Site icon Vistara News

IND VS NZ | ಕಿವೀಸ್​ ವಿರುದ್ಧದ ದ್ವಿತೀಯ ಏಕದಿನಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ind vs nz pant

ಹ್ಯಾಮಿಲ್ಟನ್: ಸತತ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರುವ ಟೀಮ್​ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್​ ಅವರನ್ನು ನ್ಯೂಜಿಲ್ಯಾಂಡ್(IND VS NZ)​ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಕೈ ಬಿಟ್ಟು ಆಲ್​ರೌಂಡರ್​ ದೀಪಕ್​ ಹೂಡಾ ಅವರನ್ನು ಆಡಿಸುವ ಸಾಧ್ಯತೆ ಇದೆ.

ಮೊದಲನೇ ಪಂದ್ಯದಲ್ಲಿ ಭಾರತ ತಂಡ 5 ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ಹಿನ್ನಡೆ ಅನುಭವಿಸಿತ್ತು. ವೈಫಲ್ಯ ಅನುಭವಿಸಿರುವ ರಿಷಭ್‌ ಪಂತ್‌ ಅವರ ಬದಲು ಭಾರತ ತಂಡ ಎರಡನೇ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ದೀಪಕ್ ಹೂಡ ಅವರನ್ನು ಕಣಕ್ಕೆ ಇಳಿಸಿದರೆ ಒಳಿತು. ಏಕೆಂದರೆ ಇವರು 10 ಓವರ್‌ಗಳ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಲಿದ್ದಾರೆ.

ಒಂದೊಮ್ಮ ರಿಷಭ್‌ ಪಂತ್ ಅವರನ್ನು ಆಡುವ ಬಳಗದಿಂದ ಕೈಬಿಟ್ಟರೆ ಆಗ ಸಂಜು ಸ್ಯಾಮ್ಸನ್‌ಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನೀಡಬಹುದು. ಕಳೆದ ಟಿ20 ಸರಣಿಯಲ್ಲಿಯ ಜತೆಗೆ ಆಕ್ಲೆಂಡ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿಯೂ ಪಂತ್​ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಆದರೂ ಅವರಿಗೆ ಮತ್ತೆ ಅವಕಾಶ ನೀಡುತ್ತಿರುವ ಬಗ್ಗೆ ಈಗಾಗಲೇ ಟೀಮ್​ ಮ್ಯಾನೇಜ್​ಮೆಂಟ್​ ಮೇಲೆ ಆರೋಪಗಳು ಕೇಳಿಬಂದಿದೆ. ಆದ್ದರಿಂದ ಪಂತ್​ ಅವರನ್ನು ಈ ಪಂದ್ಯದಲ್ಲಿ ಕೈಬಿಟ್ಟು ಹೂಡಾ ಅಥವಾ ವೇಗಿ ದೀಪಕ್​ ಚಾಹರ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಸಂಭಾವ್ಯ ತಂಡಗಳು

ಭಾರತ: ಶುಭಮನ್ ಗಿಲ್‌, ಶಿಖರ್‌ ಧವನ್‌ (ನಾಯಕ), ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್ ಯಾದವ್‌, ರಿಷಭ್‌ ಪಂತ್‌/ದೀಪಕ್‌ ಹೂಡ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ಶಾರ್ದುಲ್‌ ಠಾಕೂರ್, ಅರ್ಷದೀಪ್‌ ಸಿಂಗ್, ಉಮ್ರಾನ್‌ ಮಲಿಕ್‌, ಯಜುವೇಂದ್ರ ಚಹಲ್.

ನ್ಯೂಜಿಲ್ಯಾಂಡ್​: ಫಿನ್ ಅಲೆನ್, ಡೆವೋನ್ ಕಾನ್ವೇ, ಕೇನ್ ವಿಲಿಯಮ್ಸನ್(ನಾಯಕ), ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್, ಗ್ಲೆನ್‌ ಫಿಲಿಪ್ಸ್‌, ಮಿಚೆಲ್ ಸ್ಯಾಂಟ್ನರ್, ಆಡಂ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್.

ಇದನ್ನೂ ಓದಿ | IND VS NZ | ಕಿವೀಸ್​ ವಿರುದ್ಧ ದ್ವಿತೀಯ ಏಕ ದಿನ; ಧವನ್​ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

Exit mobile version