Site icon Vistara News

IND vs IRE: ಐರ್ಲೆಂಡ್‌ ವಿರುದ್ಧದ ಟಿ20 ಸರಣಿ; ಗಿಲ್‌, ಹಾರ್ದಿಕ್‌ಗೆ ವಿಶ್ರಾಂತಿ ಸಾಧ್ಯತೆ

Hardik Pandya and Shubman Gill

ಮುಂಬಯಿ: ಐರ್ಲೆಂಡ್(IND vs IRE)​ ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ಆದರೆ ತಂಡ ಮಾತ್ರ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಇದೀಗ ಬಂದ ಮಾಹಿತಿ ಪ್ರಕಾರ ಹಾರ್ದಿಕ್‌ ಪಾಂಡ್ಯ ಮತ್ತು ಶುಭಮನ್​ ಗಿಲ್​ಗೆ ಈ ಸರಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ವೇಳಾಪಟ್ಟಿ ಪ್ರಕಟಗೊಂಡ ವೇಳೆ ಈ ಸರಣಿಯಲ್ಲಿ ಹಾರ್ದಿಕ್​ ಪಾಂಡ್ಯ ಅವರು ತಂಡವನ್ನು ಮುನ್ನಡೆಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಏಷ್ಯಾ ಕಪ್‌ ಮತ್ತು ವಿಶ್ವಕಪ್‌ ಕೂಟ ನಡೆಯಲಿರುವ ಕಾರಣ ಪಾಂಡ್ಯ ಮತ್ತು ಗಿಲ್​ಗೆ ವಿಶ್ರಾಂತಿ ನೀಡಲಾಗುವುದು ಎಂದು ವರದಿಯಾಗಿದೆ. ಒಂದೊಮ್ಮೆ ಪಾಂಡ್ಯ ಅಲಭ್ಯರಾದರೆ ಸೂರ್ಯಕುಮಾರ್​ ಯಾದವ್​ ಅಥವಾ ಋತುರಾಜ್​ ಗಾಯಕ್ವಾಡ್​ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ. ಬೆನ್ನು ನೋವಿನಿಂದ ಒಂದು ವರ್ಷ ತಂಡದಿಂದ ಹೊರಗುಳಿದಿದ್ದ ಜಸ್​ಪ್ರೀತ್​ ಬುಮ್ರಾ ಈ ಸರಣಿ ಮೂಲಕ ಕಮ್​ಬ್ಯಾಕ್ ಮಾಡುವ ನಿರೀಕ್ಷೆ ಇದೆ.

ಭಾರತ ತಂಡ ಐರ್ಲೆಂಡ್ ಪ್ರವಾಸದ(India Tour of Ireland Schedule 2023) ವೇಳೆ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಆಸರಣಿ ಆಗಸ್ಟ್ 18ರಿಂದ 23ರವರೆಗೆ ಪಂದ್ಯಗಳು ನಡೆಯಲಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಏಷ್ಯಾ ಕಪ್​​ ಆರಂಭವಾಗಲಿದೆ. ಆಗಸ್ಟ್​ 31ರಿಂದ ಈ ಟೂರ್ನಿ ಆರಂಭಗೊಳ್ಳಲಿದೆ. ಹೈಬ್ರಿಡ್​ ಮಾದರಿಯಲ್ಲಿ ನಡೆಯುವ ಈ ಕೂಟದ ಪಂದ್ಯಗಳು ಪಾಕಿಸ್ತಾನ​ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಭದ್ರತಾ ಕಾರಣದಿಂದ ಭಾರತ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಇದನ್ನೂ ಓದಿ Viral News: ಹಾಟ್​ ಫೋಟೊ ಹಂಚಿಕೊಂಡ ಹಾರ್ದಿಕ್‌ ಪಾಂಡ್ಯ ದಂಪತಿ

ಕಳೆದ ವರ್ಷ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಂಡಿತು. ಈ ವೇಳೆ 2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ಈ ಬಾರಿಯೂ ಭಾರತ ಗೆಲುವು ಸಾಧಿಸುವ ಇರಾದೆಯಲ್ಲಿದೆ.

ಪಂದ್ಯಗಳ ವಿವರ ಹೀಗಿದೆ

ಮೊದಲ ಟಿ20: ಆಗಸ್ಟ್ 18, ಸಂಜೆ 7:30ಕ್ಕೆ

ದ್ವಿತೀಯ ಟಿ20: ಆಗಸ್ಟ್ 20, ಸಂಜೆ 7:30ಕ್ಕೆ

ತೃತೀಯ ಟಿ20: ಆಗಸ್ಟ್​ 23 ಸಂಜೆ 7:30ಕ್ಕೆ

ಸಂಭಾವ್ಯ ಭಾರತ ತಂಡ

ಋತುರಾಜ್​ ಗಾಯಕ್ವಾಡ್​ ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್, ಸಾಯಿ ಸುದರ್ಶನ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್, ಆಕಾಶ್ ಮುಧ್ವಲ್, ಮುಖೇಶ್ ಕುಮಾರ್, ಅರ್ಷ್​ದೀಪ್ ಸಿಂಗ್, ತುಷಾರ್ ದೇಶಪಾಂಡೆ.

Exit mobile version