Site icon Vistara News

IND VS NZ: ಟೀಮ್​ ಇಂಡಿಯಾ ಆಟಗಾರರ ಫುಡ್​ ಮೆನು ಪರಿಚಯಿಸಿದ ಯಜುವೇಂದ್ರ ಚಹಲ್

yajurveda chahal

ರಾಯ್​ಪುರ: ನ್ಯೂಜಿಲ್ಯಾಂಡ್​(IND VS NZ) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಗೆಲುವು ಸಾಧಿಸಿ ಸಂತಸದ ಅಲೆಯಲ್ಲಿ ತೇಲುತ್ತಿದೆ. ಆದರೆ ಪಂದ್ಯದ ಬಳಿಕ ಟೀಮ್​ ಇಂಡಿಯಾ ಆಟಗಾರರು ಸೇವಿಸುವ ಫುಡ್​ ಮೆನುವಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೀಮ್​ ಇಂಡಿಯಾದ ಸ್ಪಿನ್ನರ್​ ಯಜುವೇಂದ್ರ ಚಹಲ್ ಅವರು ತಮ್ಮ ಚಹಲ್​ ಟೀವಿಯ ಕಾರ್ಯಕ್ರಮದ ಭಾಗವಾಗಿ ಆಟಗಾರರು ಸೇವಿಸಲಿರುವ ಫುಟ್​ ಮೆನುವಿನ ಪರಿಚಯ ಮಾಡಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಪಂದ್ಯ ಮುಕ್ತಾಯದ ಬಳಿಕ ಚಹಲ್ ಅವರು ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿ ಮೊದಲಿಗೆ ಆಟಗಾರರು ಬಳಸಿದ ಕಿಟ್ ಬ್ಯಾಗ್‌ಗಳು, ಡ್ರೆಸ್ಸಿಂಗ್ ಕೋಣೆಯನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಇದಾದ ನಂತರ ಫುಟ್ ಸೆಕ್ಷನ್​ಗೆ ತೆರಳಿ ಆಟಗಾರರಿಗೆ ಏನೆಲ್ಲಾ ಮೆನು ಇದೆ ಎಂಬುದನ್ನು ತೋರಿಸಿದ್ದಾರೆ.

“ನಾವು ನಿಮ್ಮನ್ನು ಫುಡ್ ಸೆಕ್ಷನ್​ಗೆ ಕರೆದೊಯ್ಯುತ್ತಿದ್ದೇನೆ. ನಾವು ಏನು ತಿನ್ನುತ್ತೇವೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ಇದೀಗ ನಮ್ಮ ಫುಡ್​​​ ಮೆನುವಿನಲ್ಲಿ ನಾನ್, ಸ್ಟೀಮ್ ರೈಸ್, ಜೀರಾ ರೈಸ್, ದಾಲ್ ಟೊಮ್ಯಾಟೊ, ಆಲೂಗಡ್ಡೆ ಜೀರಾ, ಪನೀರ್ ಟೊಮೆಟೊ, ಗ್ರೀನ್ ವೆಜಿಟೇಬಲ್ಸ್, ಪಾಸ್ಟಾ ಆಂಡ್ ಮಿಕ್ಸ್ ಸಾಸ್, ಹಕ್ಕಾ ನೂಡಲ್ಸ್ ಇದೆ” ಎಂದು ಚಹಲ್​ ವಿಡಿಯೊದಲ್ಲಿ ತೋರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ತಮಾಷೆ ಮಾಡಿದ ರೋಹಿತ್​

ಡ್ರೆಸಿಂಗ್ಸ್​ ರೋಮ್​ನಲ್ಲಿ ಆಟಗಾರರಿಗೆ ಏನೆಲ್ಲ ವ್ಯವಸ್ಥೆ ಇರಲಿದೆ ಎನ್ನುವ ವಿಚಾರವನ್ನು ಹೇಳುತ್ತಿದ್ದ ವೇಳೆ ಇಲ್ಲಿಗೆ ಆಗಮಿಸಿದ ನಾಯಕ ರೋಹಿತ್​ ಶರ್ಮಾ ಚಹಲ್ ಜತೆ ತಮಾಷೆ ಮಾಡಿದ್ದಾರೆ. “ನಿಮಗೆ ಉತ್ತಮ ಭವಿಷ್ಯವಿದೆ” ಎಂದು ಗೇಲಿ ಮಾಡಿದ್ದಾರೆ.

ಇದನ್ನೂ ಓದಿ | IND VS NZ: ಭಾರತ ತಂಡವನ್ನು ನೋಡಿ ಕಲಿಯಿರಿ; ಪಾಕ್​ ಕ್ರಿಕೆಟ್​ ತಂಡಕ್ಕೆ ರಮೀಜ್​ ರಾಜಾ ಖಡಕ್​ ಸಂದೇಶ

Exit mobile version