Site icon Vistara News

IND vs NED: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಕಕಾಲಕ್ಕೆ ಮೊಳಗಿದ ‘ವಂದೇ ಮಾತರಂ’

vande mataram india vs netherlands

ಬೆಂಗಳೂರು: ಭಾರತ ತಂಡ ಪ್ರಸಕ್ತ ವಿಶ್ವಕಪ್​ನಲ್ಲಿ ಆಡಿದ ಎಲ್ಲ 9 ಪಂದ್ಯಗಳನ್ನು ಗೆದ್ದು ಬೀಗಿದೆ. ದೇಶದ ಪ್ರಮುಖ 9 ತಾಣಗಳಲ್ಲಿ ಪಂದ್ಯವನ್ನಾಡಿದ ಟೀಮ್ ಇಂಡಿಯಾಕ್ಕೆ ಈ 9 ಸ್ಥಗಳಲ್ಲಿಯೂ ವಿಶೇಷ ರೀತಿಯ ಬೆಂಬಲ ಸಿಕ್ಕಿದೆ. ಪ್ರೇಕ್ಷಕರು ಶ್ರೀ ರಾಮನ ಜಪ, ಚಕ್ ದೇ! ಇಂಡಿಯಾ ಘೋಷಣೆ ಕೂಗುವ ಮೂಲಕ ಆಟಗಾರರನ್ನು ಹುರಿದುಂಬಿಸಿದ್ದರು. ಇದೀಗ ಬೆಂಗಳೂರಿನಲ್ಲಿ ನಡೆದ ನೆದರ್ಲೆಂಡ್ಸ್​ ವಿರುದ್ಧದ ಕೊನೆಯ ಲೀಗ್​ ಪಂದ್ಯದಲ್ಲಿ ಇಲ್ಲಿನ ಅಭಿಮಾನಿಗಳು ‘ವಂದೇ ಮಾತರಂ’ ಹಾಡನ್ನು(fans singing vande mataram) ಹಾಡುವ ಮೂಲಕ ಭಾರತ ತಂಡಕ್ಕೆ ಚಿಯರ್​ ಅಪ್​ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಏಕಕಾಲದಲ್ಲಿ ‘ವಂದೇ ಮಾತರಂ’ ಹಾಡನ್ನು ಹಾಡಿದ್ದಾರೆ. ಅಭಿಮಾನಿಗಳ ಹಾಡಿದ ಸದ್ದಿಗೆ ಇಡೀ ಕ್ರೀಡಾಂಗಣವೇ ಪ್ರತಿಧ್ವನಿಸಿತ್ತು.

ಅಕ್ಟೋಬರ್​ 14ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ವೇಳೆಯೂ ನರೆದಿದ್ದ ಪ್ರೇಕ್ಷಕರು ವಂದೇ ಮಾತರಂ ಹಾಡನ್ನು ಮತ್ತು ರಾಮ್ ಸಿಯಾ ರಾಮ್ ಹಾಡನ್ನು ಹಾಡಿ ಗಮನಸೆಳೆದಿದ್ದರು.

​ಇದನ್ನೂ ಓದಿ Ravindra Jadeja: ಕುಂಬ್ಳೆ, ಯುವರಾಜ್​ ದಾಖಲೆ ಮುರಿದ ರವೀಂದ್ರ ಜಡೇಜಾ

ಪಂದ್ಯದಲ್ಲಿ ಏನಾಯಿತು?

ವಿಶ್ವ ಕಪ್​ನ ಲೀಗ್ ಹಂತದ ತನ್ನ ಕೊನೇ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ (ind vs ned) ವಿರುದ್ಧ 160 ರನ್​ಗಳಿಂದ ಜಯಗಳಿಸಿತು ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಹಾಲಿ ವಿಶ್ವ ಕಪ್​ನ (ICC World Cup 2023) ಲೀಗ್​ ಹಂತದ 9 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು 18 ಅಂಕಗಳೊಂದಿಗೆ ಸೆಮಿ ಫೈನಲ್​ಗೆ ಪ್ರವೇಶ ಪಡೆಯಿತು. ಉತ್ಸಾಹದಲ್ಲಿರುವ ಭಾರತ ಬಳಗ ಬುಧವಾರ (ನವೆಂಬರ್​ 15) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯ ನಾಲ್ಕನೇ ಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

ನೆದರ್ಲ್ಯಾಂಡ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಭಾರತದ ಬ್ಯಾಟರ್​ಗಳು ಈ ಗೆಲುವಿಗೆ ಕೊಡುಗೆ ಕೊಟ್ಟರು. ಕ್ರೀಸ್​​ಗೆ ಬಂದ ಎಲ್ಲಾ ಐದು ಬ್ಯಾಟರ್​ಗಳು ಕನಿಷ್ಠ ಅರ್ಧ ಶತಕವನ್ನು ಗಳಿಸಿದರು. ಬೌಲರ್​ಗಳಿಗೆ ಡಿಫೆಂಡ್ ಮಾಡಲು ಸಾಕಷ್ಟು ರನ್​ಗಳನ್ನು ಹೊಂದಿಸಿದ್ದರು. ಮೊಹಮ್ಮದ್ ಸಿರಾಜ್ ಆರಂಭಿಕ ವಿಕೆಟ್ ಪಡೆದರೂ ವೇಗಿಗಳು ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ದೊಡ್ಡ ಗುರಿ ಇದ್ದ ಕಾರಣವೇ ಗೆಲುವು ಸಾಧ್ಯವಾಯಿತು.

ಅಮಿತ್​ ಶಾ ಅಭಿನಂದನೆ

ಲೀಗ್​ ಪಂದ್ಯದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ದಾಖಲೆ ಬರೆದ ಭಾರತ ತಂಡಕ್ಕೆ ಕೇಂದ್ರ ಗೃಹ ಸಚಿನ ಅಮಿತ್​ ಶಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಟೀಮ್​ ಇಂಡಿಯಾದ ಫೋಟೊವನ್ನು ಹಾಕಿ ‘ಎಂತಹ ಅದ್ಬುತ ಪ್ರದರ್ಶನ’ !!, ನಮ್ಮ ಕ್ರಿಕೆಟ್ ತಂಡ ವಿಶ್ವಕಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಅವರಿಗೆ ಅಭಿನಂದನೆಗಳು ಮತ್ತು ಸೆಮಿಫೈನಲ್‌ಗೆ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ನವೆಂಬರ್​ 15ರಂದು ವಾಂಖೆಡೆಯಲ್ಲಿ ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ಸವಾಲು ಎದುರಿಸಲಿದೆ.

Exit mobile version