
“ಐರ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಆಹ್ವಾನಿಸುತ್ತಿರುವುದು ಸಂತಸ ತಂದಿದೆ. ಕಳೆದ 12 ತಿಂಗಳ ಅವದಿಯಲ್ಲಿ ಎರಡನೇ ಬಾರಿ ಭಾರತದ ಜತೆ ಸರಣಿ ಆಡಲು ಸಜ್ಜಾಗಿದ್ದೇವೆ. ವಿಶ್ವ ಬಲಿಷ್ಠ ತಂಡದ ವಿರುದ್ಧ ಆಡುವುದೇ ಒಂದು ಖುಷಿಯ ವಿಚಾರ” ಎಂದು ಕ್ರಿಕೆಟ್ ಐರ್ಲೆಂಡ್ನ ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯೂಟ್ರೋಮ್ ಹೇಳಿದ್ದಾರೆ.
ಕಳೆದ ವರ್ಷ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಂಡಿತು. ಈ ವೇಳೆ 2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ಈ ಬಾರಿಯೂ ಭಾರತ ಗೆಲುವು ಸಾಧಿಸುವ ಇರಾದೆಯಲ್ಲಿದೆ.
ಪಂದ್ಯಗಳ ವಿವರ ಹೀಗಿದೆ
ಮೊದಲ ಟಿ20: ಆಗಸ್ಟ್ 18, ಸಂಜೆ 7:30ಕ್ಕೆ
ದ್ವಿತೀಯ ಟಿ20: ಆಗಸ್ಟ್ 20, ಸಂಜೆ 7:30ಕ್ಕೆ
ತೃತೀಯ ಟಿ20: ಆಗಸ್ಟ್ 23 ಸಂಜೆ 7:30ಕ್ಕೆ
ಸಂಭಾವ್ಯ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್, ಸಾಯಿ ಸುದರ್ಶನ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್, ಆಕಾಶ್ ಮುಧ್ವಲ್, ಮುಖೇಶ್ ಕುಮಾರ್, ಅರ್ಷ್ದೀಪ್ ಸಿಂಗ್, ತುಷಾರ್ ದೇಶಪಾಂಡೆ.