Site icon Vistara News

IND vs NZ 1st T20: ರಾಂಚಿಯಲ್ಲಿ ಭಾರತ-ಕಿವೀಸ್​ ಮೊದಲ ಟಿ20 ಕೌತುಕ

IND VS NZ t20

ರಾಂಚಿ: ಏಕದಿನ ಸರಣಿಯಲ್ಲಿ ಪ್ರಾಬಲ್ಯ ಮೆರೆದ ಟೀಮ್​ ಇಂಡಿಯಾ(IND vs NZ 1st T20) ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಗೆ ಅಣಿಯಾಗಿದೆ. ಉಭಯ ತಂಡಗಳ ಈ ಹೋರಾಟ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ತವರು ರಾಂಚಿಯಲ್ಲಿ ನಡೆಯಲಿದೆ. ಏಕದಿನ ಸರಣಿ ಸೋಲಿಗೆ ಕಿವೀಸ್​ ಟಿ20ಯಲ್ಲಿ ಸೇಡು ತೀರಿಸಿಕೊಂಡಿತೇ ಎನ್ನುವುದು ಈ ಸರಣಿಯ ಕೌತುಕ.

ಏಕದಿನ ಸರಣಿಯಲ್ಲಿ ಸೋಲು ಕಂಡರೂ ನ್ಯೂಜಿಲ್ಯಾಂಡ್‌ ಅಷ್ಟು ಸುಲಭದಲ್ಲಿ ಬಗ್ಗದು. ಎಷ್ಟೇ ಕಠಿನ ಸವಾಲಾದರೂ ಅವರದು “ನೆವರ್‌ ಸೇ ಡೈ’ ಸಿದ್ಧಾಂತ. ಕೊನೆಯ ತನಕ ಹೋರಾಡಿ, ಎದುರಾಳಿಯನ್ನು ಬೆಚ್ಚಿಬೀಳಿಸಿ, ಅವರ ಮನೋಸ್ಥೈರ್ಯವನ್ನೆಲ್ಲ ಉಡುಗಿಸಿ ಮುನ್ನುಗ್ಗುವುದು ಕಿವೀಸ್‌ ಸ್ಟೈಲ್‌ ಆಫ್ ಕ್ರಿಕೆಟ್‌. ಆದ್ದರಿಂದ ಟಿ20 ಸರಣಿಯಲ್ಲಿ ಅವರು ತಿರುಗಿ ಬೀಳುವ ಸಾಧ್ಯತೆ ಅಧಿಕವಾಗಿದೆ.

ಕಿವೀಸ್​ ಪಾಳಯದಲ್ಲಿ ಬ್ರೇಸ್‌ವೆಲ್‌ ಮಾತ್ರವೇ ಹಿಟ್ಟರ್‌ ಅಲ್ಲ. ಫಿನ್‌ ಅಲೆನ್‌, ಡೇವನ್‌ ಕಾನ್ವೇ, ಗ್ಲೆನ್‌ ಫಿಲಿಪ್ಸ್‌, ಹೆನ್ರಿ ನಿಕೋಲ್ಸ್‌, ಡ್ಯಾರಿಲ್‌ ಮಿಚೆಲ್‌ ಕೂಟ ಡೇಂಜರಸ್​ ಬ್ಯಾಟರ್​ಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವರ ಬ್ಯಾಟ್​ ಸದ್ದು ಮಾಡುತ್ತಿಲ್ಲ ಎಂಬವುದು ಸದ್ಯದ ಚಿಂತೆ. ಒಂದೊಮ್ಮೆ ಈ ಆಟಗಾರರು ಸಿಡಿದು ನಿಂತರೆ ಇವರ ಬ್ಯಾಟಿಂಗ್​ ಆರ್ಭಟವನ್ನು ತಡೆಯಲು ಭಾರತಕ್ಕೆ ಕಷ್ಟ ಸಾಧ್ಯ. ಆದ್ದರಿಂದ ಭಾರತದ ಬೌಲರ್​ಗಳು ಇವರಿಗೆ ಹೆಚ್ಚು ಕಾಲ ಕ್ರೀಸ್​ನಲ್ಲಿ ಇರದಂತೆ ನೋಡಿಕೊಳ್ಳಬೇಕಿದೆ.

ಯುವಕರ ಮೇಲಿದೆ ಜವಾಬ್ದಾರಿ

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಂಡ್ಯ ಸಾರಥ್ಯದ ಯಂಗ್​ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದ್ದರೂ ಕಿವೀಸ್​ ಸವಾಲು ಸುಲಭವಿಲ್ಲ. ಪವರ್‌ ಪ್ಲೇಯಲ್ಲಿ ಸುಧಾರಣೆ ಕಾಣದ ಹೊರತು ಭಾರತಕ್ಕೆ ಮೇಲುಗೈ ಅಸಾಧ್ಯ ಎಂಬುದು ಸದ್ಯದ ಸ್ಥಿತಿ. ಇಲ್ಲಿ ರನ್‌ ಪೇರಿಸುವ ಜತೆಗೆ ವಿಕೆಟ್‌ ಉಳಿಸಿಕೊಳ್ಳುವ ನಿಟ್ಟಿನಲ್ಲೂ ನಮ್ಮವರ ಪ್ರಯತ್ನ ಸಾಗಬೇಕಿದೆ. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಮೊದಲಾದ ಸೀನಿಯರ್‌ಗಳನ್ನು ಬದಿಗಿರಿಸಿದ ಕಾರಣ ಇಶಾನ್‌ ಕಿಶನ್‌, ಗಿಲ್‌, ತ್ರಿಪಾಠಿ ಮೊದಲಾದವರನ್ನು ಒಳಗೊಂಡ ಯುವ ಆಟಗಾರರು ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ. ಜತೆಗೆ ಬೌಲಿಂಗ್‌ ವಿಭಾಗದಲ್ಲಿ ಅರ್ಷ್​ದೀಪ್‌ ಸಿಂಗ್​ ಲಂಕಾ ವಿರುದ್ಧ ನೋಬಾಲ್ಸ್‌ ಎಸೆದಂತೆ ಈ ಪಂದ್ಯದಲ್ಲಿ ಎಸೆಯಬಾರದು.

ಇದನ್ನೂ ಓದಿ | IND vs NZ 1st T20: ಭಾರತ-ನ್ಯೂಜಿಲ್ಯಾಂಡ್​ ಮೊದಲ ಟಿ20 ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ

Exit mobile version